Download Our App

Follow us

Home » ಸಿನಿಮಾ » ಅಭಿಮಾನಿ ದೇವರಿಂದ ‘ಪೆಪೆ’ ಸಿನಿಮಾದ ರಿಲೀಸ್ ಡೇಟ್​​​​ ಅನೌನ್ಸ್..!

ಅಭಿಮಾನಿ ದೇವರಿಂದ ‘ಪೆಪೆ’ ಸಿನಿಮಾದ ರಿಲೀಸ್ ಡೇಟ್​​​​ ಅನೌನ್ಸ್..!

ಒಂದು ಸರಳ ಪ್ರೇಮಕಥೆ’ ಚಿತ್ರದ ಬಳಿಕ ದೊಡ್ಮನೆ ಕುಡಿ ವಿನಯ್ ರಾಜ್​ಕುಮಾರ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಚಿತ್ರವೇ ‘ಪೆಪೆ’. ಈಗಾಗಲೇ ಪೆಪೆ ಸಿನಿಮಾದ ಪೋಸ್ಟರ್​​ಗಳು ಹಾಗೂ ಈ ಹಿಂದೆ ಬಿಟ್ಟ ಟೀಸರ್​​ಗಳು ಕುತೂಹಲ ಹೆಚ್ಚಾಗುವಂತೆ ಮಾಡಿದೆ. ಇದೀಗ ಪೆಪೆ ಪ್ರೇಕ್ಷಕ ಮಹಾ ಪ್ರಭುಗಳ ಮುಂದೆ ಬಂದು ತನ್ನ ಗತ್ತು ಗಮ್ಮತ್ತನ ತೋರಿಸೋ ಶುಭ ದಿನಾಂಕ ಕೂಡ ನಿಗದಿಯಾಗಿದೆ.

ವಿಶೇಷವೇನೆಂದ್ರೆ ಪೆಪೆ ಸಿನಿಮಾದ ರಿಲೀಸ್ ಡೇಟ್ ಅನ್ನ ಅಭಿಮಾನಿ ದೇವರುಗಳು ಅದ್ರಲ್ಲೂ ಕನ್ನಡವನ್ನ ಕನ್ನಡ ಸಿನಿಮಾವನ್ನ ಹೊತ್ತು ಮೆರೆಸುವ ಆಟೋ ಸಾರಥಿಗಳಿಂದ ಪೆಪೆ ದಿನಾಂಕ ಬಹಿರಂಗವಾಗಿದೆ. ಈ ತಿಂಗಳ ಕೊನೆ ಶುಕ್ರವಾರ ಆಗಸ್ಟ್ 30ರಂದು ರಾಜ್ಯಾದ್ಯಂತ ಪೆಪೆ ಸಿನಿಮಾ ತನ್ನ ಆರ್ಭಟವನ್ನ ತೋರಲಿದೆ.

ಸದಾಶಿವ ನಗರದ ಗ್ರೌಂಡ್​​​ನಲ್ಲಿ ಪೆಪೆ ಸಿನಿಮಾದ ಪೋಸ್ಟರ್​​​ಗಳನ್ನು ಆಟೋ ರಿಕ್ಷದ ಮೇಲೆ ಅಂಟಿಸಿ ರಿಲೀಸ್ ಡೇಟ್ ಅನೌನ್ಸ್ ಮಾಡಲಾಯ್ತು. ಅಭಿಮಾನಿ ಆಟೋ ಡ್ರೈವರ್​​ಗಳು ಭವರವಸೆಯ ನಾಯಕ ನಟ ವಿನಯ್ ರಾಜ್​ಕುಮಾರ್ ಸಮುಖದಲ್ಲಿ ಪೆಪೆ ರಿಲೀಸ್ ಪೋಸ್ಟರ್ಸ್​ಗಳನ್ನ ಅನಾವರಣ ಮಾಡಿದ್ರು.

ಸಿದ್ಧಾರ್ಥನಾಗಿ ಸ್ಯಾಂಡಲ್​​ವುಡ್​​​ ಸೀಮೆಗೆ ಬಲಗಾಲಿಟ್ಟ ದೊಡ್ಮನೆಯ ಮೂರನೇ ತಲೆಮಾರಿನ ಭರವಸೆಯ ನಟ ವಿನಯ್ ರಾಜ್​ಕುಮಾರ್ ಈಗ ಮೆಗಾ ಮಾಸ್ ಹೀರೋ ಆಗೋ ಸೂಚನೆ ಕೊಡ್ತಿದ್ದಾರೆ. ತನ್ನ ದೊಡ್ಡಪ್ಪ ಚಿಕ್ಕಪ್ಪನ ರೀತಿ ಕ್ಲಾಸ್ಗೂ ಸೈ ಮಾಸ್ಗೂ ಜೈ ಅನ್ನೋದು ಪಕ್ಕ. ಒಂದು ಸರಳ ಪ್ರೇಮ ಕಥೆ ಸಿನಿಮಾದ ಮೂಲಕ ತಾನೆಂಥ ಕ್ಲಾಸ್ ಹೀರೋ ಅನ್ನೋದನ್ನ ಚೆಂದವಾಗಿ ಚಂದನವನದ ಅಭಿಮಾನಿ ದೇವರುಗಳಿಗೆ ತೋರಿಸಿದ ವಿನಯ್ ಈ ಬಾರಿ ಮಾಸ್ ಅವತಾರವನ್ನ ‘ಪೆಪೆ‘ ಚಿತ್ರದ ಮೂಲಕ ಸಾಬೀತು ಮಾಡಲಿದ್ದಾರೆ.

ಯುವ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ಕಲ್ಪನೆಯಲ್ಲಿ ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಖರ್ಚಿನಲ್ಲಿ ‘ಪೆಪೆ’ ಅದ್ಧೂರಿಯಾಗಿ ಮೂಡಿಬಂದಿದೆ. ಕ್ಲಾಸ್ ಸಿನಿಮಾಗಳಿಗೆ ಮ್ಯೂಸಿಕ್ ಕೊಟ್ಟು ಹೆಸರು ಮಾಡಿರುವ ಪೂರ್ಣ ಚಂದ್ರ ತೇಜಸ್ವಿ ಈ ಬಾರಿ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವೊಂದನ್ನ ಮ್ಯೂಸಿಕ್ ಮಾಡಿರೋದು ವಿಶೇಷವಾಗಿದೆ.

ಇದನ್ನೂ ಓದಿ : ರಜತ್ ಮೌರ್ಯ ನಟನೆಯ ’ವೈಕುಂಠ ಸಮಾರಾಧನೆ’ ಚಿತ್ರದ ಪೋಸ್ಟರ್ ರಿಲೀಸ್​​..!

Leave a Comment

DG Ad

RELATED LATEST NEWS

Top Headlines

ಹುಬ್ಬಳ್ಳಿ-ಪುಣೆ ವಂದೇ ಭಾರತ್​ ರೈಲಿಗೆ ಇಂದು ಪ್ರಧಾನಿ ಮೋದಿ ಚಾಲನೆ..!

ದೇಶದ ಮೊದಲ ವಂದೇ ಭಾರತ್​ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ. ಗುಜರಾತ್​ನ ಭುಜ್​-ಅಹ್ಮದಾಬಾದ್​ ನಡುವೆ ವಂದೇ ಭಾರತ್​ ಮೆಟ್ರೋ ಸಂಚಾರ ಮಾಡಲಿದೆ. 100-250

Live Cricket

Add Your Heading Text Here