ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ರೀಲ್ಸ್ ಹಾಗೂ ಫೋಟೋಗಳ ಮೂಲಕವೇ ನಿವೇದಿತಾ ಸಖತ್ ಸದ್ದು ಮಾಡ್ತಿದ್ದಾರೆ. ರ‍್ಯಾಪರ್ ಚಂದನ್ ಶೆಟ್ಟಿಗೆ ಡಿವೋರ್ಸ್ ನೀಡಿದ ಬಳಿಕ ಸೋಶಿಯಲ್ ಮೀಡಿಯಾದಿಂದ ಕೆಲ ಕಾಲ ದೂರ ಉಳಿದಿದ್ದ ನಿವೇದಿತಾ ಗೌಡ ಮತ್ತೆ ಆ್ಯಕ್ಟಿವ್ ಆಗಿದ್ದಾರೆ.
ಇದೀಗ ಇನ್ಸ್ಟಾದಲ್ಲಿ ಹಂಚಿಕೊಂಡಿರುವ ರೀಲ್ಸ್ನಲ್ಲಿ ನಿವೇದಿತಾ ಗೌಡ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಸೊಂಟ ಕುಣಿಸುತ್ತಾ ನಿವಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿದ ಗಂಟೆಯಲ್ಲೇ 30 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಜೊತೆಗೆ ಕಾಮೆಂಟ್ಸ್ಗಳ ಸುರಿಮಳೆಯಾಗ್ತಿದೆ.
ನಿವೇದಿತಾ ಗೌಡ ಅವರ ಹೊಸ ವಿಡಿಯೋಗೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು, ಹೆಚ್ಚಿನವರು ನಿವೇದಿತಾ ಗೌಡ ಅವರ ಹಾಟ್ ಅವತಾರವನ್ನು ಮೆಚ್ಚಿದ್ದಾರೆ. ಇನ್ನೂ ಕೆಲವರು ಸೊಂಟವನ್ನು ತೋರಿಸುವ ಸಲುವಾಗಿಯೇ ನೀವು ಈ ರೀತಿಯ ಪೋಸ್ಟ್‌ಗಳನ್ನು ಮಾಡ್ತಾ ಇದ್ದೀರಿ ಅನ್ನೋದು ಅರ್ಥವಾಗುತ್ತಿದೆ ಎಂದಿದ್ದಾರೆ. ಲಂಗ ಹೊಕ್ಕಳ ಮೇಲೆ ನಿಲ್ತಿಲ್ಲ ಅಂದ್ರೆ ಆವಾಗ ಮಾತ್ರ ಹೆಣ್ಣಿಗೆ ಸ್ವಾತಂತ್ರ್ಯ ಸಿಕ್ಕಿದೆ ಅಂತ ಅರ್ಥ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಮೂರು ಬಿಟ್ಟವರು ಊರಿಗೆ ದೊಡ್ಡವರು ಅಂತಾ ಹೇಳ್ತಾರೆ. ಇದು ಕಲಿಯುಗ.., ಅಕ್ಕ ನೀವು ಈ ವಿಡಿಯೋ ಪೋಸ್ಟ್ ಮಾಡಿ ಏನ್ ಹೇಳ್ತಾ ಇದ್ದೀರಿ ಅನ್ನೋದು ಅರ್ಥವಾಗ್ತಿಲ್ಲ. ಏನ್ ವಿಷ್ಯ ಅಂತಾ ನೇರವಾಗಿ ಹೇಳಿ.., ನಿಮ್ಮ ಈ ರೀತಿಯ ಪೋಸ್ಟ್‌ಅನ್ನೇ ನಾವು ನಿರೀಕ್ಷೆ ಮಾಡ್ತಿದ್ದೆವು.. ಎಂದು ನಿವೇದಿತಾ ಗೌಡ ಪೋಸ್ಟ್‌ಗೆ ಲೈಕ್ ಮಾಡಿದ್ದಾರೆ.
ಇದನ್ನೂ ಓದಿ : ಅಕ್ರಮ ಆಸ್ತಿ ಗಳಿಕೆ ಆರೋಪ – ಕೇಂದ್ರ ಸಚಿವ ವಿ. ಸೋಮಣ್ಣಗೆ ಬಿಗ್ ರಿಲೀಫ್..!