ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆ ಇಂದಿನಿಂದ ದಸರಾ ಗಜಪಡೆಗಳ ತಾಲೀಮು ಆರಂಭಿಸಲಾಗಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗಳು ರಾಜಬೀದಿಗಳಲ್ಲಿ ಗಜಗಾಂಭಿರ್ಯದಿಂದ ಹೆಜ್ಜೆ ಹಾಕಿದೆ.
ಅರಮನೆಯಿಂದ ಬನ್ನಿ ಮಂಟಪದವರೆಗೆ ದಸರಾ ಗಜಪಡೆಗಳಿಗೆ ತಾಲೀಮು ಆರಂಭಿಸಿದ್ದು, ಇಂದಿನಿಂದ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ವೇಳೆ ದಸರಾ ಆನೆಗಳು ವಾಕಿಂಗ್ ಮಾಡಲಿವೆ. ಮೊದಲ ಹಂತದಲ್ಲಿ ಕಾಡಿನಿಂದ ಮೈಸೂರು ಅರಮನೆಗೆ 9 ಆನೆಗಳು ಆಗಮಿಸಿದೆ.
ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ದಸರಾ ಗಜಪಡೆಗಳು ರಾಜಬೀದಿಗಳಲ್ಲಿ ಗಜಗಾಂಭಿರ್ಯದಿಂದ ಹೆಜ್ಜೆ ಹಾಕಿ ತರಬೇತಿ ಮಾಡಲಾರಂಭಿಸಿದೆ. ಅರಮನೆಯಿಂದ ಸಯ್ಯಾಜೀರಾವ್ ರಸ್ತೆ, ಆಯುವೇರ್ದಿಕ್ ವೃತ್ತದ ಮೂಲಕ ಜಂಬೂ ಬಜಾರ್ ತಲುಪಿ ಹೈವೇ ಸರ್ಕಲ್ ಮೂಲಕ ದಸರಾ ಗಜಪಡೆಗಳು ಬನ್ನಿ ಮಂಟಪ ತಲುಪಲಿದೆ.
ಅರಮನೆಯಿಂದ ಬನ್ನಿಮಂಟಪದವರೆಗೆ 5 ಕಿ.ಮೀ ತಾಲೀಮು ನಡೆಯಲಿದ್ದು, ಜಂಬೂ ಸವಾರಿಯ ದಿನ ಯಾವುದೇ ತೊಂದರೆಯಾಗದಿರಲಿ ಎಂದು ತಾಲೀಮು ನಡೆಸಲಾಗುತ್ತಿದೆ. ಇನ್ನು ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ರಾಜ್ಯದ್ಯಂತ ಎಲ್ಲರೂ ಕಾತುರದಿಂದ ಕಾಯುತ್ತಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಕೂಡ ಮುತುವರ್ಜಿ ವಹಿಸಿ ಸಕಲ ತಯಾರಿ ನಡೆಸುತ್ತಿವೆ.
ಇದನ್ನೂ ಓದಿ : ಜಗದೊಡೆಯ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಜಲಕ್ಷಾಮ?