ಕಿರುತೆರೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದ ಬಿಗ್ ಬಾಸ್ ಸೀಸನ್11 ರಿಯಾಲಿಟಿ ಶೋಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ‘ಬಿಗ್ ಬಾಸ್’ ಲೋಗೋವನ್ನು ಕಲರ್ಸ್ ಕನ್ನಡ ವಾಹಿನಿ ಪರಿಚಯಿಸಿದ್ದು, ರಿಯಾಲಿಟಿ ಶೋ ಕುರಿತಾದ ಅಪ್‌ಡೇಟ್‌ಗಳನ್ನು ನೀಡಲು ಆರಂಭಿಸಿದೆ. ಅದರ ನಡುವೆ ಈ ಬಾರಿ ಬಿಗ್ ಬಾಸ್‌ನಲ್ಲಿ ಕಿಚ್ಚ ಸುದೀಪ್ ಅವರ ನಿರೂಪಣೆ ಇರೋದಿಲ್ಲ ಅನ್ನೊ ವದಂತಿ ಹಬ್ಬಿಕೊಂಡಿದೆ.
ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಿಚ್ಚ ಸುದೀಪ್ ಬಿಗ್ ಬಾಸ್‌ನಲ್ಲಿ ಆಂಕರ್ ಆಗಿ ಮುಂದುವರಿಯುವ ಬಗ್ಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದರು. ಆ ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 11ನ ಮೊದಲ ಪ್ರೋಮೋ ಹಂಚಿಕೊಂಡಿದ್ದ ಕಲರ್ಸ್ ಕನ್ನಡ, ಅದರಲ್ಲಿ ಕಿಚ್ಚ ಸುದೀಪ್ ಅವರ ಹ್ಯಾಶ್ಟ್ಯಾಗ್ನ್ನು ಬಳಕೆ ಮಾಡಿತ್ತು. ಇದರಿಂದಾಗಿ ಈ ಬಾರಿಯೂ ಸುದೀಪ್ ಅವರೇ ಶೋನ ನಿರೂಪಕರಾಗಿ ಮುಂದುವರಿಯಲಿದ್ದಾರೆ ಎನ್ನುವುದು ಖಚಿತವಾಗಿತ್ತು. ಇತ್ತೀಚೆಗೆ ಆ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರ ಹ್ಯಾಶ್ಟ್ಯಾಗ್ನ್ನು ಕಲರ್ಸ್ ಕನ್ನಡ ತೆಗೆದ ಕಾರಣಕ್ಕೆ ಸುದೀಪ್ ಅವರು ಆಂಕರ್ ಆಗುವ ಬಗ್ಗೆ ಮತ್ತೆ ಅನುಮಾನಗಳೆದ್ದಿದ್ದವು.
ನಿನ್ನೆ ಕಲರ್ಸ್ ಕನ್ನಡ ಹೊಸ ಪ್ರೋಮೋವನ್ನು ಹಂಚಿಕೊಂಡಿದೆ. ‘ ಹೊಸ ದಶಕ, ಹೊಸ ಆಟ, ಹೊಸ ಅಧ್ಯಾಯ; ಬಿಗ್ ಬಾಸ್ ಕನ್ನಡ ಸೀಸನ್ 11’ ಎಂದು 34 ಸೆಕೆಂಡ್‌ನ ಪ್ರೋಮೋ ರಿಲೀಸ್ ಮಾಡಿದೆ. ಇದರಲ್ಲಿ ಬಿಗ್ ಬಾಸ್‌ನ ಹೊಸ ವಾಯ್ಸ್ ಇದ್ದು ಆಂಕರ್ ಬಗ್ಗೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ‘ನಮಸ್ಕಾರ ಕರ್ನಾಟಕ, ಹೇಗಿದ್ದೀರಾ? 10 ವರ್ಷದಿಂದ ನೋಡ್ತಾನೆ ಇದ್ದೀರಾ? ಇದು ದೊಡ್ಡದಾಗ್ತಾನೇ ಇದೆ. ಈ ಬಾರಿ ಇನ್ನೂ ದೊಡ್ಡದು ಕಾದಿದೆ. ಯಾಕಂದ್ರೆ ಇದು ಹೊಸ ದಶಕ. ಹೊಸ ಆಟ, ಹೊಸ ಅಧ್ಯಾಯ’ ಎಂದು ಹೇಳುವುದರೊಂದಿಗೆ ಅರ್ಧಕ್ಕೆ ನಿಲ್ಲುತ್ತದೆ. ‘ಹಾಗಾದರೆ ಆಂಕರ್ ಕೂಡ ಹೊಸಬ್ರಾ..’ ಎಂದು ಮಗು ಪ್ರಶ್ನೆ ಮಾಡುತ್ತದೆ. ಈ ಪ್ರಶ್ನೆ ಕೇಳಿದ ಬೆನ್ನಲ್ಲೇ ವ್ಯಕ್ತಿಯೊಬ್ಬರು ನಗುವ ಸದ್ದು ಕೇಳುತ್ತದೆ. ಅಲ್ಲಿಗೆ ಪ್ರೋಮೋ ಮುಕ್ತಾಯ ಕಂಡಿದೆ.
ಇದರ ಬೆನ್ನಲ್ಲಿಯೇ ಆಂಕರ್ ಬದಲಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಹೆಚ್ಚಿನವರು ಕೊನೆಯ ನಗು ನೋಡಿದರೆ, ರಿಷಬ್ ಶೆಟ್ಟಿ ಹೊಸ ಆಂಕರ್ ಆಗಬಹುದು ಎನ್ನುತ್ತಿದ್ದ
ಇದನ್ನೂ ಓದಿ : ಮೈಸೂರು : ಮಗಳ ಮದುವೆಗೆ ಇಟ್ಟಿದ್ದ 20 ಲಕ್ಷ ನಗದು, 500 ಗ್ರಾಂ ಚಿನ್ನ ಕಳವು..!