Download Our App

Follow us

Home » ಸಿನಿಮಾ » ಚೇತನ್ ಚಂದ್ರ ನಾಯಕನಾಗಿ ನಟಿಸಿರುವ ‘ಪ್ರಭುತ್ವ’ ಸಿನಿಮಾ ನ.22ಕ್ಕೆ ತೆರೆಗೆ..!

ಚೇತನ್ ಚಂದ್ರ ನಾಯಕನಾಗಿ ನಟಿಸಿರುವ ‘ಪ್ರಭುತ್ವ’ ಸಿನಿಮಾ ನ.22ಕ್ಕೆ ತೆರೆಗೆ..!

ಚೇತನ್ ಚಂದ್ರ ನಾಯಕನಾಗಿ ನಟಿಸಿರುವ ಮತದಾನದ ಮಹತ್ವ ತಿಳಿಸುವ “ಪ್ರಭುತ್ವ” ಸಿನಿಮಾ ನವೆಂಬರ್.22ರಂದು ತೆರೆ ಕಾಣುತ್ತಿದೆ. ಉತ್ತಮ ಕಂಟೆಂಟ್​​ವುಳ್ಳ ಈ ಚಿತ್ರವನ್ನು ರವಿರಾಜ್ ಎಸ್ ಕುಮಾರ್ ನಿರ್ಮಿಸಿದ್ದು, ಮೇಘಡಹಳ್ಳಿ ಶಿವಕುಮಾರ್ ಕಥೆ ಬರೆದಿದ್ದಾರೆ.

ಪ್ರತಿಯೊಬ್ಬ ಮತದಾರರು ಈ ಚಿತ್ರವನ್ನು ನೋಡಬೇಕು, ಮತದಾನ ಅಮೂಲ್ಯವಾದ್ದದ್ದು. ಹಾಗಾಗಿ ಮತದಾನವನ್ನು ಮಾರಾಟ ಮಾಡಿಕೊಳ್ಳಬಾರದು. ಈ ರೀತಿ ಮತದಾನದ ಮಹತ್ವದ ಬಗ್ಗೆ ತಿಳಿಸುವ ಚಿತ್ರವಿದು. ಈ ಚಿತ್ರಕ್ಕೆ ನಾನೇ ಕಥೆ ಬರೆದಿದ್ದೇನೆ. ನನ್ನ ಮಗ ರವಿರಾಜ್ ಎಸ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ನವೆಂಬರ್ 22 ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ದೀಪಕ್ ಗಂಗಾಧರ್ ಅವರು ವಿತರಣೆ ಮಾಡುತ್ತಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಮೇಘಡಹಳ್ಳಿ ಶಿವಕುಮಾರ್ ಹೇಳಿದರು.

ಚಿತ್ರತಂಡದ ಸಹಕಾರದಿಂದ “ಪ್ರಭುತ್ವ” ಚೆನ್ನಾಗಿ ಮೂಡಿಬಂದಿದೆ. ದಯವಿಟ್ಟು ಎಲ್ಲರೂ ನಮ್ಮ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ ಎಂದು ನಿರ್ಮಾಪಕ ರವಿರಾಜ್ ಎಸ್ ಕುಮಾರ್ ತಿಳಿಸಿದರು. ನಾನು ಚಿತ್ರ ನೋಡಿದೆ, ತುಂಬಾ ಚೆನ್ನಾಗಿದೆ. 80ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ವಿತರಕ ದೀಪಕ್ ಗಂಗಾಧರ್ ಹೇಳಿದರು.

ಇದು ನನ್ನ ಹನ್ನೆರಡನೇ ಸಿನಿಮಾ. ಬಹಳ ದಿನಗಳ ನಂತರ ನಿಮ್ಮ ಮುಂದೆ ಬರುತ್ತಿದ್ದೇನೆ. ಮೇಘಡಹಳ್ಳಿ ಡಾ||ಶಿವಕುಮಾರ್ ಅವರು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಒಳ್ಳೆಯ ಕಥೆ ಬರೆದಿದ್ದಾರೆ. ತಂತ್ರಜ್ಞರ ಕಾರ್ಯವೈಖರಿ ಹಾಗೂ ಎಲ್ಲಾ ಕಲಾವಿದರ ಅಭಿನಯ ಅದ್ಭುತವಾಗಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಾಯಕ ಚೇತನ್ ಚಂದ್ರ.

ಚಿತ್ರದಲ್ಲಿ ಅಭಿನಯಿಸಿರುವ ಆದಿ ಲೋಕೇಶ್, ವಿಜಯ್ ಚೆಂಡೂರ್, ಡ್ಯಾನಿ, ಸಂದೀಪ್, ಚಿತ್ರಕಥೆ, ಸಂಭಾಷಣೆ ಜೊತೆಗೆ ಸಹ-ನಿರ್ದೇಶನ ಮಾಡಿರುವ ವಿನಯ್ ಮೂರ್ತಿ, ಛಾಯಾಗ್ರಾಹಕ ಕೆ.ಎಸ್ ಚಂದ್ರಶೇಖರ್ ಮುಂತಾದವರು “ಪ್ರಭುತ್ವ” ಚಿತ್ರದ ಕುರಿತು ‌ಮಾತನಾಡಿದರು. ಪಾವನ ಈ ಚಿತ್ರದ ನಾಯಕಿಯಾಗಿ ನಟಿಸಿದ್ದು, ಖ್ಯಾತ ನಟ ನಾಸರ್, ಶರತ್ ಲೋಹಿತಾಶ್ವ, ಅಂಬಿಕಾ, ರೂಪಾದೇವಿ, ರಾಜೇಶ್ ನಟರಂಗ, ಅವಿನಾಶ್ ಸೇರಿದಂತೆ ಅನೇಕ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಎಮಿಲ್ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ : ಅರಕೆರೆಯಲ್ಲಿ ಆರಂಭವಾಯಿತು ನಟ ಕಮಲ್ ಸಾರಥ್ಯದ “MYTH FX” ಸ್ಟುಡಿಯೋ..!

Leave a Comment

DG Ad

RELATED LATEST NEWS

Top Headlines

ನಟ ದರ್ಶನ್​ಗೆ ನಾಳೆ ನಿರ್ಣಾಯಕ ದಿನ – ಏನಾಗಲಿದೆ ಬೇಲ್ ಭವಿಷ್ಯ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿರುವ ನಟ ದರ್ಶನ್​​ಗೆ ನಾಳೆ ನಿರ್ಣಾಯಕ ದಿನವಾಗಿದೆ. ಮಧ್ಯಂತರ ಜಾಮೀನು ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ ಸದ್ಯ

Live Cricket

Add Your Heading Text Here