ಅಮೆರಿಕ : ಅಮೆರಿಕದ ಮಿಯಾಮಿ ಆಸ್ಪತ್ರೆಯಲ್ಲಿ ಸ್ಯಾಂಡಲ್ವುಡ್ ಕಿಂಗ್, ನಟ ಶಿವಣ್ಣಗೆ ಆಪರೇಷನ್ ಸಕ್ಸಸ್ ಆಗಿದೆ. ನಿನ್ನೆ ಆಪರೇಷನ್ ಆದ ಬಳಿಕ ಸ್ಪೆಷಲ್ ವಾರ್ಡ್ನಲ್ಲಿ ಶಿವಣ್ಣ ವಿಶ್ರಾಂತಿ ಪಡೆಯುತ್ತಿದ್ದಾರೆ. ಸರ್ಜರಿ ಹಾಗೂ ಡಾ. ಶಿವರಾಜ್‌ಕುಮಾರ್ ಅವರ ಆರೋಗ್ಯದ ಬಗ್ಗೆ ಡಾ.ಮುರುಗೇಶ್ ಮನೋಹರನ್ ಅವರು ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ.
ಡಾ.ಮುರುಗೇಶ್ ಮನೋಹರನ್ ಅವರು ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗೂ ಮಧು ಬಂಗಾರಪ್ಪ ಜೊತೆ ಶಿವಣ್ಣ ಅವರ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಡಾ. ಶಿವರಾಜ್‌ಕುಮಾರ್ ಅವರ ಇತ್ತೀಚಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆಪರೇಷನ್ ಆದ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ. ಈ ವಿಷಯ ಹಂಚಿಕೊಳ್ಳಲು ಸಂತೋಷವಾಗುತ್ತಿದೆ ಎಂದು ಡಾ.ಮುರುಗೇಶ್ ಮನೋಹರನ್ ಖುಷಿ ವ್ಯಕ್ತಪಡಿಸಿದ್ರು.
ವಿಡಿಯೋ ಸಂವಾದದಲ್ಲಿ ಮಾತನಾಡಿದ ಡಾ.ಮುರುಗೇಶ್, ಶಿವಣ್ಣ ಅವರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಧೈರ್ಯವಾಗಿದ್ದಾರೆ. ಶಸ್ತ್ರ ಚಿಕಿತ್ಸೆ ಸಮಯದಲ್ಲಿ ಹಾಗೂ ಶಸ್ತ್ರ ಚಿಕಿತ್ಸೆ ಬಳಿಕ ಅವರ ಆರೋಗ್ಯದಲ್ಲಿ ಯಾವುದೇ ಏರುಪೇರು ಆಗಿಲ್ಲ. ಅವರ ಶಕ್ತಿ, ಸಂಕಲ್ಪದಿಂದ ಶೀಘ್ರವೇ ಚೇತರಿಸಿಕೊಂಡು ದೇವರ ಕೃಪೆಯಿಂದ, ಲಕ್ಷ ಲಕ್ಷ ಅಭಿಮಾನಿಗಳ ಪ್ರಾರ್ಥನೆಗಳಿಂದ ಕೆಲವೇ ದಿನಗಳಲ್ಲಿ ಸಾಮಾನ್ಯ ಜೀವನಕ್ಕೆ ಮರಳುತ್ತಾರೆ ಎಂಬ ನಂಬಿಕೆ ಇದೆ ಎಂದ್ರು. ಮಿಯಾಮಿ ಆಸ್ಪತ್ರೆಯ ಪರಿಣತ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳ ತಂಡದಿಂದ ಅತ್ಯುತ್ತಮ ಆರೈಕೆ ಪಡೆಯುತ್ತಿದ್ದಾರೆ ಎಂದ್ರು.
ಇದೇ ವೇಳೆ ಮಾತನಾಡಿದ ಪತ್ನಿ ಗೀತಾ ಶಿವರಾಜ್ ಕುಮಾರ್, ಡಾ. ಶಿವರಾಜ್‌ಕುಮಾರ್ ಅವರ ಅಭಿಮಾನಿಗಳು, ಸಹೋದ್ಯೋಗಿಗಳು, ಶುಭಚಿಂತಕರು ಮತ್ತು ಮಾಧ್ಯಮಗಳು ಈ ಸಂದರ್ಭದಲ್ಲಿ ತೋರಿಸಿದ ನಿರಂತರ ಬೆಂಬಲ, ಪ್ರಾರ್ಥನೆ ಮತ್ತು ಸಂದೇಶಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ರು. ನಿಮ್ಮ ಪ್ರೋತ್ಸಾಹವು ಡಾ. ಶಿವರಾಜ್‌ಕುಮಾರ್ ಮತ್ತು ಅವರ ಕುಟುಂಬಕ್ಕೆ ದೊಡ್ಡ ಶಕ್ತಿ ಒದಗಿಸಿದೆ. ನಿಮ್ಮ ಪ್ರೀತಿಗೆ ಚಿರರುಣಿ ಆಗಿರುತ್ತೇವೆ ಎಂದ್ರು.
ಇನ್ನು ಶಿವಣ್ಣ ಅವರ ಚೇತರಿಕೆ ಹಾಗೂ ಆರೋಗ್ಯದ ಕುರಿತು ಆಗಾಗ ಮಾಹಿತಿ ಹಂಚಿಕೊಳ್ಳುತ್ತೇವೆ. ಆದಷ್ಟು ಬೇಗ ಶಿವಣ್ಣ ಚೇತರಿಸಿಕೊಂಡು ಮತ್ತೆ ಸ್ಯಾಂಡಲ್ವುಡ್ನಲ್ಲಿ ನಟನೆ ಮುಂದುವರಿಸಲಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದ್ರು. ಆದಷ್ಟು ಬೇಗ ಶಿವಣ್ಣ ಬಳಿಯಿಂದಲೂ ಅಭಿಮಾನಿಗಳಿಗೆ ಸಂದೇಶ ತಲುಪಿಸುತ್ತೇವೆ ಎಂದ್ರು.
ಇದನ್ನೂ ಓದಿ : ಗ್ರ್ಯಾಂಡ್ ಆಗಿ ತೆರೆಗೆ ಅಪ್ಪಳಿಸಿದ ‘ಮ್ಯಾಕ್ಸ್’ – ಥಿಯೇಟರ್ ಮುಂದೆ ಕಿಚ್ಚ ಸುದೀಪ್ ಅಭಿಮಾನಿಗಳಿಂದ ಸಂಭ್ರಮಾಚರಣೆ..!