ಚನ್ನಪಟ್ಟಣ : ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆದು ಫಲಿತಾಂಶ ಹೊರಬಿದ್ದಿದೆ. ಈ ಪೈಕಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ನಿಖಿಲ್ಗೆ ಚನ್ನಣಪಟ್ಟ ಅಖಾಡದಲ್ಲಿ ತೊಡೆತಟ್ಟಿ, ಗೆಲುವು ಸಾಧಿಸಿದ್ದಾರೆ. ಈ ಫಲಿತಾಂಶ ನಿಖಿಲ್ ಕುಮಾರಸ್ವಾಮಿ ಅವರಿಗೆ ಭೀಕರ ಆಘಾತ ನೀಡಿದ್ದು, ಜೆಡಿಎಸ್ ನಾಯಕರು ಫಲಿತಾಂಶದ ತೀವ್ರತೆ ನೋಡಿ ಬೆಚ್ಚಿಬಿದ್ದಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕಣದಲ್ಲಿ ನಿಖಿಲ್ ಕುಮಾರಸ್ವಾಮಿ ತಮ್ಮ ಮೊದಲ ಚುನಾವಣೆಯಲ್ಲಿಯೇ ಸೋಲು ಅನುಭವಿಸಿದ್ದರು. ಬಳಿಕ 2023ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸೋಲುಂಡಿದ್ದರು. ಹೀಗಾಗಿ ಮಗನನ್ನು ಚನ್ನಪಟ್ಟಣದಲ್ಲಿ ಶತಾಯಗತಾಯ ಗೆಲ್ಲಿಸಲೇಬೇಕೆಂದು ಪಣ ತೊಟ್ಟಿದ್ದ, ಹೆಚ್‌ಡಿ ಕುಮಾರಸ್ವಾಮಿ ಹಾಗೂ ಮೊಮ್ಮಗನ ಪರ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡರೇ ಕಣಕ್ಕಿಳಿದು ಭರ್ಜರಿ ಪ್ರಚಾರ ನಡೆಸಿದ್ದರು. ಆದರೆ ನಿಖಿಲ್ ಕುಮಾರಸ್ವಾಮಿ ಮತ್ತೊಮ್ಮೆ ಹೀನಾಯ ಸೋಲು ಕಂಡಿದ್ದಾರೆ.
ಮಂಡ್ಯ ರಣಕಣದಲ್ಲಿ ಮೊದಲನೇ ಬಾರಿ ಸೋತ್ತಿದ್ದ ನಿಖಿಲ್, ಎರಡನೇಯ ಬಾರಿ ರಾಮನಗರ ಅಖಾಡಕ್ಕೆ ಧುಮುಕಿದ್ದರು. ಅಲ್ಲಿಯೂ ಅವರಿಗೂ ನಿರಾಸೆ ಉಂಟಾಗಿತ್ತು. ಹೀನಾಯ ಸೋಲು ಕಂಡಿದ್ದರು. ಇದಾದ ಬಳಿಕ ಸಾಮಾನ್ಯ ಕಾರ್ಯಕರ್ತನಂತೆ ಇರುತ್ತೇನೆ ಅಂತ ಹೇಳಿದ್ದರು. ಆದರೆ ಬೈ ಎಲೆಕ್ಷನ್ ಡೇಟ್ ಅನೌನ್ಸ್ ಆಗಿದ್ದೇ ತಡ ಚನ್ನಪಟ್ಟಣ ಅಖಾಡಕ್ಕೆ ಅಗ್ನಿಪರೀಕ್ಷೆಗೆ ಇಳಿದಿದ್ರು. ಇದೀಗ ಮತ್ತೆ ಸೋಲು ಕಂಡಿದ್ದಾರೆ. ಹೀಗಾಗಿ ನಿಖಿಲ್ ನಿರಂತರ ಸೋಲಿಗೆ ಜಾತಕ ದೋಷ ಕಾರಣವಾಯ್ತ ಎಂಬ ಚರ್ಚೆಗಳು ಶುರುವಾಗಿದೆ.
ಕುಂಭ ರಾಶಿಯಲ್ಲಿ ಜನಿಸಿರುವ ನಿಖಿಲ್ ಕುಮಾರಾಸ್ವಾಮಿಗೆ ಜನ್ಮದಲ್ಲೇ ಶನಿ ಇರುವುದರಿಂದ ನಿರಂತರ ಸೋಲು ಕಾರಣವಾಗಿದೆಯಂತೆ. ಇನ್ನು 5 ವರ್ಷ ನಿಖಿಲ್ಗೆ ಶುಕ್ರ ದೆಸೆ ಇಲ್ವಂತೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಇದನ್ನೂ ಓದಿ : ಈ ವಾರ ಬಿಗ್ಬಾಸ್ ಮನೆಯಿಂದ ಆಚೆ ಬರೋದು ಯಾರು?