Download Our App

Follow us

Home » ಅಪರಾಧ » ಕೈಮುಗಿದು ಬೇಡಿಕೊಳ್ತಿರುವ ರೇಣುಕಾಸ್ವಾಮಿ – ದರ್ಶನ್​​ ಗ್ಯಾಂಗ್​ನ ಕ್ರೂರ ಕೃತ್ಯದ ಫೋಟೋ ವೈರಲ್..!

ಕೈಮುಗಿದು ಬೇಡಿಕೊಳ್ತಿರುವ ರೇಣುಕಾಸ್ವಾಮಿ – ದರ್ಶನ್​​ ಗ್ಯಾಂಗ್​ನ ಕ್ರೂರ ಕೃತ್ಯದ ಫೋಟೋ ವೈರಲ್..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬೆಂಗಳೂರು ಪೊಲೀಸರು ತನಿಖೆ ಮುಕ್ತಾಯಗೊಳಿಸಿ ಜಾರ್ಜ್‌ಶೀಟ್​​ನ್ನು ಸಲ್ಲಿಕೆ ಮಾಡಿದ್ದಾರೆ. ಇನ್ನು ಜಾರ್ಜ್‌ಶೀಟ್ ಆಧಾರದ ಮೇಲೆ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಇದೀಗ ಡಿ ಗ್ಯಾಂಗ್​​ನ​​ ರಾಕ್ಷಸ ಕೃತ್ಯದ ಫೋಟೋ ​ರಿಟ್ರೀವ್ ಮಾಡಿದ ಬಳಿಕ ಪೊಲೀಸರ ಕೈ ಸೇರಿದೆ ಎನ್ನಲಾಗುತ್ತಿದೆ. ಸದ್ಯ ಆ ಫೋಟೋಗಳು BTVಗೂ ಲಭ್ಯವಾಗಿದೆ.

ರೇಣುಕಾಸ್ವಾಮಿ ಬೇಡಿಕೊಂಡರೂ ಬಿಡದೇ ಡಿ ಗ್ಯಾಂಗ್​​​ ಹಲ್ಲೆ ಮಾಡಿರುವ ಕ್ರೂರ ಕೃತ್ಯದ ಫೋಟೋ ವೈರಲ್​​​ ಆಗಿದೆ. ಆ ಎರಡು ಫೋಟೋದಲ್ಲಿ ರಾಕ್ಷಸ ದರ್ಶನವಾಗಿದೆ. ಒಂದು ಫೋಟೋದಲ್ಲಿ ರೇಣುಕಾಸ್ವಾಮಿ ಶೆಡ್​ನ ಹುಲ್ಲಿನ ನೆಲದ ಮೇಲೆ ಹಲ್ಲೆಯಿಂದಾಗಿ ನಿತ್ರಾಣಗೊಂಡು ಬಿದ್ದಿದ್ದು, ನೀಲಿ ಬಣ್ಣದ ಜೀನ್ಸ್​ ಪ್ಯಾಂಟ್​, ವೈಟ್​ ಬನಿಯನ್​ನಲ್ಲಿದ್ದಾರೆ. ಇದರಲ್ಲಿ ರೇಣುಕಾ ಕೈ ಮೇಲೆ ಗಾಯದ ಗುರುತಿದ್ದು, ಪಕ್ಕದಲ್ಲೇ KA-51, AF-0454 ನಂಬರ್​​ನ ಲಾರಿ ನಿಂತಿದೆ.

ಎರಡನೇ ಫೋಟೋ ನೋಡಿದ್ರೆ ಎಂಥವ್ರ ಕಣ್ಣಲ್ಲೂ ನೀರು ಬರುತ್ತೆ. ಬೇಡ..ದಮ್ಮಯ್ಯಾ ಬಿಟ್​ ಬಿಡಿ ಎಂದು ರೇಣುಕಾಸ್ವಾಮಿ ಬೇಡ್ತಿದ್ದಾರೆ. ಆದರೂ ಹಂತಕರು ಬಿಡದೇ ಬಟ್ಟೆ ಕಳಚಿ ಬೆತ್ತಲು ಮಾಡಿ ಬಡಿದಿದ್ದು, ಇದರಲ್ಲಿ ರೇಣುಕಾಸ್ವಾಮಿ ಕಣ್ಣಿನ ಮೇಲೆ ಗಾಯಗಳಾಗಿವೆ. ಎರಡು ಕರುಳು ಹಿಂಡೋ ಫೋಟೋಗಳು BTVಗೆ ಲಭ್ಯವಾಗಿದೆ.

ಇದನ್ನೂ ಓದಿ : ಸಿಟಿ ಸಿವಿಲ್ ಕೋರ್ಟ್​ನಲ್ಲಿ ದರ್ಶನ್ ಜಾಮೀನು ಅರ್ಜಿ ಸಲ್ಲಿಸಲು ತಯಾರಿ..!

Leave a Comment

DG Ad

RELATED LATEST NEWS

Top Headlines

ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ಬಿಗ್​ ರಿಲೀಫ್ ​​​- ಸುಪ್ರೀಂ ಕೋರ್ಟ್​ನಿಂದ ಬೇಲ್​ ಮಂಜೂರು..!

ನವದೆಹಲಿ : ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಕೊನೆಗೂ ಜಾಮೀನು ಸಿಕ್ಕಿದೆ. ಅಬಕಾರಿ ನೀತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಶುಕ್ರವಾರ ಅವರಿಗೆ ಬೇಲ್‌ ಮಂಜೂರು ಮಾಡಿದೆ. ಇದರಿಂದ

Live Cricket

Add Your Heading Text Here