ಬೆಂಗಳೂರು : ಮುಡಾ ಪ್ರಕರಣದಲ್ಲಿ ಸೇಡಿನ ರಾಜಕೀಯ ಆಗ್ತಿದೆ, ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಮಾಡ್ತಾ ಇದೆ. EDಯಲ್ಲಿ ಕೇಸ್ ದಾಖಲಾಗಿರೋದಕ್ಕೆ ಇದಕ್ಕೆ ಸಾಕ್ಷಿ, ನಾವು ಮೊದಲಿನಿಂದಲೂ ಇದೇ ಆರೋಪ ಮಾಡಿದ್ದೆವು ಎಂದು ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಸಿಎಂ ಸಿದ್ದರಾಮಯ್ಯನವರು ಏನೂ ತಪ್ಪು ಮಾಡಿಲ್ಲ. ಆದರೂ ರಾಜಕೀಯ ದ್ವೇಷದಿಂದ FIR ಹಾಕಿಸಿದ್ದಾರೆ, ನನ್ನ ಪತಿಯ ರಾಜಕೀಯ ಹಾಳಾಗಬಾರದು ಅಂತಾ ಪತ್ನಿ ನಿರ್ಧರಿಸಿದ್ದಾರೆ. 14 ಸೈಟ್ ವಾಪಸ್ ಮಾಡೋದಾಗಿ ಮುಡಾಗೆ ಪತ್ರ ಬರೆದಿದ್ದಾರೆ, ಪತ್ರ ಬರೆದ ಮಾತ್ರಕ್ಕೆ ತಪ್ಪು ಒಪ್ಪಿಕೊಂಡಂತಲ್ಲ ಎಂದಿದ್ದಾರೆ.
ಪತ್ರದಲ್ಲಿ ಏನ್ ಕಾರಣ ಅಂತಾ ಸ್ಪಷ್ಟವಾಗಿ ಹೇಳಿದ್ದಾರೆ, ಪರಿಹಾರವೂ ಬೇಡ.. ಸೈಟೂ ಬೇಡ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಇವ್ರೆಲ್ಲಾ ರಾಜಕಾರಣ ಮಾಡಿದ್ದಕ್ಕೆ ಸಿಎಂ ಪತ್ನಿ ನೊಂದಿದ್ದಾರೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಇದನ್ನೂ ಓದಿ : ಮುಡಾ ಕೇಸ್ – 18 ಅಧಿಕಾರಿಗಳ ವಿರುದ್ಧ ECIR ದಾಖಲಿಸಿದ ED..!