Download Our App

Follow us

Home » ರಾಜ್ಯ » ಇಂದಿನಿಂದ 4 ದಿನ ಪೀಣ್ಯ ಫ್ಲೈ ಓವರ್​​ ಬಂದ್​..

ಇಂದಿನಿಂದ 4 ದಿನ ಪೀಣ್ಯ ಫ್ಲೈ ಓವರ್​​ ಬಂದ್​..

ಬೆಂಗಳೂರು : ಬೆಂಗಳೂರು- ತುಮಕೂರು- ಹಾಸನ ರಸ್ತೆಗಳ ಕಡೆಗೆ ಸಂಚರಿಸುವ ವಾಹನ ಸವಾರರಿಗೆ ಹೆದ್ದಾರಿ ಇಲಾಖೆ ಶಾಕ್‌ ನೀಡಿದೆ.  ಪೀಣ್ಯ ಫ್ಲೈ ಓವರ್‌ ಇಂದಿನಿಂದ ನಾಲ್ಕು ದಿನಗಳ ಕಾಲ ಬಂದ್‌ ಆಗಲಿದೆ.

Peenya flyover

ಇಂದು ರಾತ್ರಿ 11 ಗಂಟೆಯಿಂದ ಪೀಣ್ಯ ಫ್ಲೈಓವರ್​  ಮೇಲೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಲೋಡ್ ಟೆಸ್ಟಿಂಗ್ ಹಿನ್ನೆಲೆ ವಾಹನ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದ್ದು, ಇಂದು ರಾತ್ರಿ 11 ಗಂಟೆಯಿಂದ ಜ.19ರ ಬೆಳಗ್ಗೆ 11 ಗಂಟೆ ತನಕ ಬಂದ್ ಆಗಿರುತ್ತದೆ

ರಾಷ್ಟ್ರೀಯ ಹೆದ್ದಾರಿ-4ರ ಪೀಣ್ಯ ಎಲಿವೇಟೆಡ್ ಹೈವೇಗೆ ಆಳವಡಿಸಿದ್ದ ವಯಾಡಕ್ಟ್ ದುರಸ್ತಿ ಮಾಡಲಾಗುತ್ತಿದೆ. ವಯಾಡಕ್ಟ್‌ನ ಸಮಗ್ರತೆ ಪರಿಶೀಲನೆ & ಲೋಡ್ ಟೆಸ್ಟಿಂಗ್ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. 

ಪರ್ಯಾಯ ಮಾರ್ಗಗಳು :  ನೆಲಮಂಗಲ ಕಡೆಯಿಂದ ಬೆಂಗಳೂರು ನಗರಕ್ಕೆ ಫ್ಲೈ ಓವರ್ ರಸ್ತೆಯ ಮೂಲಕ ಸಾಗುವ ವಾಹನಗಳು ಕೆನ್ನಮೆಟಲ್ ವಿಡಿಯಾ ಹತ್ತಿರ ಫ್ಲೈಓವರ್ ಪಕ್ಕದ ಎನ್​​ಹೆಚ್-4 ಮತ್ತು ಸರ್ವೀಸ್ ರಸ್ತೆಯ ಮೂಲಕ 8ನೇ ಮೈಲಿ-ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್-ಎಸ್ ಆರ್ ಎಸ್ ಜಂಕ್ಷನ್ ಮೂಲಕ ಗೊರಗುಂಟೆಪಾಳ್ಯ ತಲುಪಬಹುದಾಗಿದೆ.

ಇದನ್ನೂ ಓದಿ : ಸದ್ಯದಲ್ಲೇ ಹೆಚ್​.ಡಿ. ಕುಮಾರಸ್ವಾಮಿಗೆ ಸಿಗಲಿದೆ ಕೇಂದ್ರ ಮಂತ್ರಿ ಸ್ಥಾನ..

 

Leave a Comment

DG Ad

RELATED LATEST NEWS

Top Headlines

BBK11: ‘ನಿಮ್ಮ ರೀತಿಯ ಫೂಟೇಜ್ ನನಗೆ ಬೇಡ’ – ಮೋಕ್ಷಿತಾ ಖಡಕ್​ ಮಾತಿಗೆ ಜಗದೀಶ್ ಪುಲ್​ ಸೈಲೆಂಟ್..!

ಬಿಗ್‌ ಬಾಸ್‌ ಮನೆ ಈಗ ರಣರಂಗವಾಗಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ. 16 ಸ್ಪರ್ಧಿಗಳ ಮಧ್ಯೆ ಒಂಟಿ ಮನೆಯಲ್ಲಿ ಆಟ ಮುಂದುವರಿದಿದೆ. ಮೊದಲ ವಾರ ಯಮುನಾ ಶ್ರೀನಿಧಿ ಎಲಿಮಿನೇಟ್

Live Cricket

Add Your Heading Text Here