ಕಲಬುರಗಿ : ಸೈಟ್ ವಾಪಸ್ ಕೊಟ್ಟ ತಕ್ಷಣ ಮಾಡಿದ ತಪ್ಪು ಮುಚ್ಚಿ ಹೋಗಲ್ಲ, ED ಈಗ ಪ್ರಾಥಮಿಕ ತನಿಖಾ ಮಾಹಿತಿ ನೀಡಿದೆ. ಮುಂದೆ ಮುಡಾ ಸೈಟ್ ಕರ್ಮಕಾಂಡ ಇನ್ನಷ್ಟು ಬಯಲಾಗುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಈ ಬಗ್ಗೆ ಕಲಬುರಗಿಯಲ್ಲಿ ಬಿ.ವೈ ವಿಜಯೇಂದ್ರ ಮಾತನಾಡಿ, ಇಡಿ ತನಿಖೆಯಲ್ಲಿ ಸಿಎಂ ಪತ್ನಿ ಸೈಟ್ ಅಕ್ರಮ ಅನ್ನೋದು ಗೊತ್ತಾಗಿದೆ. ಫೋರ್ಜರಿ ಸಹಿ, ದಾಖಲೆಗಳಿಗೆ ವೈಟ್ನರ್ ಹಾಕಿ ತಿದ್ದಲಾಗಿದೆ.
ಅಕ್ರಮವೇ ಆಗಿಲ್ಲ ಎಂದವರು 14 ಸೈಟ್ ವಾಪಸ್ ಮಾಡಿದ್ದೇಕೆ..? 700 ಕೋಟಿ ಹಗರಣ ಎಂದು ಪ್ರಾಥಮಿಕವಾಗಿ ಇಡಿ ಹೇಳಿದೆ ಎಂದಿದ್ದಾರೆ.
ಇದೇ ರೀತಿ ಸಾವಿರಾರು ಸೈಟ್ಗಳು ಅಕ್ರಮ ಹಂಚಿಕೆ ಆಗಿವೆ, ರಿಯಲ್ ಎಸ್ಟೇಟ್ ದಂಧೆಕೋರರು, ಪ್ರಭಾವಿಗಳ ಪಾಲಾಗಿವೆ. ಬಡವರ ಸೈಟ್ಗಳನ್ನು ಮುಡಾ ಬ್ರೋಕರ್ಗಳ ಪಾಲು ಮಾಡಿದೆ ಎಂದು
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಇದನ್ನೂ ಓದಿ : ರಾಜಾಜಿನಗರದ ಯುವತಿ ಆತ್ಮಹತ್ಯೆ ಕೇಸ್ಗೆ ಟ್ವಿಸ್ಟ್ – ಡೆತ್ ನೋಟ್ನಲ್ಲಿ ಸಾವಿನ ರಹಸ್ಯ ಬಯಲು..!
Post Views: 33