Download Our App

Follow us

Home » ರಾಜಕೀಯ » ಸಿಎಂ ಸಿದ್ದು ವಿರುದ್ದ ಮೈಸೂರು ಲೋಕಾಯುಕ್ತದಲ್ಲಿ ದೂರು – ಇಂದೇ ದಾಖಲಾಗುತ್ತಾ FIR?

ಸಿಎಂ ಸಿದ್ದು ವಿರುದ್ದ ಮೈಸೂರು ಲೋಕಾಯುಕ್ತದಲ್ಲಿ ದೂರು – ಇಂದೇ ದಾಖಲಾಗುತ್ತಾ FIR?

ಮೈಸೂರು : ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ FIR ದಾಖಲಿಸಿವಂತೆ ಮೈಸೂರಿನ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಪ್ರದೀಪ್ ಕುಮಾರ್ ಅವರಿಂದ ಪ್ರಕರಣ ದಾಖಲು ಮಾಡಲಾಗಿದೆ.

ಬೆಂಗಳೂರಿನಿಂದ ದೂರು ದಾಖಲಿಸಲು ಮೈಸೂರಿನ‌ ಕಚೇರಿಗೆ ಬಂದ ದೂರುದಾರ ಪ್ರದೀಪ್ ಕುಮಾರ್, ಮೈಸೂರು ಲೋಕಾಯುಕ್ತ ಎಸ್.ಪಿ ಸುದೇಶ್ ಅವರಿಗೆ ಕೋರ್ಟ್ ಆದೇಶದ ಮೇರೆಗೆ ಸಿಎಂ ಸಿದ್ದರಾಮಯ್ಯ ವಿರುದ್ದ FIR ದಾಖಲಿಸಬೇಕೆಂದು ಮನವಿ ಮಾಡಿದ್ದಾರೆ. ಪ್ರದೀಪ್​ ದೂರು ನೀಡುವ ವೇಳೆ ಜೆಡಿಎಸ್ ನಿಯೋಗ ಸಾಥ್​​​ ನೀಡಿದೆ.

ನಿನ್ನೆ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿತ್ತು. ಈ ಬೆನ್ನಲ್ಲೆ ಇದೀಗ ದೂರುದಾರ ಪ್ರದೀಪ್ ನೇತೃತ್ವದಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇನ್ನು, FIR ದಾಖಲು ಮಾಡಲು ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಹೈಕೋರ್ಟ್ ಆದೇಶ ಪಾಲನೆ ಮಾಡ್ತಿಲ್ಲ ಎಂದು ಪ್ರದೀಪ್​ ಆಕ್ರೋಶ ಹೊರಹಾಕಿದ್ದು, ನಮ್ಮ ದೂರಿಗೆ ಸ್ವೀಕೃತಿ ನೀಡಿದ್ದಾರೆ, ಎಂಡೋಸ್​ಮೆಂಟ್​ ನೀಡಿಲ್ಲ, ಎಂಡೋಸ್​ಮೆಂಟ್​ ನೀಡದಿದ್ರೆ ಧರಣಿ ಮಾಡುವೆ ಎಂದು ದೂರುದಾರ ಪ್ರದೀಪ್​​ ಹೇಳಿದ್ದಾರೆ.

ಇದನ್ನೂ ಓದಿ : ಬಿಗ್ ​ಬಾಸ್ ಆರಂಭಕ್ಕೂ ಮೊದಲೇ ಸೆಟ್​ನಲ್ಲಿ ಭಾರೀ ಅವಘಡ.. ಏನಾಯ್ತು?

Leave a Comment

DG Ad

RELATED LATEST NEWS

Top Headlines

ಬಿಗ್​ಬಾಸ್ ನಾವು ಇನ್ಮೇಲೆ ಯಾವ ಗೇಮೂ ಆಡಲ್ಲ – ಕ್ಯಾಪ್ಟನ್ ವಿರುದ್ಧ ತಿರುಗಿ ಬಿದ್ದ ನರಕವಾಸಿಗಳು.. ಅಂಥದ್ದೇನಾಯ್ತು?

ಬಿಗ್​ಬಾಸ್ ಕನ್ನಡ ಸೀಸನ್ 11 ಸಖತ್ ಇಂಟ್ರೆಸ್ಟಿಂಗ್ ಆಗಿ ಮೂಡಿ ಬರುತ್ತಿದೆ. ಈ ಬಾರಿ 17 ಮಂದಿ ಕಂಟೆಸ್ಟೆಂಟ್ಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದು, ಮೊದಲ ವಾರದಲ್ಲಿ ಯಮುನಾ

Live Cricket

Add Your Heading Text Here