Download Our App

Follow us

Home » ಅಪರಾಧ » ಪವಿತ್ರಾಗೌಡ ಜಾಮೀನು ಅರ್ಜಿ ವಜಾ – ಲಿಪ್​ಸ್ಟಿಕ್ ಸುಂದರಿಗೆ ಜೈಲೇ ಗತಿ..!

ಪವಿತ್ರಾಗೌಡ ಜಾಮೀನು ಅರ್ಜಿ ವಜಾ – ಲಿಪ್​ಸ್ಟಿಕ್ ಸುಂದರಿಗೆ ಜೈಲೇ ಗತಿ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ A1 ಆರೋಪಿ ಪವಿತ್ರಾ ಗೌಡ ಹಾಗೂ A7 ಆರೋಪಿ ಅನುಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿ CCH 57 ಕೋರ್ಟ್ ಆದೇಶ ಹೊರಡಿಸಿದೆ.

ಕೊಲೆ ಕೇಸ್​​ನಲ್ಲಿ ಹಲವು ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾಗೌಡ ‘ಸಿಂಗಲ್ ಪೇರೆಂಟ್’ ಬೇಸ್ ಮೇಲೆ  ಪೊಲೀಸರು ಚಾರ್ಜ್ ಶೀಟ್ ಸಲ್ಲಿಸೋ ಮುನ್ನವೇ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ಮೂಲಕ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ತನ್ನ ಮಗಳ ಭವಿಷ್ಯ ಹಾಗೂ ಆರೈಕೆ ದೃಷ್ಟಿಯಿಂದ ಬೇಲ್​ಗೆ ಅರ್ಜಿ ಸಲ್ಲಿಸಿ, ಪ್ರಕರಣದ ನಂತರ ತನ್ನ ಮಗಳು ಮಾನಸಿಕವಾಗಿ ಕುಗ್ಗಿದ್ದಾಳೆ‌, ಮಗಳ ಆರೈಕೆ ಹಾಗು ಭವಿಷ್ಯ ರೂಪಿಸುವ ಜವಾಬ್ದಾರಿ ನನ್ನ ಮೇಲಿದೆ. ನನ್ನ ಮಗಳಿಗೆ ನಾನೊಬ್ಬಳೇ ಪೋಷಕಿ ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು. ಇದರೊಂದಿಗೆ ಕೊಲೆ ಪ್ರಕರಣದ A7 ಅನುಕುಮಾರ್ ಕೂಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಇಂದು ಎ1 ಆರೋಪಿ ಪವಿತ್ರಾ ಗೌಡ ಹಾಗೂ ಎ7 ಆರೋಪಿ ಅನುಕುಮಾರ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಜೈಶಂಕರ್ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಲಿಪ್​ಸ್ಟಿಕ್ ಸುಂದರಿಗೆ ಜೈಲೇ ಗತಿಯಾಗಿದೆ.

ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯಗೆ ಮತ್ತೆ ರಿಲೀಫ್‌ – ಅರ್ಜಿ ವಿಚಾರಣೆ ಸೆ.2ಕ್ಕೆ ಮುಂದೂಡಿಕೆ..!

Leave a Comment

DG Ad

RELATED LATEST NEWS

Top Headlines

BBK11: ‘ನಿಮ್ಮ ರೀತಿಯ ಫೂಟೇಜ್ ನನಗೆ ಬೇಡ’ – ಮೋಕ್ಷಿತಾ ಖಡಕ್​ ಮಾತಿಗೆ ಜಗದೀಶ್ ಪುಲ್​ ಸೈಲೆಂಟ್..!

ಬಿಗ್‌ ಬಾಸ್‌ ಮನೆ ಈಗ ರಣರಂಗವಾಗಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ. 16 ಸ್ಪರ್ಧಿಗಳ ಮಧ್ಯೆ ಒಂಟಿ ಮನೆಯಲ್ಲಿ ಆಟ ಮುಂದುವರಿದಿದೆ. ಮೊದಲ ವಾರ ಯಮುನಾ ಶ್ರೀನಿಧಿ ಎಲಿಮಿನೇಟ್

Live Cricket

Add Your Heading Text Here