ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಅಕ್ರಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಸೈಟ್ ನೀಡಲಾಗಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಸೇರಿದಂತೆ ಹಲವರು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ್ದರು. ಮುಡಾ ಹೋರಾಟ ಮಾಡ್ತಿದ್ದ ಜೆಡಿಎಸ್-ಬಿಜೆಪಿಗೆ ಇದೀಗ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ದಾಖಲೆ ಮೂಲಕ ತಿರುಗೇಟು ನೀಡಿದ್ದಾರೆ.
ಕೇಂದ್ರ ಸಚಿವ ಹೆಚ್ಡಿಕೆ ವಿರುದ್ಧವೇ ಮುಡಾ ಬ್ರಹ್ಮಾಸ್ತ್ರ ಪ್ರಯೋಗಿಸಿದ ಎಂ.ಲಕ್ಷ್ಮಣ್ ಅವರು, ಕುಮಾರಸ್ವಾಮಿ ಅವ್ರೇ ಮಹೇಂದ್ರ ಯಾರು? ಮಹೇಂದ್ರಗೆ 19 ಸೈಟ್ ಬಂದಿದ್ದು ಹೇಗೆ..? ಗುಂಜ್ರಾಲ್ನಲ್ಲಿ ಮಹೇಂದ್ರ ಸೈಟ್ ಪಡೆದಿದ್ದೇಗೆ..?ನಿಮ್ಮ 18 ಸೈಟ್ಗಳ ಕಥೆ ಏನು..? ನನಗೆ ಗೊತ್ತು. ಮುಂದಿನ ದಿನಗಳಲ್ಲಿ ಮಹೇಂದ್ರ ಯಾರು ಗೊತ್ತಾಗುತ್ತೆ ಎಂದಿದ್ದಾರೆ.
ಇನ್ನು ಬಿಜೆಪಿ ನಾಯಕರೇ ಬಿಎಸ್ವೈ ತಂಗಿ ಮಗನಿಗೆ ಸೈಟ್ ಸಿಕ್ಕಿದ್ದೇಗೆ. ಜಾಗವೇ ಇಲ್ಲದ ರಾಜೇಶ್ 50-50 ರೂಲ್ಸ್ನಲ್ಲಿ ಸೈಟ್ ಪಡೆದಿದ್ದೇಗೆ? ಎಂದು ಮುಡಾ ಹೋರಾಟ ಮಾಡ್ತಿದ್ದ ಜೆಡಿಎಸ್-ಬಿಜೆಪಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ : MUDAದಲ್ಲಿ ಅಕ್ರಮ ನಡೆದಿರೋದು ರಾಜೀವ್ ಅವಧಿಯಲ್ಲೇ – ಸಚಿವ ಚಲುವರಾಯಸ್ವಾಮಿ ಸ್ಫೋಟಕ ಹೇಳಿಕೆ..!