ಬೆಳಗಾವಿ : ದೇಶದಲ್ಲಿ ಚರ್ಚೆ ಮಾಡಬೇಕಾದ ವಿಷಯಗಳು ಬೇಕಾದಷ್ಟಿವೆ. ಹರಿಯಾಣ ಹೊತ್ತಿ ಉರಿಯುತ್ತಿದೆ. ಅದಾನಿ ವಿಚಾರ ಇದೆ. ಅದರ ಬಗ್ಗೆ ಇವರು ಮಾತಾಡುವ ಬದಲು ಜನರ ದಿಕ್ಕು ತಪ್ಪಿಸಲು ‘ಒನ್ ನೇಷನ್ ಒನ್ ಎಲೆಕ್ಷನ್’ ಚರ್ಚೆ ಶುರು ಮಾಡಿದ್ದಾರೆ ಎಂದು ಕೇಂದ್ರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
‘ಒನ್ ನೇಷನ್, ಒನ್ ಎಲೆಕ್ಷನ್’ವಿಚಾರವಾಗಿ ಇಂದು ಬೆಳಗಾವಿಯ ಸುವರ್ಣಸೌಧದದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದೆ. ಅದಾನಿ ಪ್ರಕರಣ ಬಗ್ಗೆ ಚರ್ಚೆ ಮಾಡೋಕೆ ಇವರು ತಯಾರಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ಇಂಥ ಕೆಲಸ ಮಾಡ್ತಿರ್ತಾರೆ.
ಬಿಲ್ ತರುವ ಮೊದಲು ಸಂವಿಧಾನದಲ್ಲಿ ಕೆಲವು ತಿದ್ದುಪಡಿ ತರಬೇಕಾಗುತ್ತೆ. ಮೆನ್ ಅಂಡ್ ಮಿಷನರಿ ಏನು ಬೇಕು? ತಾಂತ್ರಿಕವಾಗಿ ಸಿದ್ದರಿದ್ದೀರಾ? ಮಾನವ ಸಂಪನ್ಮೂಲ ಇದೆಯಾ? ಇದನ್ನೆಲ್ಲಾ ನೋಡಬೇಕಾಗುತ್ತೆ. ಮೋದಿ ಮಧ್ಯರಾತ್ರಿ ಕಂಡ ಕನಸಿಗೆ ಸಚಿವರೆಲ್ಲಾ ಜೈ ಅನ್ನುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
ಪ್ರಧಾನಿ ಮೋದಿಯವರ ಆಡಳಿತ ವೈಫಲ್ಯ, ಅದಾನಿ ಪ್ರಕರಣ ಮುಚ್ಚಿಹಾಕಲು ಈ ರೀತಿ ಮಾಡ್ತಾ ಇರ್ತಾರೆ. ಅಟೆನ್ಷನ್ ಡೀವಿಯೇಷನ್ ಟ್ಯಾಕ್ಟಿಕ್ ಮಾಡ್ತಿದಾರೆ. ಇದೆಲ್ಲ ಅದಾನಿಯನ್ನ ಉಳಿಸಲು ಮಾಡ್ತೀರೋ ತಂತ್ರವಲ್ಲದೇ ಮತ್ತೇನೂ ಅಲ್ಲ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : RBI ಕಚೇರಿ ಸ್ಫೋಟಿಸುವುದಾಗಿ ರಷ್ಯನ್ ಭಾಷೆಯಲ್ಲಿ ಬಾಂಬ್ ಬೆದರಿಕೆ – ತಿಂಗಳಲ್ಲಿ ಎರಡನೇ ಘಟನೆ!