ಬೆಳಗಾವಿ : ಬಿಜೆಪಿ ರೆಬಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಅವರನ್ನು ಬೆಂಬಲಿಸುವ ನಾಯಕರ ವಿರುದ್ಧ ಹೇಳಿಕೆ ನೀಡುತ್ತಲೇ ಇದ್ದಾರೆ. ಇದು ಯಡಿಯೂರಪ್ಪ ಕುಟುಂಬದ ಆಪ್ತರ ಆಕ್ರೋಶಕ್ಕೆ ಕಾರಣವಾಗಿದೆ. ಯತ್ನಾಳ್‌ರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಬಿಸಾಕಿ, ಅವರದ್ದು ಮುಖವಾಡದ ಹಿಂದುತ್ವ ಎಂದು ನಿನ್ನೆ ಮೈಸೂರಿನಲ್ಲಿ ಪಕ್ಷದ ಕಾರ್ಯಕರ್ತರು, ವಿಜಯೇಂದ್ರ ಬಣದ ನಾಯಕರು ಆಗ್ರಹಿಸಿದ್ದಾರೆ.
ಇದೀಗ ಬೆಳಗಾವಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ಬಗ್ಗೆ ಪ್ರತಿಕ್ರಿಯಿಸಿ, ಯತ್ನಾಳ್ ಉಚ್ಚಾಟನೆ ಅಂತಾ ನೋಟಿಸ್ ಬರುತ್ತೆ, 15 ವರ್ಷಗಳಿಂದ ಹೀಗೆ ನೋಟಿಸ್ ಬರುತ್ತೆ ಅಷ್ಟೇ. ಆದ್ರೆ, ಪಕ್ಷದಿಂದ ಉಚ್ಛಾಟನೆ ಯಾಕೆ ಮಾಡಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಕಟ್ಟಾ ಸುಬ್ರಮಣ್ಯ ಯಡಿಯೂರಪ್ಪ ಮನೆಗೆ ಹೋಗೋದು ಹೇಗೆ? ಯಡಿಯೂರಪ್ಪ ಮನೆಯಲ್ಲಿ ಮಲಗೋದು ಹೇಗೆ ಅನ್ನೋ ಚಿಂತೆ. ಬಹಳ ನೋವಿನ ಸಂಗತಿ ಇದು, ಕಣ್ಣಲ್ಲಿ ನೀರು ಬರ್ತಾ ಇದೆ ಎಂದು ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ : ಯತ್ನಾಳ್ ಪಕ್ಷದ ಬೇರು ಕಡಿಯುವಂತ ಕೆಲಸ ಮಾಡ್ತಿದ್ದಾರೆ – ಆರಗ ಜ್ಞಾನೇಂದ್ರ..!