Download Our App

Follow us

Home » ರಾಜಕೀಯ » ಹರಿಯಾಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಪ್ರಧಾನಿ ಮೋದಿ..!

ಹರಿಯಾಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಪ್ರಧಾನಿ ಮೋದಿ..!

ಹರಿಯಾಣ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಕರ್ನಾಟಕದ ಮುಡಾ ಪ್ರಕರಣದ ಪ್ರಸ್ತಾಪವಾಗಿದೆ‌. ಸೋನಿಪತ್​​ನಲ್ಲಿ ಇಂದು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಮುಡಾ ಹಗರಣವನ್ನು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್​​ ಅಂದ್ರೆ ಭ್ರಷ್ಟಾಚಾರ, ಕಾಂಗ್ರೆಸ್​ ಸರ್ಕಾರ ಇದ್ದಲ್ಲಿ ಕರಪ್ಷನ್​ ಇದ್ದೇ ಇರುತ್ತೆ. ಕರ್ನಾಟಕದ ಸಿಎಂ ಭೂ ಹಗರಣದಲ್ಲಿ ಸಿಲುಕಿದ್ದಾರೆ, ಸರ್ಕಾರ ರಚನೆಯಾಗಿ 2 ವರ್ಷದಲ್ಲೇ ಹಗರಣದಲ್ಲಿ ಮುಳುಗಿದೆ. ಕರ್ನಾಟಕದಲ್ಲಿ ಯಾವ ಪರಿಸ್ಥಿತಿ ನೋಡಿ, ಹೈಕೋರ್ಟ್​ ತನಿಖೆಗೆ ಆದೇಶಿಸಿ ಸಿಎಂ ವಿರುದ್ಧ ಚಾಟಿ ಬೀಸಿದೆ, ಹೈಕಮಾಂಡ್‌ ಭ್ರಷ್ಟವಾದಾಗ ಕೆಳಗಿದ್ದವರೂ ಲೂಟಿ ಮಾಡ್ತಾರೆ ಎಂದು ಕಾಂಗ್ರೆಸ್​ ನಾಯಕರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿ ಕಾರಿದ್ದಾರೆ.

ಕಾಂಗ್ರೆಸ್ ದಲಿತರು, ಹಿಂದುಳಿದ ಜಾತಿಗಳಿಗೆ ಸೇರಿದ ಜನರಿಗೆ ನಿರಂತರವಾಗಿ ಮೋಸ ಮಾಡುತ್ತಾ ಬಂದಿದೆ. ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟವಿದೆ. ಇದು ಈ ಹಿಂದೆ ಮಾಡಿರುವ ಪಾಪದ ಫಲ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಹರಿಯಾಣದಲ್ಲಿ ದಲಿತರಿಗೆ ಅನ್ಯಾಯವಾಗದ ಒಂದು ವರ್ಷವೂ ಇರಲಿಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ : MLA ಸ್ಥಾನದಿಂದ ಮುನಿರತ್ನರನ್ನು ಉಚ್ಛಾಟನೆ ಮಾಡಿ – ಅಂಬೇಡ್ಕರ್​​​​ ಸೇನೆ ರಾಜ್ಯಾಧ್ಯಕ್ಷ ಡಾ.ಪಿ ಮೂರ್ತಿ ಆಗ್ರಹ..!

Leave a Comment

DG Ad

RELATED LATEST NEWS

Top Headlines

ವೇದಿಕೆಯಲ್ಲಿ ಕಣ್ಣೀರಿಟ್ಟ ಸಮಂತಾರನ್ನು ಅಪ್ಪಿಕೊಂಡು ಸಮಾಧಾನಿಸಿದ ಆಲಿಯಾ..!

ಹೈದರಾಬಾದ್ : ಬಾಲಿವುಡ್​ ನಟಿ ಆಲಿಯಾ ಭಟ್ ಹಾಗೂ ಸಮಂತಾ ರುತ್ ಪ್ರಭು ಹೈದರಾಬಾದ್​ನಲ್ಲಿ ನಿನ್ನೆ ನಡೆದ ಜಿಗ್ರಾ ಸಿನಿಮಾದ ಗ್ರ್ಯಾಂಡ್ ಪ್ರಿ ರಿಲೀಸ್ ಇವೆಂಟ್​ನಲ್ಲಿ ಒಟ್ಟಿಗೆ

Live Cricket

Add Your Heading Text Here