Download Our App

Follow us

Home » ಸಿನಿಮಾ » ಬೆಂಗಳೂರಿನಲ್ಲಿ ‘ಸೂರ್ಯನ ಸಾಟರ್ಡೆ’ ಸಿನಿಮಾದ ಪ್ರಚಾರ ನಡೆಸಿದ ನ್ಯಾಚುರಲ್ ಸ್ಟಾರ್ ನಾನಿ..!

ಬೆಂಗಳೂರಿನಲ್ಲಿ ‘ಸೂರ್ಯನ ಸಾಟರ್ಡೆ’ ಸಿನಿಮಾದ ಪ್ರಚಾರ ನಡೆಸಿದ ನ್ಯಾಚುರಲ್ ಸ್ಟಾರ್ ನಾನಿ..!

ಟಾಲಿವುಡ್​​ನಲ್ಲಿ ನ್ಯಾಚುರಲ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟ ನಾನಿ ಅಭಿನಯದ ‘ಸರಿಪೋದಾ ಶನಿವಾರಂ’ ತಮಿಳು ಸಿನಿಮಾ ಕನ್ನಡದಲ್ಲಿ ‘ಸೂರ್ಯನ ಸಾಟರ್ಡೆ’ ಹೆಸರಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾದ ಪ್ರಚಾರಕ್ಕೆ ನಟ ನಾನಿ ಬೆಂಗಳೂರಿಗೆ ಆಗಮಿಸಿದ್ದಾರೆ. ಪ್ರಚಾರದ ಅಂಗವಾಗಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು.

ಈ ವೇಳೆ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, ‘ಸರಿಪೋದಾ ಶನಿವಾರಂ’ ತಮಿಳು ಸಿನಿಮಾ ಕನ್ನಡದಲ್ಲಿ ‘ಸೂರ್ಯನ ಸಾಟರ್ಡೆ’ ಹೆಸರಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿಯೂ ಸಿನಿಮಾ ತೆರೆಗೆ ಬರುತ್ತಿದ್ದು, ಥಿಯೇಟರ್​ನಲ್ಲಿ ಸಿನಿಮಾ ನೋಡುವಂತೆ ಮನವಿ ಮಾಡಿಕೊಂಡರು.

ಶಿವಣ್ಣನನ್ನು ಭೇಟಿಯಾದ ನಾನಿ : 

‘ಸೂರ್ಯನ ಸಾಟರ್ಡೆ’ ಸಿನಿಮಾದ ಪ್ರಚಾರಕ್ಕೆ ಬೆಂಗಳೂರಿಗೆ ಆಗಮಿಸಿದ ನಾನಿ ದೊಡ್ಮನೆಗೂ ವಿಸಿಟ್ ಹಾಕಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಚಿತ್ರದ ಬಗ್ಗೆ ಒಂದಷ್ಟು ಮಾತಕಥೆ ನಡೆಸಿದ್ದಾರೆ. ಈ ಹಿಂದೆ ನಾನಿ ನಟನೆಯ ಹಾಯ್ ನಾನ್ನ ಸಿನಿಮಾವನ್ನು ನೋಡಿ ಶಿವಣ್ಣ ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇನ್ನು ‘ಸೂರ್ಯನ ಸಾಟರ್ಡೆ’ ಚಿತ್ರವನ್ನ ವಿವೇಕ್ ಆತ್ರೇಯಾ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಮೂಲಕ ನಾನಿಗೆ ಎರಡನೇ ಬಾರಿಗೆ ವಿವೇಕ್ ಆತ್ರೇಯಾ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಹಿಂದೆ ಅಂಟೆ ಸುಂದರಾನಿಕಿ ಸಿನಿಮಾವನ್ನ ವಿವೇಕ್ ಆತ್ರೇಯಾ ಮಾಡಿದ್ದರು. ಈ ಚಿತ್ರದಲ್ಲಿ ನಾನಿನೇ ಹೀರೋ ಆಗಿದ್ದರು. ಇದು ಫ್ಯಾಮಿಲಿ ಎಂಟರಟೈನಮೆಂಟ್ ಇರೋ ಹಾಸ್ಯಮಯ ಚಿತ್ರವೇ ಆಗಿತ್ತು. ಸೂರ್ಯನ ಸಾಟರ್ಡೆ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ತೆಲುಗು, ತಮಿಳು, ಹಿಂದಿ, ಮಲೆಯಲಾಂ, ಕನ್ನಡ ಹಿಂಗೆ ಎಲ್ಲ ಭಾಷೆಯಲ್ಲಿಯೇ ಈ ಚಿತ್ರ ರಿಲೀಸ್ ಆಗುತ್ತದೆ.

ಸೂರ್ಯನ ಸಾಟರ್ಡೆ ಸಿನಿಮಾವನ್ನ ದಾನಯ್ಯ ಹಾಗೂ ಕಲ್ಯಾಣ್ ದಾಸರಿ ನಿರ್ಮಾಣ ಮಾಡಿದ್ದಾರೆ. ನಾನಿಗೆ ಜೋಡಿಯಾಗಿ ಪ್ರಿಯಾಂಕಾ ಮೋಹನ್ ನಟಿಸಿದ್ದು, ಎಸ್ ಜೆ ಸೂರ್ಯ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಆಗಸ್ಟ್-29 ತೆರೆಗೆ ಬರ್ತಿರುವ ಚಿತ್ರಕ್ಕೆ ಮುರಳಿ ಜಿ ಕ್ಯಾಮರಾವರ್ಕ್ ಮಾಡಿದ್ದಾರೆ. ಜೇಕ್ಸ್ ಬಿಜೋಯ್ ಸಂಗೀತ ಕೊಟ್ಟಿದ್ದಾರೆ.

ಇದನ್ನೂ ಓದಿ : ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಆ. 31ಕ್ಕೆ ಮುಂದೂಡಿಕೆ..!

Leave a Comment

DG Ad

RELATED LATEST NEWS

Top Headlines

ಬಸ್ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ – 7 ಮಂದಿ ದಾರುಣ ಸಾವು..!

ಮುಂಬೈ : ಬಸ್‌ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿರೋ ಘಟನೆ ಮುಂಬೈನ ಕುರ್ಲಾದಲ್ಲಿ ನಡೆದಿದೆ. ಟ್ರಾನ್ಸ್‌ಪೋರ್ಟ್ ಸಂಸ್ಥೆಯ ಬಸ್

Live Cricket

Add Your Heading Text Here