ಹುಬ್ಬಳ್ಳಿ : ರೈಲ್ವೆ ಇಲಾಖೆಯಲ್ಲಿ ಫೇಕ್ ಹಿರಿಯ ಅಧಿಕಾರಿಯ ಕಾಮ ಪುರಾಣವೊಂದು ಬಯಲಾಗಿದೆ. ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸೋದಾಗಿ ಆಮಿಷವೊಡ್ಡಿ ಒಂದು ನೈಟ್ ನನ್ನೊಂದಿಗೆ ಕಳೆಯಬೇಕು ಎಂದು ಫೇಕ್ ಹಿರಿಯ ಅಧಿಕಾರಿಯೊಬ್ಬ ಕಿರುಕುಳ ನೀಡುತ್ತಿದ್ದ.
ಮಹಿಳೆಗಾಗಿ ಹುಬ್ಬಳ್ಳಿಯ ನೈರುತ್ಯ ರೈಲ್ವೆ ಗೆಸ್ಟ್ಹೌಸ್ನಲ್ಲಿ ಕಾದಿದ್ದವನಿಗೆ ಇದೀಗ ತಕ್ಕ ಶಾಸ್ತಿಯಾಗಿದೆ. ಹುಡುಗಿಯರ ಶೋಕಿ ಬೆಳೆಸಿಕೊಂಡಿದ್ದ ಆರ್ಥಿಕ ವಿಭಾಗದ ಕ್ಲರ್ಕ್ ನದೀಂ ಎಂಬಾತ ರೈಲ್ವೆ ಜಾಬ್ ನೋಟಿಫಿಕೇಷನ್ ಪೇಜ್ ಕ್ರಿಯೇಟ್ ಮಾಡ್ತಿದ್ದ. ಹೆಣ್ಣುಮಕ್ಕಳನ್ನು ಟಾರ್ಗೆಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ನದೀಂ ನೋಟಿಫಿಕೇಷನ್ ಕಳಿಸ್ತಿದ್ದ. ಕೆಲಸ ಬೇಕಾದ್ರೆ ಅಧಿಕಾರಿಗಳ ಜೊತೆ ಒಂದು ದಿನ ಕಳೆಯಬೇಕು ಎನ್ನುತ್ತಿದ್ದ.
ಆಫಿಸರ್ ಅಂತ ಫೇಕ್ ಐಡಿ ಕೊಟ್ಟು ತಾನೇ ಚಾಟ್ ಮಾಡ್ತಿದ್ದ, ಇದೇ ರೀತಿ ಹುಬ್ಬಳ್ಳಿ ಕೇಶ್ವಾಪುರದ ಗೃಹಿಣಿಗೆ ನದೀಂ ಗಾಳ ಹಾಕಿದ್ದ. ಆದರೆ ಗೃಹಿಣಿ ತನ್ನ ಗಂಡನಿಗೆ ತಿಳಿಸಿ ಕೇಶ್ವಾಪುರ ಠಾಣೆಗೆ ದೂರು ನೀಡಿದ್ರು. ಗೃಹಿಣಿಯನ್ನು ಗೆಸ್ಟ್ ಹೌಸ್ಗೆ ಕಳಿಸಿ ಪೊಲೀಸರು ದಿಢೀರ್ ಎಂಟ್ರಿ ಕೊಟ್ಟಿದ್ದರು. ಆರೋಪಿ ನದೀಂನ್ನು ವಶಕ್ಕೆ ಪಡೆದ ಪೊಲೀಸರಿಗೆ ಬಿಗ್ ಶಾಕ್ ಕಾದಿತ್ತು. ನದೀಂ ಓರ್ವ IAS ಅಧಿಕಾರಿ ಹೆಸರಿನಲ್ಲಿ ರೂಮ್ ಬುಕ್ ಮಾಡಿದ್ದ.
ರೂಮ್ ಬಾಗಿಲಿಗೆ ವೆಲ್ ಕಮ್, ಯುವರ್ ಲೈಫ್ ಚೇಂಜಿಂಗ್ ಝೋನ್, ಆಜ್ ಕೆ ಬಾದ್ ಆಪ್ಕಾ ಲೆವಲ್ ಚೇಂಜ್ ಹೋ ರಹಾ ಹೈ ಅಂತಾ ಬರೆದಿದ್ದ. ಕೇಶ್ವಾಪುರ ಠಾಣೆ ಪೊಲೀಸರು ನದೀಂನನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಕ್ಷಮೆಯಾಚಿಸಿದ ಅರವಿಂದ್ ಬೆಲ್ಲದ್..!