ಬೆಂಗಳೂರು : ಮೂಡಾ ಹಗರಣದ ವಿರುದ್ಧ ವಿಧಾನಮಂಡಲದೊಳಗೆ ಅಹೋರಾತ್ರಿ ಧರಣಿ ಮೂಲಕ ಹೋರಾಟ ನಡೆಸಿದ ಬಿಜೆಪಿ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಪಡೆಯಬೇಕು ಹಾಗೂ ಈ ಹಗರಣದ ತನಿಖೆಯನ್ನು CBIಗೆ ವರ್ಗಾಯಿಸುವಂತೆ ಬಿಗಿ ಪಟ್ಟು ಹಿಡಿದಿತ್ತು. ಇದೀಗ ಮುಡಾ ಸೈಟ್ ಹಗರಣ ಆರೋಪಕ್ಕೆ BJP-JDSಗೆ ದಾಖಲೆ ಸಮೇತ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.
ಬರೋಬ್ಬರಿ 2 ಗಂಟೆಗೂ ಹೆಚ್ಚು ಕಾಲ ಪ್ರೆಸ್ಮೀಟ್ ನಡೆಸಿ ತಿರುಗೇಟು ಕೊಟ್ಟ ಸಿಎಂ ಸಿದ್ದರಾಮಯ್ಯ ಅವರು, ನಾನು ಅಕ್ರಮ ಮಾಡಿಲ್ಲ, ಕಾನೂನು ಬಾಹಿರ ಸೈಟ್ ಪಡೆದಿಲ್ಲ.
ನಾವು ಪರಿಹಾರ ಕೇಳಿದ್ದೆವು, ಭೂಮಿ ಕೇಳಿಯೇ ಇರಲಿಲ್ಲ. ನಮಗೆ 50-50 ರೂಲ್ಸ್ನಲ್ಲಿ ಸೈಟ್ ಕೊಟ್ಟಿದ್ದೇ ಮುಡಾ. BJP-JDSನವರೇ ಇದ್ದ ಕಮಿಟಿಯೇ ಸೈಟ್ ಹಂಚಿಕೆ ಮಾಡಿದೆ ಎಂದಿದ್ದಾರೆ.
ಬಿಜೆಪಿ ಸಿಎಂ ಇದ್ದಾಗಲೇ ಸೈಟ್ ಕೊಡೋ ನಿರ್ಧಾರ ಆಯ್ತು. ಮುಡಾ ಸೈಟ್ ಹಂಚಿಕೆ ಕಮಿಟಿಯಲ್ಲಿ ರಾಮದಾಸ್, ಜಿ.ಟಿ.ದೇವೇಗೌಡ, ನಾಗೇಂದ್ರ ಹಾಗೂ ಹೆಚ್.ವಿಶ್ವನಾಥ್, ಮರಿತಿಬ್ಬೇಗೌಡ ಸೇರಿ ಬೇರೆ ಪಕ್ಷದವ್ರೇ ಇದ್ರು. 50-50 ಅನುಪಾತದಲ್ಲಿ 909 ಸೈಟ್ಗಳು ಹಂಚಿಕೆ ಆಗಿವೆ. 2020ರಲ್ಲಿ 1000ಕ್ಕೂ ಹೆಚ್ಚು ಸೈಟ್ಗಳು ಹಂಚಿಕೆಯಾಗಿವೆ. ಇದೇ ರೀತಿ ವಿಜಯನಗರದಲ್ಲಿ 125 ಸೈಟ್ ಹಂಚಿದ್ದಾರೆ.
ಮುಡಾ ಸ್ವಾಯತ್ತ ಸಂಸ್ಥೆ ಅಲ್ಲವೇ? ಇದರಲ್ಲಿ ನನ್ನ ಪತ್ನಿ, ನನ್ನ ಮೈದುನ, ನನ್ನ ಪಾತ್ರವೂ ಇಲ್ಲ ಎಂದು ಸಿಎಂ ಸಿದ್ದು ದಾಖಲೆ ಸಮೇತ ಉತ್ತರ ಕೊಟ್ಟಿದ್ದಾರೆ.
ಇನ್ನೂ BJP-JDS ರಾಜಕೀಯ ಪ್ರೇರಿತ ಆರೋಪ ಮಾಡ್ತಿದೆ. ಸಿಎಂ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡ್ತಿದ್ದಾರೆ. ನಾನು 2ನೇ ಬಾರಿ ಸಿಎಂ ಆಗಿದ್ದು ಸಹಿಸೋಕೆ ಆಗ್ತಿಲ್ಲ ಎಂದು ಮುಡಾ ವಿಚಾರಕ್ಕೆ ರಾಶಿ-ರಾಶಿ ದಾಖಲೆ ಮುಂದಿಟ್ಟು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : ತುಂಗಭದ್ರಾ ಡ್ಯಾಂನಿಂದ ನದಿಗೆ ನೀರು – ಐತಿಹಾಸಿಕ ಹಂಪಿಯ ಸ್ಮಾರಕ, ಸ್ನಾನಘಟ್ಟಗಳು ಮುಳುಗಡೆ..!