ಬೆಂಗಳೂರು : ಬೆಂಗಳೂರಿನ ಹೊರವಲಯದಲ್ಲಿ ನಡೆದಿದ್ದ ಡಬಲ್ ಮರ್ಡರ್ ಕೇಸ್ಗೆ ಸಂಬಂಧಿಸಿದಂತೆ ಎಸ್ಕೇಪ್ ಆಗಿದ್ದ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಬಸ್ ಸರ್ವಿಸ್ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಬಂಧಿತ ಆರೋಪಿ.
ಬಂಧಿತ ಆರೋಪಿ ಸುರೇ,ಶ್ ಕುಡಿದ ನಶೆಯಲ್ಲಿ 55 ವರ್ಷದ ನಾಗೇಶ್, 50 ವರ್ಷದ ಮಂಜುನಾಥ್ ತಲೆಗೆ ಹೊಡೆದು ಹತ್ಯೆ ಮಾಡಿದ್ದನು. ನಾಗೇಶ್ ಮತ್ತು ಮಂಜುನಾಥ್ ಸದಾ ಸುರೇಶ್‌ಗೆ ಬೈಯ್ಯುತ್ತಿದ್ದರು. ಕುಡಿದ ಬಳಿಕ ನೀನು ಕಳ್ಳ, ನಿನ್ನ ಮೇಲೆ ಕೇಸ್‌ಗಳಿವೆ ಎಂದು ಸದಾ ಹಿಯಾಳಿಸುತ್ತಿದ್ದರು.
ಕೊಲೆಯಾದ ಶುಕ್ರವಾರ ರಾತ್ರಿ ಕೂಡ ಕುಡಿದು ನಿಂದನೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಸುರೇಶ್, ಇಬ್ಬರ ಮೇಲೂ ರಾಡ್ನಿಂದ ಹೊಡದು ಕೊಲೆ ಮಾಡಿ ಆರೋಪಿ ಸುರೇಶ್ ಎಸ್ಕೇಪ್ ಆಗಿದ್ದನು. ಬೆಂಗಳೂರು ಉತ್ತರ ತಾಲೂಕಿನ ಸಿಂಗಹಳ್ಳಿ ಗ್ರಾಮದ ಬಳಿ ಕೊಲೆ ನಡೆದಿತ್ತು.
ಇನ್ನು ಸುರೇಶ್, ನಾಗೇಶ್, ಮಂಜುನಾಥ್ ಈ ಮೂವರು ಸಹ ಬಸ್ ಸರ್ವಿಸ್ ಕೆಲಸ ಮಾಡ್ತಿದ್ದರು. ಇನ್ನು ಘಟನೆಯ ಸಂಬಂಧ ಬಾಗಲೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಕಾರ್ಯಚರಣೆ ನಡಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ಸುಪ್ರೀಂ ಕೋರ್ಟ್‌ನ 51ನೇ ಸಿಜೆಐ ಆಗಿ ಪ್ರಮಾಣವಚನ ಸ್ವೀಕರಿಸಿದ ನ್ಯಾ.ಸಂಜೀವ್ ಖನ್ನಾ..!