ಮೈಸೂರು : ಮುಡಾ ಪ್ರಕರಣದ ಕರ್ಮಕಾಂಡ ಬಗೆದಷ್ಟೂ ಬಯಲಾಗ್ತಿದ್ದು, ಸಿಎಂ ಪತ್ನಿ ಬಳಿಕ ಇದೀಗ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಕುಟುಂಬದ ವಿರುದ್ದವೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ಆರೋಪ ಕೇಳಿಬಂದಿದೆ.
ಜಿ.ಟಿ.ದೇವೇಗೌಡರ ಅಕ್ಕನ ಮಗ ಮಹೇಂದ್ರಗೆ 50-50 ಅನುಪಾತದ ಅಡಿಯಲ್ಲಿ 19 ಬದಲಿ ಸೈಟ್ ನೀಡಿರೋ ಆರೋಪ ಕೇಳಿಬಂದಿದ್ದು. ಭೂ ಮಾಲೀಕ ಅಲ್ಲದೇ ಇದ್ರೂ GTD ಅಳಿಯ ಮಹೇಂದ್ರಗೆ ಸೈಟ್ ನೀಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದು, ಅವರು ಮಹೇಂದ್ರ ವಿರುದ್ಧ ಲೋಕಾಗೆ ದೂರು ನೀಡಲು ಸಜ್ಜಾಗಿದ್ದಾರೆ.
ಮುಡಾ ನೀಡಿರುವ ಸೈಟ್ಗಳ ಬಗ್ಗೆ ತನಿಖೆ ಆಗಲಿ, ಜಿಟಿಡಿ ಅಕ್ಕನ ಮಗನ ಹೆಸರಲ್ಲಿ ಯಾವುದೇ ಜಮೀನು ಇರಲಿಲ್ಲ. ಮಹೇಂದ್ರ ಹೆಸರಲ್ಲಿ ಜಮೀನು ಇತ್ತೆಂದು ಸುಳ್ಳು ದಾಖಲೆ ಸೃಷ್ಟಿಸಲಾಗಿದೆ. ಮಹೇಂದ್ರಗೆ ನೀಡಿರುವ ಸೈಟ್ ಸರ್ಕಾರ ವಾಪಸ್ ಪಡೆಯಲಿ ಎಂದು ಸ್ನೇಹಮಯಿ ಕೃಷ್ಣ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ರಸ್ತೆ ಅಪಘಾತ : ಕಾಟೇರ ಸಿನಿಮಾದ ಬಾಲನಟ ಮಾಸ್ಟರ್ ರೋಹಿತ್ಗೆ ಗಾಯ..!
Post Views: 49