ಹುಬ್ಬಳ್ಳಿ : ಪೆರೋಲ್ ಮೇಲೆ ಬಂದು ಕೊಲೆಗೆ ಸಂಚು ಹೂಡಿದ್ದ ನಟೋರಿಯಸ್ ರೌಡಿಯನ್ನು ಹುಬ್ಬಳ್ಳಿ-ಧಾರವಾಡ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಟೋರಿಯಸ್ ರೌಡಿ ಬಚ್ಚಾಖಾನ್ ಬಂಧಿತ ಆರೋಪಿ.
ಪೆರೋಲ್ ಮೇಲೆ ಹೊರ ಬಂದಿದ್ದ ಬಚ್ಚಾಖಾನ್ ಜಮೀನು ವ್ಯವಹಾರದಲ್ಲಿ ಜೀವಬೆದರಿಕೆ ಹಾಕಿದ ಆರೋಪ ಇದೆ. ಹುಬ್ಬಳ್ಳಿಯ ವ್ಯಕ್ತಿಯೊಬ್ಬರಿಗೆ ಕೋಟ್ಯಂತರ ರೂ. ಕೊಡುವಂತೆ ಬೆದರಿಕೆ ಹಾಕಿದ್ದಾನೆ ಎನ್ನಲಾಗ್ತಿದೆ. ಜೀವಬೆದರಿಕೆ ಹಾಕಿದ್ದಾನೆಂದು ಬಚ್ಚಾಖಾನ್ ವಿರುದ್ಧ ದೂರು ಬಂದಿತ್ತು.
ಜಮೀನು ಮಾಲೀಕರು ಸಿಸಿಬಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಖರೀದಿದಾರರು ಹಾಗೂ ಮಾರಾಟಗಾರರ ನಡುವೆ ವಿವಾದ ಉಂಟಾಗಿತ್ತು. ಬಚ್ಚಾಖಾನ್ ತಂಡ ಜಮೀನು ಮಾರಾಟಗಾರರಿಗೆ ಹಣದ ಬೇಡಿಕೆ ಇಟ್ಟಿತ್ತು ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಜಮೀನು ಮಾಲೀಕರು ನೀಡಿದ ದೂರಿನ ಮೇರೆಗೆ, ಆರೋಪಿಗಳ ಪತ್ತೆಗಾಗಿ ಕಮಿಷನರ್ ಶಶಿಕುಮಾರ್ 3 ತಂಡ ರಚಿಸಿದ್ದರು. ಇದೀಗ ಹುಬ್ಬಳ್ಳಿ-ಧಾರವಾಡ ಪೊಲೀಸರು ಬಚ್ಚಾಖಾನ್ ಮತ್ತು ಸಹಚರರನ್ನು ಬೆಂಗಳೂರಿನಲ್ಲಿ ಬಂಧಿಸಿ, ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ.
ಇದನ್ನೂ ಓದಿ : ಸ್ಯಾಂಡಲ್ವುಡ್ನಲ್ಲಿ ಕಾಸ್ಟಿಂಗ್ ಕೌಚ್ ಬಿರುಗಾಳಿ – ಸಿಎಂಗೆ ಪತ್ರ ಬರೆದ 153 ನಟ, ನಟಿಯರು..!