ಟಾಲಿವುಡ್ನ ಮೋಸ್ಟ್ ಕ್ಯೂಟ್ ಕಪಲ್ ಎಂದೇ ಖ್ಯಾತಿ ಪಡೆದಿದ್ದ ಅಕ್ಕಿನೆನಿ ನಾಗ ಚೈತನ್ಯ ಹಾಗೂ ಸಮಂತಾ ಕೆಲವು ಕಾರಣಗಳಿಂದ ಡಿವೋರ್ಸ್ ಪಡೆದು ಬೇರೆ ಬೇರೆಯಾಗಿದ್ದರು. ಡಿವೋರ್ಸ್ ಬೆನ್ನಲ್ಲೇ ನಾಗ ಚೈತನ್ಯ ಕುರಿತು ಸಾಕಷ್ಟು ರೂಮರ್ಸ್ ಕ್ರಿಯೇಟ್ ಆಗಿದ್ದವು. ಇದೀಗ ಅಚ್ಚರಿಯ ಸುದ್ದಿಯೊಂದು ರಿವೀಲ್ ಆಗಿದ್ದು, ಇದರಿಂದ ಸಮಂತಾ ಫ್ಯಾನ್ಸ್ ಶಾಕ್ ಆಗಿದ್ದಾರೆ.
ಹಿಂದಿ ಸಿನಿಮಾ ನಟಿ ಶೋಭಿತಾ ಧೂಳಿಪಾಲ ಜೊತೆ ನಾಗ ಚೈತನ್ಯ ಇಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ನಟ ನಾಗ ಚೈತನ್ಯ ಇಂಡಸ್ಟ್ರಿಯ ಖ್ಯಾತ ನಟಿಯ ಜೊತೆ ಆಗಸ್ಟ್ 8ರಂದೇ ಉಂಗುರ ಬದಲಾಯಿಸಿಕೊಳ್ಳಲಿದ್ದಾರೆ. ಎಂಗೇಜ್ಮೆಂಟ್ ಫೊಟೋಗಳನ್ನು ನಾಗ ಚೈತನ್ಯ ತಂದೆ ನಾಗಾರ್ಜುನ ಶೇರ್ ಮಾಡಲಿದ್ದಾರಂತೆ.
ಸಮಂತಾ-ನಾಗ ಚೈತನ್ಯ ಮಧ್ಯೆ ಡಿವೋರ್ಸ್ ಆದ ಮೇಲೆ ನಾಗ ಚೈತನ್ಯ ಅವರು ಶೋಭಿತಾ ಧೂಳಿಪಾಲ ಜೊತೆ ಸುತ್ತಾಡುತ್ತಿದ್ದಾರೆ. ಅವರ ಜೊತೆ ವೆಕೇಶನ್ಗೂ ಹೋಗಿದ್ದಾರೆ. ಇನ್ನೇನು ಮದುವೆ ಆಗ್ತಾರೆ ಎನ್ನಲಾಗ್ತಿತ್ತು. ಈ ಇಬ್ಬರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ರೂಮರ್ಸ್ ಕ್ರಿಯೇಟ್ ಮಾಡಲಾಗಿತ್ತು. ಈ ರೂಮರ್ಸ್ ಸತ್ಯ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ನಾಗ ಚೈತನ್ಯ ಹಾಗೂ ಸೋಭಿತಾ ಧೂಳಿಪಾಲ ಎಂಗೇಜ್ಮೆಂಟ್ ಬಗ್ಗೆ ಎಲ್ಲಿಯೂ ಅಧಿಕೃತ ಮಾಹಿತಿ ಇಲ್ಲ. ಅದರೆ ಸೋಶಿಯಲ್ ಮೀಡಿಯಾದಲ್ಲಿ ಇವರ ಬಗ್ಗೆ ಸುದ್ದಿ ಹರಿದಾಡುತ್ತಿರುವುದರಿಂದ ನಾಗ ಚೈತನ್ಯ-ಸೋಭಿತಾಗೆ ಅಭಿಮಾನಿಗಳು ಕಂಗ್ರಾಟ್ಸ್ ಹೇಳುತ್ತಿದ್ದಾರೆ.
ಇದನ್ನೂ ಓದಿ : ‘ಅಹೋ ವಿಕ್ರಮಾರ್ಕ’ ಸಿನಿಮಾದಲ್ಲಿ ಹೀರೋ ಆದ ಮಗಧೀರ ವಿಲನ್..!