ಲಾಫಿಂಗ್ ಬುದ್ಧ ಚಿತ್ರದ ಮೂಲಕ ಪ್ರಮೋದ್ ಶೆಟ್ಟಿ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಜೊತೆ ನಟ ದಿಗಂತ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಪ್ರಮೋದ್ ಶೆಟ್ಟಿ ಚಿತ್ರ ಸಕ್ಸಸ್ ಆಗಿರುವ ಖುಷಿಯಲ್ಲಿದ್ದಾರೆ. ಈ ಚಿತ್ರದ ಪ್ರಮೋಶನ್ ಹಾಗೂ ರಿಲೀಸ್ ವೇಳೆ ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರಮೋದ್ ಶೆಟ್ಟಿ ಉತ್ತರಿಸಿದ್ದಾರೆ.
ಗಿಡ ಬೆಳೆಸೋ ತನಕ ಮಾತ್ರ ನಮ್ ಕೆಲಸ.. ಬೆಳೆದ್ಮೇಲೆ ಅದು ಅದ್ರ ಕೆಲಸ ಅಲ್ವಾ? ರೆಂಬೆ ಹಿಂಗ್ ಹೋಗ್ಬೇಕಾ ಹಂಗೆ ಹೋಗ್ಬೇಕಾ ಅಂತ ನಾನು ಕಟ್ ಮಾಡಿ ಮುರಿದು ಎಲ್ಲಾ ಹಾಗೇ ಹೀಗೆ ಅಂತೆಲ್ಲಾ ಮಾಡೋಕೆ ಆಗಲ್ಲ. ಗಿಡ ಬೆಳೆಸೊದು ನಮ್ ಕೆಲಸ, ಬೆಳೆದ್ಮೇಲೆ ಅದು ಹೆಂಗ್ ಬೇಕಾದ್ರೂ ತಿರುಗಿಕೊಳ್ಳುತ್ತೆ, ಶೀ ಈಸ್ ಬ್ರಿಲಿಯಂಟ್ ಆಕ್ಟ್ರೆಸ್, ನಾವು ಕಿರಿಕ್ ಪಾರ್ಟಿ ಮಾಡಿದಾಗ್ಲೇ ಅವ್ರ ಫಸ್ಟ್ ಸಿನಿಮಾ ಆದ್ರೂ ಶೀ ಹಾಸ್ ಗಿವನ್ ಹರ್ ದಿ ಬೆಸ್ಟ್.
ರಶ್ಮಿಕಾ ಮಂದಣ್ಣ ಕೆಲವು ಕಡೆ ನಂಗೆ ಕನ್ನಡ ಗೊತ್ತಿಲ್ಲ, ನಂಗೆ ಕನ್ನಡ ಬರಲ್ಲ ಅಂತ ಹೇಳೋದು ತಪ್ಪು. ಅವೆಲ್ಲಾ ತೀರಾ ಒಂಥರ.. ಅದಕ್ಕೆಲ್ಲಾ ನಾವು ಏನ್ ಹೇಳ್ಬಹುದು? ಅದು, ಮಾಡಿದ್ದುಣ್ಣೋ ಮಾರಾಯ ಆಗುತ್ತೆ ಅಷ್ಟೇ. ಅದ್ರ ಬಗ್ಗೆ ನಾನೇನೂ ಹೇಳೋಕಾಗಲ್ಲ, ಇರೋದೇ ಕರ್ನಾಟಕದಲ್ಲಿ ಅಲ್ವಾ? ಅದೆಷ್ಟೇ ಕನ್ನಡ ಬರಲ್ಲ ಅಂದ್ರೂ ಇರೋದು ಕರ್ನಾಟಕದಲ್ಲೇ ಅಲ್ವಾ? ಅದೇ ಮಡಿಕೇರಿಗೆ ವಾಪಸ್ ಬರ್ಬೇಕು ಅಲ್ವಾ?
ಇದನ್ನೂ ಓದಿ : ಬೆಂಗಳೂರು : ಮ್ಯೂಸಿಕ್ ಕನ್ಸರ್ಟ್ ನಿಲ್ಲಿಸಿದ್ದಕ್ಕೆ ಪುಂಡರಿಂದ ದಾಂಧಲೆ – ಆಯೋಜಕರ ವಿರುದ್ಧ ಪ್ರಕರಣ ದಾಖಲು..!