ಭಾರತೀಯ ಚಿತ್ರರಂಗ ಕಂಡ ಅಪರೂಪದ ಪ್ರತಿಭೆ ನಟಿ ಸೌಂದರ್ಯ. 1992ರಲ್ಲಿ ಗಂಧರ್ವ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಸೌಂದರ್ಯ ಆನಂತರ ಪರಭಾಷೆಗೂ ಕಾಲಿಟ್ಟರು. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಮಿಂಚಿದ್ದ ಪಂಚಭಾಷಾ ನಟಿ ಸೌಂದರ್ಯ ದಕ್ಷಿಣ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ಭಾರತೀಯ ಚಿತ್ರರಂಗದಲ್ಲಿ ಹನ್ನೆರಡೇ ವರ್ಷ ಕೆಲಸ ಮಾಡಿದ್ದರೂ ಸೌಂದರ್ಯ ಅವರ ಸಾಧನೆಗಳು ಅಗಾದ.
90 ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸ್ಟಾರ್ ನಟರಾಗಿದ್ದ ಚಿರಂಜೀವಿ, ರಜನಿಕಾಂತ್, ಕಮಲ್ ಹಾಸನ್, ಮೋಹನ್ ಲಾಲ್, ವೆಂಕಟೇಶ್, ನಾಗಾರ್ಜುನ, ರಂತಹ ಸ್ಟಾರ್‌ಗಳ ಜೊತೆಗೆ ಶ್ರೀಕಾಂತ್, ಜಗಪತಿ ಬಾಬು ಮುಂತಾದ ಸ್ಟಾರ್‌ಗಳೊಂದಿಗೆ ಕೂಡ ಕೌಟುಂಬಿಕ ಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಪಡೆದರು. ಅದೇ ರೀತಿ ಸೌಂದರ್ಯ ತಮ್ಮ 20 ವರ್ಷಗಳ ಸಿನಿಮಾ ಜೀವನದಲ್ಲಿ ದಕ್ಷಿಣ ಭಾರತದ ಟಾಪ್ ನಟಿಯಾಗಿ ಬೆಳೆದರು. ದಕ್ಷಿಣದಲ್ಲಿ ಮಾತ್ರವಲ್ಲ. ಬಾಲಿವುಡ್‌ನಲ್ಲಿಯೂ ಅಮಿತಾಬ್ ಬಚ್ಚನ್ ಅವರೊಂದಿಗೆ ಸೂರ್ಯವಂಶಂ ಚಿತ್ರದಲ್ಲಿ ದೇವಯಾನಿ ಪಾತ್ರವನ್ನು ನಿರ್ವಹಿಸಿದ್ದಾರೆ. ಅಮಿತಾಬ್ ಬಚ್ಚನ್ ಜೊತೆ ನಟಿಸಿ ಎಲ್ಲರ ಗಮನ ಸೆಳೆದರು. ತೆಲುಗಿನಲ್ಲಿ ಆ ಚಿತ್ರ ದೊಡ್ಡ ಹಿಟ್ ಆಗಿದ್ದರಿಂದ ಹಿಂದಿ ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಬಂದವು.
ಸಿನಿಮಾಗಳು ಕಡಿಮೆಯಾಗುತ್ತಿದ್ದ ಸಮಯದಲ್ಲಿ ರಾಜಕೀಯಕ್ಕೆ ಹೋಗಲು ಯೋಚಿಸಿದರು. ನಾಯಕಿಯಾಗಿ ಅವಕಾಶಗಳು ಕಡಿಮೆಯಾಗುತ್ತಿದ್ದ ಸಮಯದಲ್ಲಿ ಅವರು ರಾಜಕೀಯ ಪ್ರವೇಶ ಮಾಡಿದರು. 2004 ರಲ್ಲಿ ಬಿಜೆಪಿ ಸೇರಿದ ಸೌಂದರ್ಯ 17 ಏಪ್ರಿಲ್ 2004 ರಂದು, ಪಕ್ಷದ ಪ್ರಚಾರದ ಜೊತೆಗೆ ಮತ ಯಾಚನೆಗಾಗಿ ತಮ್ಮ ಸಹೋದರ ಅಮರನಾಥ್ ಅವರೊಂದಿಗೆ ಹೆಲಿಕಾಪ್ಟರ್‌ನಲ್ಲಿ ತೆರಳಿ ಅಪಘಾತದಲ್ಲಿ ಮೃತಪಟ್ಟರು. ಇದೇ ಸಂದರ್ಭದಲ್ಲಿ ಆಗ ಒಂದು ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಸೌಂದರ್ಯ ಸಾಯುತ್ತಾರೆ ಎಂಬ ವಿಷಯ ಒಬ್ಬ ವ್ಯಕ್ತಿಗೆ ತಿಳಿದಿತ್ತು ಎಂದು..? ಜೋರಾಗಿ ಪ್ರಚಾರ ನಡೆಯಿತು. ಅವರು ಬೇರೆ ಯಾರೂ ಅಲ್ಲ, ಅವರ ತಂದೆ.
ಹೌದು ಸೌಂದರ್ಯ ಜಾತಕದ ಪ್ರಕಾರ ಅವರು ಸಾಯುತ್ತಾರೆ ಎಂದು ಜ್ಯೋತಿಷಿಗಳು ಮೊದಲೇ ತನ್ನ ತಂದೆಗೆ ಹೇಳಿದ್ದರು ಎಂದು. ಆದರೆ ಆಗ ಅವರು ಈ ವಿಷಯವನ್ನು ಅಷ್ಟಾಗಿ ನಂಬಲಿಲ್ಲ. ಜೊತೆಗೆ ಎಂದು ತಲೆಕೆಡಿಸಿಕೊಳ್ಳಲಿಲ್ಲ ಎಂಬ ವದಂತಿ ಹಬ್ಬಿತ್ತು. ನಿಜಕ್ಕೂ ಇದರಲ್ಲಿ ಎಷ್ಟು ಸತ್ಯವಿದೆ ಎಂಬುದು ತಿಳಿದಿಲ್ಲ ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಈ ಗಾಸಿಪ್ ಹಲ್‌ಚಲ್ ಸೃಷ್ಟಿಸಿತ್ತು.
ಇದನ್ನೂ ಓದಿ : ರೇಣುಕಾಸ್ವಾಮಿಯನ್ನ ಸಾಯಿಸಿಬಿಡಿ ಎಂದು ಹುಕುಂ ಕೊಟ್ಟಿದ್ದೇ ಪವಿತ್ರಾ ಗೌಡ..!