ನೆಲಮಂಗಲ : ತ್ಯಾಮಗೊಂಡ್ಲು ಹೋಬಳಿಯ ಕುಲವನಹಳ್ಳಿ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಮೋಹನ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಲಾಗಿದ್ದು, ಆರೋಪಿಗಳ ವಿರುದ್ಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾಲಕ್ಷ್ಮಿ ಹಾಗೂ ಅವರ ಕುಟುಂಬದವರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಹಾಲಕ್ಷ್ಮಿ ಅವರು ಪಂಚಾಯಿತಿಯಲ್ಲಿ ಡಾಟಾ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಕರ್ತವ್ಯ ಲೋಪದ ಆರೋಪದ ಮೇಲೆ ಕಳೆದ 5 ತಿಂಗಳ ಹಿಂದೆ ಅವರನ್ನು ಪಂಚಾಯಿತಿ ಆಡಳಿತ ಅಮಾನತು ಮಾಡಿತ್ತು. ಈ ಸಂಬಂಧ ಮಹಾಲಕ್ಷ್ಮಿ ನ್ಯಾಯಾಲಯದ ಮೊರೆ ಹೋಗಿದ್ದರು. PDO ಕೂಡ ಮಹಾಲಕ್ಷ್ಮಿ ವಿರುದ್ಧ ಸಾಕ್ಷಿ ಹೇಳಲು ನಾಳೆ ಕೋರ್ಟ್ಗೆ ಹೋಗಬೇಕಿತ್ತು.
ಆದ್ರೆ ನಿನ್ನೆ (ಡಿ.6) ಏಕಾಏಕಿ ಕಚೇರಿಗೆ ನುಗ್ಗಿ ಮಹಾಲಕ್ಷ್ಮಿ ಕುಟುಂಬಸ್ಥರು ಗಲಾಟೆ ಮಾಡಿದ್ದು, ಮಹಾಲಕ್ಷ್ಮಿ ತಮ್ಮ ಯುವರಾಜ್, ಮಾವ ತಿಮ್ಮಯ್ಯ, ತಾಯಿ ಮಹಿಮಕ್ಕ ಸೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿ PDO ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಗಾಯಗೊಂಡಿರುವ ಮೋಹನ್ ಕುಮಾರ್ ಸದ್ಯ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ : ಬೆಳಗಾವಿ : ತನ್ನ ಮನೆಯಲ್ಲೇ ನೇಣಿಗೆ ಕೊರಳೊಡ್ಡಿ ಜೀವ ಬಿಟ್ಟ ಎಎಸ್ಐ.. ಕಾರಣವೇನು?