ಬೆಂಗಳೂರು : ಇಂದಿರಾನಗರದ ಅಪಾರ್ಟ್‌ಮೆಂಟ್‌ನಲ್ಲಿ ಅಸ್ಸಾಂ ಮೂಲದ ಯುವತಿ ಮಾಯಾ ಗೊಗಾಯ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಸಂಬಂಧ ಪಟ್ಟಂತೆ ಕೊಲೆ ಆರೋಪಿ ಆರವ್ ಹನೋಯ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಲೆ ಮಾಡಿ ಹೊರ ರಾಜ್ಯಕ್ಕೆ ಎಸ್ಕೇಪ್ ಆಗಿದ್ದ ಆರೋಪಿಯನ್ನು ಪತ್ತೆ ಮಾಡಿದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಪತ್ತೆಗೆ ಹಿರಿಯ ಅಧಿಕಾರಿಗಳು ಎರಡು ವಿಶೇಷ ತಂಡ ರಚಿಸಿದ್ದರು. ಇಂದಿರಾನಗರ ಪೊಲೀಸರು ಆರೋಪಿ ಆರವ್ ಹನೋಯ್ನನ್ನು ಬೆಂಗಳೂರಿಗೆ ಕರೆತರುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ – ಶಾಸಕ ಸಿ.ಪಿ ಯೋಗೇಶ್ವರ್..!
Post Views: 345