Download Our App

Follow us

Home » ಸಿನಿಮಾ » ಬಿಗ್​ಬಾಸ್​ ಮನೆಯಲ್ಲಿ ಶುರುವಾಯ್ತಾ ನಾಮಿನೇಷನ್ ಗುಂಪುಗಾರಿಕೆ?

ಬಿಗ್​ಬಾಸ್​ ಮನೆಯಲ್ಲಿ ಶುರುವಾಯ್ತಾ ನಾಮಿನೇಷನ್ ಗುಂಪುಗಾರಿಕೆ?

ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾದಾಗಿನಿಂದಲೂ ಟಾಸ್ಕ್​ಗಳಿಗಿಂತಲೂ ಜಗಳ, ಗುದ್ದಾಟಗಳಿಂದಲೇ ಹೆಚ್ಚು ಸುದ್ದಿಯಾಗಿದೆ. ದೊಡ್ಮನೆಯಲ್ಲಿ ಮೊದಲ ವಾರದಿಂದಲೇ ವಾರ್​ ಶುರುವಾಗಿತ್ತು. ಮೊದಲ ವಾರದಲ್ಲಿ ಯಮುನಾ ಶ್ರೀನಿಧಿ ಎಲಿಮಿನೇಟ್ ಆಗಿದ್ದು, ಸದ್ಯ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 16 ಸ್ಪರ್ಧಿಗಳು ​ಉಳಿದುಕೊಂಡಿದ್ದಾರೆ.

ಇದೀಗ ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿಗಳು ನಾಮಿನೇಷನ್​ ವಿಚಾರವಾಗಿ ಗುಂಪುಗಾರಿಕೆ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಯಾರನ್ನು ನಾಮಿನೇಟ್ ಮಾಡಬೇಕು? ಯಾರನ್ನು ಮಾಡಬಾರದು ಎಂಬ ಬಗ್ಗೆ ಗುಂಪುಗಳಲ್ಲಿ ಚರ್ಚೆ ಆಗುತ್ತಿದೆ. ನಾಮಿನೇಷನ್ ಎಂಬುದು ವೈಯಕ್ತಿಕ ಆಯ್ಕೆ ಆಗಿರಬೇಕು ಎಂದು ಬಿಗ್​ಬಾಸ್ ತಿಳಿಸಿದ್ದರೂ ಸಹ ನಾಮಿನೇಟ್ ಮಾಡಲು ಚರ್ಚೆ ನಡೆಯುತ್ತಿದೆ.

ಹೊಸ ಪ್ರೋಮೋದಲ್ಲಿ ಉಗ್ರಂ ಮಂಜು, ಗೌತಮಿ, ಮೋಕ್ಷಿತಾ ಒಂದು ಕಡೆ ಕುಳಿತುಕೊಂಡು ಯಾರ್ ಯಾರು ಈ ವಾರ ನಾಮಿನೇಷನ್​ನಿಂದ ಸೇವ್ ಆಗಿದ್ದಾರೆ ಅಂತ ಮಾತನಾಡಿಕೊಂಡಿದ್ದಾರೆ. ಮತ್ತೊಂದು ಕಡೆ ಧನರಾಜ್​ ಹಾಗೂ ಸುರೇಶ್​ ನಾವು ಮಾಡಿದ ತಪ್ಪಿಗೆ ಕರ್ಮ ನಮಗೆ ಸಿಕ್ಕಿದೆ ಅಂತ ಮಾತಾಡಿಕೊಂಡಿದ್ದಾರೆ. ಇದೇ ಪ್ರೋಮೋದಲ್ಲಿ ಮೇಲ್ನೋಟಕ್ಕೆ ಯಾರು ಯಾರು ಈ ವಾರ ಸೇಪ್​ ಆಗಿದ್ದಾರೆ, ಇನ್ನು ಯಾರನ್ನು ನಾಮಿನೇಟ್ ಮಾಡಬೇಕು ಅಂತ ಮಾತನಾಡಿಕೊಳ್ಳುತ್ತಿರುವುದು ಕಾಣುತ್ತಿದೆ.

ಇದನ್ನೂ ಓದಿ : ತೆರೆಗೆ ಬರಲು ಸಜ್ಜಾದ ಗುರುನಂದನ್ ಅಭಿನಯದ ‘ರಾಜು ಜೇಮ್ಸ್ ಬಾಂಡ್’ ಚಿತ್ರ..!

Leave a Comment

DG Ad

RELATED LATEST NEWS

Top Headlines

ಕಟೀಲು ದುರ್ಗಾಪರಮೇಶ್ವರಿ ದೇವಿಯ ಆಶೀರ್ವಾದ ಪಡೆದ ನಟ ಉಪೇಂದ್ರ..!

ಸ್ಯಾಂಡಲ್​ವುಡ್​ನ ರಿಯಲ್ ಸ್ಟಾರ್, ನಟ ಉಪೇಂದ್ರ ಅಭಿನಯದ ‘ಯುಐ’ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಈ ಹಿನ್ನೆಲೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ‘ಯುಐ’ ಟೀಮ್ ಜೊತೆ ನಟ ಉಪೇಂದ್ರ

Live Cricket

Add Your Heading Text Here