ಟಾಲಿವುಡ್ ನಟ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ನಿಶ್ಚಿತಾರ್ಥ ಇಂದು ಅದ್ಧೂರಿಯಾಗಿ ನೆರವೇರಿದ್ದು, ಫೋಟೋ ಹಂಚಿಕೊಳ್ಳುವ ಮೂಲಕ ನಾಗಾರ್ಜುನ ಅವರು ಶುಭ ಹಾರೈಸಿದ್ದಾರೆ.
ನಾಗ ಚೈತನ್ಯ-ಸಮಂತಾ ಅವರು ಅಕ್ಟೋಬರ್ 2021 ರಲ್ಲಿ ವಿಚ್ಛೇದನ ಪಡೆದರು. ವಿಚ್ಛೇದನ ಬಳಿಕ ನಾಗ ಚೈತನ್ಯ ಅವರು ಶೋಭಿತಾ ಜೊತೆಗೆ ಡೇಟಿಂಗ್ನಲ್ಲಿರುವ ಸುದ್ದಿ ಕೇಳಿಬಂದಿತ್ತು. ಆದರೆ, ಈ ಬಗ್ಗೆ ಕುಟುಂಬವಾಗಲೀ ನಾಗ ಚೈತನ್ಯವಾಗಲೀ ಸ್ಪಷ್ಟನೆ ನೀಡಿರಲಿಲ್ಲ.
ಈ ನಡುವೆ ಇಬ್ಬರೂ ಒಟ್ಟಿಗೆ ಇರುವ ವೆಕೇಶನ್ ಫೋಟೋಗಳು ವೈರಲ್ ಆಗಿತ್ತು. ಆದರೆ ಎಂದೂ ಅವರು ತಾವು ರಿಲೇಷನ್ಶಿಪ್ನಲ್ಲಿರುವುದಾಗಿ ಒಪ್ಪಿಕೊಂಡಿರಲಿಲ್ಲ. ಇದೀಗ ಕುಟುಂಬಸ್ಥರ ಸಮ್ಮುಖದಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ನಿಶ್ಚಿತಾರ್ಥ ನಡೆದಿದ್ದು, ಈ ಮೂಲಕ ಊಹಾಪೋಹಗಳಿಗೆ ತೆರೆಬಿದ್ದಂತಾಗಿದೆ.
ನಿಶ್ಚಿತಾರ್ಥ ಸಂದರ್ಭದಲ್ಲಿ ನಟ ನಾಗ ಚೈತನ್ಯ ಬಿಳಿ ಪಂಚೆ ಹಾಗೂ ಕುರ್ತಾ ಧರಿಸಿದರೇ ಶೋಭಿತಾ ಧೂಳಿಪಾಲ ಅವರು ಸಿಂಪಲ್ ಆಗಿ ರೆಡಿಯಾಗಿದ್ದು, ಕನಕಾಂಬರ ಹೂವನ್ನು ಮುಡಿದಿದ್ದರು. ಇನ್ನು ನಾಗ ಚೈತನ್ಯ ಅವರು ಶೋಭಿತಾ ಜೊತೆ ಉಂಗುರ ಬದಲಾಯಿಸಿಕೊಂಡು ಮದುವೆ ಫಿಕ್ಸ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ‘ಚೌಕಾಬಾರ’ ಚಿತ್ರದ ಹಾಡಿಗೆ 69ನೇ ಸೌತ್ ಫಿಲಂ ಫೇರ್ ಪ್ರಶಸ್ತಿ..!