ದೆಹಲಿ : ಮುಡಾ ಕೇಸ್ನಲ್ಲು ಸತ್ಯ ಮರೆಮಾಚೋ ಕೆಲಸ ಆಗ್ತಿದೆ. ದಾಖಲೆಗಳನ್ನು ತಿದ್ದಲೆಂದೇ ಅಧಿಕಾರಿಗಳ ಸಮಿತಿ ರಚಿಸಿದ್ರು. ಮುಡಾ ಕೇಸ್ನಲ್ಲಿ ಶೀಘ್ರವೇ ಸಿಎಂ ಸಿದ್ದು ಕ್ಲೀನ್ ಚಿಟ್ ಪಡೀತಾರೆ. ಹೀಗಾಗಿ ಕುರ್ಚಿ ಉಳಿಸಿಕೊಳ್ಳಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ಗುಡುಗಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಅಧಿಕಾರಿಗಳ ತಂಡ ರಚಿಸಿದ್ದೇ ದಾಖಲೆಗಳನ್ನು ನಾಶ ಮಾಡೋಕೆ. ರಾತ್ರೋರಾತ್ರಿ ತನಿಖಾಧಿಕಾರಿಯನ್ನು ಸಿಎಂ ಬಾಮೈದ ಭೇಟಿ ಮಾಡ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಖುದ್ದು ಸಿಎಂ ಸಿದ್ದರಾಮಯ್ಯ ಅವ್ರೇ ಮುಡಾ ಕೇಸ್ನಲ್ಲಿ A-1 ಆಗಿದ್ದಾರೆ. ಸಿಎಂ ಸ್ಥಾನದ ಘನತೆ ಬಗ್ಗೆ ಗೌರವ ಇದ್ರೆ ರಿಸೈನ್ ಮಾಡ್ಬೇಕಿತ್ತು. ತನಿಖಾ ಸಂಸ್ಥೆಗಳ ಮೇಲೆ ಒತ್ತಡ ಹೇರಿ ತಮಗೆ ಬೇಕಾದ ವರದಿ ಪಡೀತಿದ್ದಾರೆ ಎಂದು ದೆಹಲಿಯಲ್ಲಿ ಬಿ.ವೈ.ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
ಇದೇ ವೇಳೆ ಸರ್ಕಾರದ ಗುಡುಗಿದ ಅವರು, ಈ ಸರ್ಕಾರ ಹೆಚ್ಚು ದಿನ ಇರೋದಿಲ್ಲ. ಈ ಮಾತನ್ನು ನಾನ್ ಹೇಳಿತಿಲ್ಲ. ಮೈಸೂರಿನಲ್ಲಿ ಕಾಂಗ್ರೆಸ್ ನಾಯಕ ಪರಮೇಶ್ವರ್ ಅವ್ರೇ ಹೇಳಿದ್ದಾರೆ. ಇನ್ನು ಕಾಂಗ್ರೆಸ್ ನಾಯಕರಿಗೇ ತಮ್ಮ ಸರ್ಕಾರದ ಬಗ್ಗೆ ವಿಶ್ವಾಸ ಇಲ್ಲ. ಪದೇ-ಪದೇ ಸರ್ಕಾರದ ಬಗ್ಗೆಯೇ ಮಾತ್ನಾಡ್ತಾರೆ. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಸರ್ಕಾರ ಮುಳುಗಿಹೋಗಿದೆ ಎಂದ ವಿಜಯೇಂದ್ರ ಕಿಡಿಕಾರಿದ್ದಾರೆ.
ಇದನ್ನೂ ಓದಿ : ‘ಕುಂಭ ಸಂಭವ’ದಲ್ಲಿ ಮತ್ತೆ ಪೊಲೀಸ್ ಅಧಿಕಾರಿಯಾದ ‘ಭೀಮ’ ಖ್ಯಾತಿಯ ಪ್ರಿಯ..!