ದೇಶದ ಮೊದಲ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ. ಗುಜರಾತ್ನ ಭುಜ್-ಅಹ್ಮದಾಬಾದ್ ನಡುವೆ ವಂದೇ ಭಾರತ್ ಮೆಟ್ರೋ ಸಂಚಾರ ಮಾಡಲಿದೆ. 100-250 ಕಿಲೋ ಮೀಟರ್ ಅಂತರ ಇರುವ ನಗರಗಳ ಮಧ್ಯೆ ವಂದೇ ಭಾರತ್ ಮೆಟ್ರೋ ರೈಲುಗಳು ಸಂಚಾರ ಮಾಡಲಿವೆ. ವಿಶೇಷ ಸೀಟ್ ಸೇರಿದಂತೆ ಹಲವು ಹೈಟೆಕ್ ಸೌಲಭ್ಯಗಳು ವಂದೇ ಭಾರತ್ ಮೆಟ್ರೋದಲ್ಲಿ ಇರಲಿವೆ.
ಇನ್ನು ಕರ್ನಾಟಕದಲ್ಲಿ ವಂದೇ ಮೆಟ್ರೋ ತಯಾರಿ ನಡೆದಿರೋ ವಿಶೇಷ. 12 ಕೋಚ್ ಇರುವ ಈ ರೈಲು ಗಂಟೆಗೆ 120 ಕಿಮೀ ವೇಗದಲ್ಲಿ ಸಂಚರಿಸುತ್ತದೆ. 1150 ಪ್ರಯಾಣಿಕರು ಕುಳಿತು ಪ್ರಯಾಣ ಮಾಡಬಹುದು. ಸ್ಲೈಡಿಂಗ್ ಡೋರ್, ಮೆಟ್ರೋ ರೀತಿ ಆರಾಮದಾಯಕ ಆಸನ ವ್ಯವಸ್ಥೆ ಮತ್ತು ಎಸಿ ಬೋಗಿಗಳೂ ಇರಲಿವೆ.
ಇಂದು 359 ಕಿಲೋ ಮೀಟರ್ ಅಂತರ ಇರುವ ಭುಜ್-ಅಹಮದಾಬಾದ್ ನಡುವೆ ವಂದೇ ಭಾರತ್ ಮೆಟ್ರೋಗೆ ಮೋದಿ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್ಪ್ರೆಸ್ಗೂ ಮೋದಿ ಇಂದೇ ಚಾಲನೆ ನೀಡಲಿದ್ದಾರೆ. ಇದು ಕರ್ನಾಟಕದ ಪಾಲಿಗೆ 9ನೇ ವಂದೇ ಭಾರತ್ ಎಕ್ಸ್ಪ್ರೆಸ್ ಆಗಲಿದೆ. ವಾರಕ್ಕೆ ಮೂರು ದಿನ ಸಂಚರಿಸುವ ಈ ರೈಲಿನಲ್ಲಿ ಪುಣೆಗೆ 1530 ರೂಪಾಯಿ ಟಿಕೆಟ್ ಇರಲಿದೆ. ಬೆಳಗಾವಿ ಮಾರ್ಗವಾಗಿ ಪುಣೆಗೆ ಈ ರೈಲು ಸಂಚಾರ ಮಾಡಲಿದೆ.
ರೈಲು ಸಮಯ :
- ರೈಲು ಸಂಖ್ಯೆ 20669: ಎಸ್‌ಎಸ್‌ಎಸ್ ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಸೆಪ್ಟೆಂಬರ್ 18 ರಿಂದ ಜಾರಿಗೆ ಬರುವಂತೆ ಪ್ರತಿ (ಬುಧವಾರ, ಶುಕ್ರವಾರ ಮತ್ತು ಭಾನುವಾರ) ಹುಬ್ಬಳ್ಳಿಯಿಂದ 05.00 ಗಂಟೆಗೆ ಹೊರಟು ಅದೇ ದಿನ ಮಧ್ಯಾಹ್ನ 1.30ಕ್ಕೆ ಪುಣೆ ತಲುಪುತ್ತದೆ.
- ರೈಲು ಸಂಖ್ಯೆ 20670: ಪುಣೆ-ಎಸ್‌ಎಸ್‌ಎಸ್ ಹುಬ್ಬಳ್ಳಿ ವಂದೇ ಭಾರತ್ ರೈಲು ಸೆಪ್ಟೆಂಬರ್ 19 ರಿಂದ ಜಾರಿಗೆ ಬರುವಂತೆ ಪ್ರತಿ (ಗುರುವಾರ, ಶನಿವಾರ ಮತ್ತು ಸೋಮವಾರ) ಪುಣೆಯಿಂದ ಮಧ್ಯಾಹ್ನ 2.15ಕ್ಕೆ ಹೊರಟು ಅದೇ ದಿನ ರಾತ್ರಿ 10.45ಕ್ಕೆ ಹುಬ್ಬಳ್ಳಿ ತಲುಪಲಿದೆ.
- ಇಂದು (ಸೆ.16) 4.15ಕ್ಕೆ ಪುಣೆಯಿಂದ ಹೊರಟು ರಾತ್ರಿ 11.40ಕ್ಕೆ ಹುಬ್ಬಳ್ಳಿ ತಲುಪುತ್ತದೆ.
ಇದನ್ನೂ ಓದಿ : ಬೆಂಗಳೂರಿನ ವಿದ್ಯಾರ್ಥಿ ಕೇರಳದಲ್ಲಿ ನಿಫಾ ವೈರಸ್ಗೆ ಬಲಿ – ರಾಜ್ಯದಲ್ಲಿ ಹೆಚ್ಚಿದ ಆತಂಕ..!