ನೈಜೀರಿಯಾದಲ್ಲಿ ಇಂಧನ ತುಂಬಿದ್ದ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ 94 ಜನರು ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ನೈಜೀರಿಯಾದ ರಾಜಧಾನಿ ಅಬುಜಾದ ಉತ್ತರಕ್ಕೆ ಸುಮಾರು 530 ಕಿಲೋಮೀಟರ್ ದೂರದಲ್ಲಿರುವ ತೌರಾ ಸ್ಥಳೀಯ ಸರ್ಕಾರಿ ಪ್ರದೇಶದ ಮಜಿಯಾ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ.
ಉತ್ತರ ನೈಜೀರಿಯಾದಲ್ಲಿ ಚೆಲ್ಲಿದ್ದ ಇಂಧನವನ್ನು ಸಂಗ್ರಹಿಸಲು ನೆರೆದಿದ್ದ ಸ್ಥಳೀಯರ ಬಳಿ ಅಪಘಾತಕ್ಕೀಡಾದ ಟ್ಯಾಂಕರ್ ಸ್ಫೋಟಗೊಂಡಿದ್ದು, ಇದರಿಂದಾಗಿ 94 ಜನರು ಸಾವನ್ನಪ್ಪಿದ್ದಾರೆ. ಚಾಲಕನ ನಿಯಂತ್ರಣ ಕಳೆದುಕೊಂಡ ಟ್ಯಾಂಕರ್ ಪಲ್ಟಿಯಾಗಿದೆ.
ಪಲ್ಟಿಯಾದ ಪರಿಣಾಮ ಇಂಧನ ಹೊರಗೆ ಚೆಲ್ಲಿದೆ. ಈ ವೇಳೆ ಟ್ಯಾಂಕರ್ ಸ್ಫೋಟವಾಗಿ ಸುತ್ತಲೂ ಸೇರಿದ್ದ 94 ಜನ ಮೃತಪಟ್ಟಿದ್ದಾರೆ. ಕನಿಷ್ಠ 50 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ : ಬಿಗ್ ಬಾಸ್ ಮನೆಯಲ್ಲಿ ಮಗಳ ಅಳು ಕೇಳಿ ಬಿಕ್ಕಿ ಬಿಕ್ಕಿ ಅತ್ತ ಧನರಾಜ್..!
Post Views: 408