Download Our App

Follow us

Home » ರಾಜಕೀಯ » ನಾಮಪತ್ರ ಸಲ್ಲಿಕೆಗೆ ವಿದ್ಯಾರ್ಥಿಗಳ ಬಳಕೆಗೆ ಮುಂದಾದ್ರಾ ಸಂಸದ ತೇಜಸ್ವಿ ಸೂರ್ಯ?

ನಾಮಪತ್ರ ಸಲ್ಲಿಕೆಗೆ ವಿದ್ಯಾರ್ಥಿಗಳ ಬಳಕೆಗೆ ಮುಂದಾದ್ರಾ ಸಂಸದ ತೇಜಸ್ವಿ ಸೂರ್ಯ?

ಬೆಂಗಳೂರು : ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಹಾಲಿ ಸಂಸದ ತೇಜಸ್ವಿ ಸೂರ್ಯ ಇಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಡೆಯುವ ಮೆರವಣಿಗೆಯಲ್ಲಿ ಜೈನ್ ಕಾಲೇಜಿನ ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ‘ಫರ್ಮಾನು’ ಹೊರಡಿಸಿರುವುದು ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಸಂಸದ ತೇಜಸ್ವಿ ಸೂರ್ಯ ಕಾಲೇಜು ವಿದ್ಯಾರ್ಥಿಗಳು ಚುನಾವಣಾ ಮೆರವಣಿಗೆಯಲ್ಲಿ ಬಳಕೆಗೆ ಮುಂದಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಬೆಂಗಳೂರು ವಿವಿಪುರಂ ನಲ್ಲಿರುವ ಜೈನ್ ಕಾಲೇಜು ವಿದ್ಯಾರ್ಥಿಗಳು ವಾಟ್ಸ್ ಆಪ್ ಗ್ರೂಪ್ ನಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ ಎಂದು ತೇಜಸ್ವಿ ಸೂರ್ಯ ವಿರುದ್ಧ ಜೈನ್​ ಕಾಲೇಜು ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ.

ಈ ಸೂಚನೆಯಲ್ಲಿ “ಏಪ್ರಿಲ್ 4ರಂದು ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಮೆರವಣಿಗೆ ನಡೆಯಲಿದೆ. ವಿದ್ಯಾರ್ಥಿ ಪರಿಷತ್ತಿನ ಎಲ್ಲಾ ಸದಸ್ಯರು ಸೇರಿ ಎಲ್ಲ ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಗೆ ಜಯನಗರದ ಮೈಯ್ಯಾಸ್ ಹೋಟೆಲ್ ಬಳಿ ಸೇರಬೇಕು. ಅಲ್ಲಿ ನಿಮಗೆ ಟಿ-ಶರ್ಟ್ ನೀಡಲಾಗುವುದು. ಆದ್ದರಿಂದ ತಡ ಮಾಡಬಾರದು. ಕಡ್ಡಾಯವಾಗಿ ಇದರಲ್ಲಿ ಭಾಗವಹಿಸಬೇಕು. ಇದರಿಂದ ಯಾವುದೇ ವಿನಾಯಿತಿಯನ್ನು ನೀಡಲಾಗುವುದಿಲ್ಲ. ಇದಕ್ಕಾಗಿ ನೀವು ಹಾಜರಾತಿ ಪಡೆಯುತ್ತೀರಿ” ಎಂದು ವಾಟ್ಸಾಪ್ ಸಂದೇಶ ಹರಿದಾಡ್ತಿತ್ತು.

ವಾಟ್ಸಾಪ್ ಸಂದೇಶವನ್ನು ಇಟ್ಟುಕೊಂಡು ಕಾಂಗ್ರೆಸ್ ಟ್ವೀಟ್ – ಕಾಂಗ್ರೆಸ್ ಈ ವಿಚಾರವಾಗಿ ಟ್ವೀಟ್ ಮಾಡಿ ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಒತ್ತಾಯಿಸಿತ್ತು. ಆದ್ರೆ ಕಾಂಗ್ರೆಸ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಲು ಸಂಸದ ತೇಜಸ್ವಿ ಸೂರ್ಯ ಹಿಂದೇಟು ಹಾಕಿದ್ದರು.

ಇದೀಗ, ಈ ಬಗ್ಗೆ ಬಿಟಿವಿಗೆ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯೆ ನೀಡಿದ್ದಾರೆ. ನಮಗೆ ಸಾಮಾನ್ಯ ಜ್ಞಾನವಿದೆ. ನಾವು ಯಾರಿಗೂ ಆ ರೀತಿಯ ಸೂಚನೆ ನೀಡಿಲ್ಲ. ಇಲ್ಲ- ಸಲ್ಲದ ಆರೋಪ ಸುಳ್ಳು ಹೇಳುವ ಚಾಳಿ ಕಾಂಗ್ರೆಸ್ ಕೆಲಸವಾಗಿದೆ. ನಾನು ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ತೊಡಗಿದ್ದೇನೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ : ಮೈಸೂರು : ಬಿಯರ್ ತಯಾರಿಕ ಘಟಕದ ಮೇಲೆ ಅಬಕಾರಿ ಅಧಿಕಾರಿಗಳಿಂದ ದಾಳಿ – 98.52 ಕೋಟಿ ಮೌಲ್ಯದ ಬಿಯರ್, ಕಚ್ಚಾ ವಸ್ತು ವಶಕ್ಕೆ..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಬೈಕ್ ಸವಾರನ ಶವವನ್ನು 18 ಕಿ.ಮೀ​ ಎಳೆದೊಯ್ದು ಪರಾರಿಯಾದ ಕಾರು ಚಾಲಕ..!

ಕಾರು ಚಾಲಕನೊಬ್ಬ ಬೈಕ್​ಗೆ ಡಿಕ್ಕಿ ಹೊಡೆದು ಸವಾರನನ್ನು ಬರೋಬ್ಬರಿ 18 ಕಿಲೋ. ಮೀಟರ್​ ದೂರಕ್ಕೆ ಎಳೆದೊಯ್ದು ಪರಾರಿಯಾಗಿರುವ ಘಟನೆ ಅನಂತಪುರದಲ್ಲಿ ನಡೆದಿದೆ. ಈ ಘಟನೆ ಭಾನುವಾರ ರಾತ್ರಿ

Live Cricket

Add Your Heading Text Here