ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನ A-1 ಆರೋಪಿ ಪವಿತ್ರಾಗೌಡ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನ ನ್ಯಾಯಾಲಯ ಆಗಸ್ಟ್ 27ಕ್ಕೆ ಮುಂದೂಡಿದೆ. 77 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾಗೌಡ ‘ಸಿಂಗಲ್ ಪೇರೆಂಟ್’ ಬೇಸ್ ಮೇಲೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಪೊಲೀಸರು ಚಾರ್ಜ್ ಶೀಟ್ ಸಲ್ಲಿಸೋ ಮುನ್ನವೇ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ಮೂಲಕ ಪವಿತ್ರಾಗೌಡ ಅರ್ಜಿ ಸಲ್ಲಿಸಿದ್ದರು. ತನ್ನ ಮಗಳ ಭವಿಷ್ಯ ಹಾಗೂ ಆರೈಕೆ ದೃಷ್ಟಿಯಿಂದ ಬೇಲ್ಗೆ ಅರ್ಜಿ ಸಲ್ಲಿಸಿ, ಪ್ರಕರಣದ ನಂತರ ತನ್ನ ಮಗಳು ಮಾನಸಿಕವಾಗಿ ಕುಗ್ಗಿದ್ದಾಳೆ, ಮಗಳ ಆರೈಕೆ ಹಾಗು ಭವಿಷ್ಯ ರೂಪಿಸುವ ಜವಾಬ್ದಾರಿ ನನ್ನ ಮೇಲಿದೆ. ನನ್ನ ಮಗಳಿಗೆ ನಾನೊಬ್ಬಳೇ ಪೋಷಕಿ ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಸರ್ಕಾರದ ಪರ ವಕೀಲರಿಂದ ಬೇಲ್ ಅರ್ಜಿಗೆ ಆಕ್ಷೇಪಣೆ ಸಲ್ಲಿಕೆಯಾಗಿದ್ದು, ಇದೀಗ CCH 57ನೇ ಕೋರ್ಟ್ ಜಾಮೀನು ಅರ್ಜಿ ವಿಚಾರಣೆಯನ್ನ ಆಗಸ್ಟ್ 27ಕ್ಕೆ ಮುಂದೂಡಿದೆ. ಜೊತೆಗೆ ಆರೋಪಿ ಅನುಕುಮಾರ್ ಜಾಮೀನು ಅರ್ಜಿಯನ್ನೂ ಮುಂದೂಡಿದೆ.
ಇದನ್ನೂ ಓದಿ : ದರ್ಶನ್ ನೋಡಲು ಜೈಲಿಗೆ ಬಂದ ನಟಿ ರಚಿತಾ ರಾಮ್..!