ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮತ್ತೆ ವರ್ಗಾವಣೆ ಪರ್ವ ಶುರುವಾಗಿದ್ದು, ಇಂದು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳ 11 ಡಿವೈಎಸ್‌ಪಿ ಹಾಗೂ 41 ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ 11 ಡಿವೈಎಸ್‌ಪಿ ಹಾಗೂ 41 ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ವಿವಿಧೆಡೆ ವರ್ಗಾಯಿಸಲಾಗಿದೆ. ಡಿವೈಎಸ್‌ಪಿಗಳಾದ ಜ್ಯೋತಿಬಾ ನಿಕ್ಕಂ ಅವರನ್ನು ಬೆಳಗಾವಿ ನಗರದ ಸಂಚಾರ ಉಪವಿಭಾಗಕ್ಕೆ ವರ್ಗಾಯಿಸಿದರೆ, ಮಂಜುನಾಥ್ ಜಿ ಅವರನ್ನು ತುಮಕೂರು ಜಿಲ್ಲೆಯ ಮಧುಗಿರಿ ಉಪವಿಭಾಗಕ್ಕೆ ವರ್ಗಾಯಿಸಲಾಗಿದೆ. ಇನ್ನು ಸುರಜ್ ಪಿ.ಎ, ಡಿಎನ್ ಸುನಾದ್, ಕುಮಾರಸ್ವಾಮಿ, ಗಜಾನನ ವಮನ ಸುತಾರ, ಸಂಜೀವ್ ಕುಮಾರ್, ಭೀಮರಾವ್ ಬಿ, ಆನಂದ್ ಸಿ.ಆರ್, ದೀಪಕ್ ಸಿ.ವಿ, ಹೆಚ್.ಡಿ ಕುಲಕರ್ಣಿ ಸೇರಿ 11 ಡಿವೈಎಸ್‌ಪಿಗಳನ್ನು ವರ್ಗಾಯಿಸಲಾಗಿದೆ.
41 ಪೊಲೀಸ್ ಇನ್ಸ್ಪೆಕ್ಟರ್ಗಳ ಪೈಕಿ ವಿಕಾಸ್ ಎಸ್ ಅವರು ರಾಮನಗರ ಜಿಲ್ಲೆಯ ಕನ್ಕಪುರ ವೃತ್ತಕ್ಕೆ ವರ್ಗಾವಣೆಗೊಂಡರೆ, ವಿಕ್ಟರ್ ಸೈಮನ್ ಬೆಂಗಳೂರಿನ ಹೆಬ್ಬಳಗೋಡಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ : ಮಗನ ಮುದ್ದಾದ ಫೋಟೋ ರಿವೀಲ್ ಮಾಡಿದ ನಟಿ ಪ್ರಣಿತಾ ಸುಭಾಷ್..!