ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಇದೀಗ ಮೈಸೂರು ಮುಡಾ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಈ ಕೇಸ್ನಿಂದ ಹಿಂದೆ ಸರಿಯಲು ಸ್ನೇಹಮಯಿ ಕೃಷ್ಣ ಫ್ಯಾಮಿಲಿಗೆ ಕೋಟಿ-ಕೋಟಿ ಆಮಿಷವೊಡ್ಡಿದ ಆರೋಪ ಕೇಳಿ ಬಂದಿದೆ.
ಮುಡಾ ಪ್ರಕರಣದಿಂದ ಹಿಂದೆ ಸರಿಯಲು ನನಗೆ ಹಾಗೂ ನನ್ನ ಕುಟುಂಬಕ್ಕೆ ಆಮಿಷ, ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿ ದೂರುದಾರ ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಮಾಹಿತಿ ನೀಡಿದ ಸ್ನೇಹಮಯಿ ಕೃಷ್ಣ ಅವರು, ಶ್ರೀನಿಧಿ ಹರ್ಷ ಎನ್ನುವ ವ್ಯಕ್ತಿ ನನ್ನ ಬಳಿ ಇಬ್ಬರನ್ನು ಕರೆತಂದಿದ್ರು. ಈ ಕೇಸ್ನಲ್ಲಿ ಸಿಎಂ ಪತ್ನಿ ಪಾರ್ವತಿ ಅವರ ಪಾತ್ರ ಏನು ಇಲ್ಲ. ಮಲ್ಲಿಕಾರ್ಜುನಸ್ವಾಮಿ, ದೇವರಾಜ್, ಸಿ.ಟಿ.ಕುಮಾರ್ ಇದೆಲ್ಲವನ್ನೂ ಮಾಡಿದ್ದಾರೆ. ಸಿಟಿ ಕುಮಾರ್ ಹೇಳಿದ ಕಡೆ ಪಾರ್ವತಿ ಸಹಿ ಮಾಡಿದ್ದಾರೆ ಅಷ್ಟೇ. ಪಾರ್ವತಿ ಅವರು ತುಂಬಾ ನೊಂದಿದ್ದಾರೆ, ಊಟ ನಿದ್ರೆ ಮಾಡುತ್ತಿಲ್ಲ. ದಯಮಾಡಿ ಸಹಕಾರ ನೀಡಿ ನಿಮಗೆ ಎಷ್ಟು ಹಣ ಬೇಕೋ ಕೊಡ್ತೇವೆ ಎಂದು ನನ್ನುನ್ನು ಭೇಟಿ ಮಾಡಿ ಶ್ರೀನಿಧಿ ಹರ್ಷ ಎಂಬುವರು ಆಮಿಷವೊಡ್ಡಿದ್ದರು ಹೇಳಿದ್ದಾರೆ.
ಇನ್ನು ಒಪ್ಪದೇ ಇದ್ದಾಗ ನನ್ನ ಮನೆ ಬಳಿ ಬಂದು ಮಗನಿಗೂ ಆಮಿಷವೊಡ್ಡಿದ್ದಾರೆ. ನಾನು ಹೋರಾಟ ನಿಲ್ಲಿಸಲ್ಲ ದಯಮಾಡಿ ಹೋಗಿ ಎಂದು ಹೇಳಿದ್ದೆ. ನನ್ನ ಮಗನ ಬಳಿ ಬಂದು ಗಂಗರಾಜು ಎಂಬುವರಿಗೆ ಹಣ ನೀಡಿದ್ದೇವೆ. ಒಂದೂವರೆ ಕೋಟಿ ಕೊಟ್ಟಿದ್ದೇವೆ ನಿಮ್ಮ ತಂದೆಗೂ ಕೊಡ್ತೀವಿ ಎಂದಿದ್ದಾರೆ. ನನ್ನ ಮಗ ಹಣ ಪಡೆಯಲು ಒಪ್ಪಿಕೊಂಡಿಲ್ಲ. ಆಮಿಷ ಸಂಬಂಧ ED, ಲೋಕಾಗೂ ದೂರು ನೀಡಿದ್ದೇನೆ ಎಂದು ಮೈಸೂರಿನಲ್ಲಿ ದೂರುದಾರ ಸ್ನೇಹಮಯಿ ಕೃಷ್ಣ ತಿಳಿಸಿದರು.
ಇದನ್ನೂ ಓದಿ : ಸಕ್ಕರೆನಾಡಿನಲ್ಲಿ ವಿವಾಹಿತ ಜೋಡಿಯ ದಾರುಣ ಅಂತ್ಯ.. ಅಸಲಿಗೆ ಅಗಿದ್ದೇನು?