ರೇಣುಕಾಸ್ವಾಮಿ ಕೊಲೆ ಪ್ರಕರಣದ A1 ಆರೋಪಿ ಪವಿತ್ರಾ ಗೌಡ ಅವರಿಗೂ ಜಾಮೀನು ಸಿಕ್ಕಿದೆ. ಜೈಲಿಗೆ ಸೇರಿದ ದಿನದಿಂದಲೇ ಪವಿತ್ರಾ ಗೌಡ ಜಾಮೀನಿಗಾಗಿಯೇ ಪ್ರಯತ್ನ ಪಡ್ತಾನೇ ಇದ್ದರು. ಆದರೆ, ಜಾಮೀನು ಮಾತ್ರ ಸಿಕ್ಕಿರಲಿಲ್ಲ. ಆದರೆ ಡಿ.13ರಂದು ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಮಂದಿ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ.
ನಟ ದರ್ಶನ್ ಮಧ್ಯಂತರ ಜಾಮೀನಿನ ಮೇಲೆ ಈಗಾಗಲೇ ಹೊರಗೆ ಇದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿ ಪವಿತ್ರಾಗೌಡ ಇಂದು ಸಂಜೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ನಿನ್ನೆ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿಗೆ ಬಂದಿರುವ ಪವಿತ್ರಾ ಗೌಡ, ಮಾಜಿ ಪತಿ ಸಂಜಯ್ ಸಿಂಗ್ ಅವರು ಬಿಟಿವಿಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಮಾಜಿ ಪತಿ ಸಂಜಯ್ ಸಿಂಗ್ ಅವರು ಪವಿತ್ರಾ ಗೌಡನ ಬಿಡಲು ಅಸಲಿ ಕಾರಣ ಏನೆಂಬುದನ್ನು ಬಿಚ್ಚಿಟ್ಟಿದ್ದಾರೆ.
ಪವಿತ್ರಾ ಗೌಡ ಅವರ ಗುರಿನ ರೀಚ್ ಆಗ್ಲಿ ಅನ್ನೋ ಕಾರಣಕ್ಕೆ ನಾನು ಅವ್ರನ್ನ ಬಿಟ್ಟು ಹೋಗಿದ್ದು, ಪ್ರೀತಿ ಬಗ್ಗೆ ನಿಜವಾಗಿನೂ ಗೊತ್ತಿದೆ ಅಂದ್ರೆ ಅದು ಪ್ರೀತಿನೇ. ನಾನು ಪವಿತ್ರಾ ಗೌಡನ ಕೇರ್ ಮಾಡ್ತೇನೆ, ಅವ್ರ ಜೀವನದಲ್ಲಿ ಸಕ್ಸಸ್ ಸಿಕ್ಕಿರೋದ್ಕೆ ನಾನು ದೇವ್ರಿಗೆ ಥ್ಯಾಂಕ್ಸ್ ಹೇಳ್ತೇನೆ ಎಂದಿದ್ದಾರೆ.
ಪವಿತ್ರಾ ಗೌಡ ನನ್ನ ಜೊತೆಗಿಲ್ಲ ಅನ್ನೋ ನೋವು ಇದೆ, ಆದ್ರೆ ನೋವುನೂ ಖುಷಿಯಾಗಿ ತೆಗೊಬೇಕು. ನನ್ನ ಕೆಟ್ಟ ಟೈಮ್, ಜೀವನದಲ್ಲಿ ಒಂದು ಸಲ ಸುಖ ಬರುತ್ತೆ ಮತ್ತೆ ದುಃಖ ಬರುತ್ತೆ. ಹಾಗಾಗಿ ಮತ್ತೆ ಜೀವನದಲ್ಲಿ ಸುಖ ಬಂದೇ ಬರುತ್ತೆ. ಪವಿತ್ರಾ ಗೌಡ ನನ್ನ ಜೊತೆ ಇಲ್ಲಾ ಅಂದ್ರೂನೂ ಅವಳು ನನ್ನ ಜೊತೆ ಇದ್ದಾಳೆ ಎಂದು ಸಂಜಯ್ ಸಿಂಗ್ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ : ಬೆಳ್ಳಂಬೆಳಗ್ಗೆ ಬೆಂಗಳೂರಲ್ಲಿ ಗುಂಡಿನ ಸದ್ದು – ರೌಡಿಶೀಟರ್ ಮೇಲೆ ಪೊಲೀಸರ ಫೈರಿಂಗ್..!