ಬೆಂಗಳೂರು : ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಇಂದು ಬೆಳಗ್ಗೆ ಕಾಮಾಕ್ಷಿಪಾಳ್ಯ ಠಾಣೆ ASI ಶಿವಶಂಕರ್ ಚಾರಿ ಅವರು ಎಂದಿನಂತೆ ಡ್ಯೂಟಿಗೆ ಬಂದಿದ್ದರು.
ನಂತರ ರೌಂಡ್ಸ್ ವೇಳೆ ASIಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ತಕ್ಷಣವೇ ಶಿವಶಂಕರ್ ಚಾರಿ ಅವರು ಸ್ಥಳೀಯ ಆಸ್ಪತ್ರೆಗೆ ತೆರಳಿದರು. ಆದರೆ ಹೃದಯಾಘಾತದಿಂದ ASI ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 1999ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದ ಶಿವಶಂಕರ್ ಚಾರಿ ಅವರು ಒಂದೂವರೆ ವರ್ಷದಿಂದ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇದನ್ನೂ ಓದಿ : ಬಿಗ್ಬಾಸ್ ಮನೆಯಲ್ಲಿ ಶುರುವಾಯ್ತಾ ನಾಮಿನೇಷನ್ ಗುಂಪುಗಾರಿಕೆ?
Post Views: 188