Download Our App

Follow us

Home » ಸಿನಿಮಾ » ಗುಲಾಬಿ ಹಾರ್ಟ್ ಡ್ರೆಸ್‌ನಲ್ಲಿ ಮಿಂಚಿದ ನಿವೇದಿತಾ ಗೌಡ – ಈ ಲುಕ್​ನಲ್ಲಿ ನೋಡೋಕಾಗಲ್ಲ ಎಂದ ನೆಟ್ಟಿಗರು..!

ಗುಲಾಬಿ ಹಾರ್ಟ್ ಡ್ರೆಸ್‌ನಲ್ಲಿ ಮಿಂಚಿದ ನಿವೇದಿತಾ ಗೌಡ – ಈ ಲುಕ್​ನಲ್ಲಿ ನೋಡೋಕಾಗಲ್ಲ ಎಂದ ನೆಟ್ಟಿಗರು..!

ಬಿಗ್​ ಬಾಸ್​ ಹಾಗೂ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಮುಖೇನ ಖ್ಯಾತಿ ಪಡೆದಿರುವ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಚಂದನ್​ ಶೆಟ್ಟಿಗೆ ಡಿವೋರ್ಸ್ ನೀಡಿದ ಬಳಿಕವೂ ಹಾಟ್ ಬ್ಯೂಟಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿರುತ್ತಾರೆ. ಹೊಸ ಹೊಸ ವಿಡಿಯೋ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ.

ನಿವೇದಿತಾ ಅವರು ಇದೀಗ ಹೊಸ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಈ ವಿಡಿಯೋ ಸಖತ್ ವೈರಲ್ ಆಗ್ತಿದೆ. ಶೇರ್​ ಮಾಡಿಕೊಂಡ ವಿಡಿಯೋದಲ್ಲಿ ನಿವೇದಿತಾ ಗೌಡ ಜೀನ್ಸ್, ಹಾಗೂ ಗುಲಾಬಿ ಹಾರ್ಟ್ ಡ್ರೆಸ್ ತೊಟ್ಟು ಇಂಗ್ಲೀಷ್ ಬೇಬಿ ಡಾಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಲ್ಲದೇ ತುಟಿಗೆ ಲಿಪ್‌ಸ್ಟಿಕ್‌ ಸಹ ಹಚ್ಚಿಕೊಂಡಿದ್ದಾರೆ.

ಈ ವಿಡಿಯೋ ನೋಡಿದ ಅಭಿಮಾನಿಗಳು ಭಿನ್ನ ವಿಭಿನ್ನವಾಗಿ ಕಾಮೆಂಟ್ಸ್​ ಹಾಕಿದ್ದಾರೆ. ನಿವ್ವಿ ಅಕ್ಕ ನೀವು ಈ ರೀತಿ ಬಟ್ಟೆ ಹಾಕಿ ರೀಲ್ಸ್​ ಮಾಡಬೇಡಿ, ಈ ಲುಕ್​ನಲ್ಲಿ ನಿಮ್ಮನ್ನು ನೋಡೋದಕ್ಕೆ ಆಗೋದಿಲ್ಲ, ಪ್ಲೀಸ್‌..​​ ಅಂತ ಕಾಮೆಂಟ್ಸ್ ಹಾಕಿದ್ದಾರೆ. ಕೆಲವರು ಏನ್​ ಇಷ್ಟು ಆ್ಯಕ್ವೀವ್ ಆಗಿದ್ದೀರಿ, ಬರೀ ಬಾತ್​ ರೂಂನಲ್ಲೆ ರೀಲ್ಸ್​ ಮಾಡ್ತಿರಲ್ಲಾ, ಸ್ವಲ್ಪ ಬಾತ್​ ರೂಂನಿಂದ ಆಚೆ ಬಾರಮ್ಮ, ಏನಾದ್ರೂ ಗುಡ್​ ನ್ಯೂಸ್​ ಇದೆಯಾ ಅಂತೆಲ್ಲಾ ಕಾಮೆಂಟ್ಸ್​ ಹಾಕಿದ್ದಾರೆ.

ಟಿಕ್ ಟಾಕ್ ಮತ್ತು ಇನ್ಸ್ಟಾಗ್ರಾಮ್ ಮೂಲಕ ರೀಲ್ಸ್ ಮಾಡುತ್ತಾ ಲಕ್ಷಾಂತರ ಫಾಲೋವರ್ಸ್‌ಗಳನ್ನು ಪಡೆದಿರುವ ನಿವೇದಿತಾ ಗೌಡ ಇದೀಗ ಸಿನಿಮಾ ನಟಿಯಾಗಿ ಪಯಣ ಆರಂಭಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಲ್ಲಿ ನಿಲ್ಲದ ರೌಡಿಗಳ ಅಟ್ಟಹಾಸ – ನಡುರಸ್ತೆಯಲ್ಲೇ ಯುವಕನ ಬಟ್ಟೆ ಬಿಚ್ಚಿ ಮಾರಣಾಂತಿಕ ಹಲ್ಲೆ..!

Leave a Comment

DG Ad

RELATED LATEST NEWS

Top Headlines

4 ಅಂತಸ್ತಿನ ಕಟ್ಟಡ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗು..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ

Live Cricket

Add Your Heading Text Here