ನೆಲಮಂಗಲ : ನೆಲಮಂಗಲ ಸಮೀಪದ ನಾಗಸಂದ್ರ ಗ್ರಾಮಕ್ಕೆ ಕಾಡಿನಿಂದ ಆಹಾರ ಅರಸಿ ಬಂದ ಚಿರತೆ ನೀರಿನ ತೊಟ್ಟಿಗೆ ಬಿದ್ದ ಘಟನೆ ನಡೆದಿದೆ. ನರಸಿಂಹಮೂರ್ತಿ ಎಂಬುವವರ ತೋಟದ ನೀರಿನ ತೊಟ್ಟಿಗೆಯಲ್ಲಿ ಬಿದ್ದಿದ್ದ ಚಿರತೆಯನ್ನು ಕಂಡು ಸ್ಥಳೀಯರು ಭಯಬೀತ ಗೊಂಡಿದ್ದಾರೆ.
ಇನ್ನು ಚಿರತೆ ನೀರಿನ ತೊಟ್ಟಿಗೆ ಬಿದ್ದ ತಕ್ಷಣ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ಮಾದನಾಯಕನಹಳ್ಳಿ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ಭೂಮಿಯಿಂದ ದೂರ ಸರಿಯುತ್ತಿರುವ ಚಂದ್ರ – ಇನ್ನು ದಿನಕ್ಕೆ 24 ಅಲ್ಲ, 25 ಗಂಟೆ..!
Post Views: 474