ಬೆಂಗಳೂರು : ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ಬೆಳವಣಿಗೆ ನಡೆದಿದ್ದು, ತನಿಖಾ ವರದಿ ಬರುವ ಮುನ್ನವೇ ಸರ್ಕಾರ ದೊಡ್ಡ ನಿರ್ಧಾರ ಕೈಗೊಂಡಿದೆ. ಮುಡಾ ಮಂಜೂರು ಮಾಡಿದ್ದ 48 ಸೈಟ್ ರದ್ದು ಮಾಡಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಲತಾ ಆದೇಶ ಹೊರಡಿಸಿದ್ದಾರೆ.
2023ರ ಡಿ.23ರಂದು ಮುಡಾ ಸಾಮಾನ್ಯ ಸಭೆ ಸೈಟ್ ಮಂಜೂರು ಮಾಡಿದ್ದು, ದಟ್ಟಗಳ್ಳಿ ಲೇಔಟ್ನಲ್ಲಿ 50-50 ಅನುಪಾತದಡಿ ಸೈಟ್ ಹಂಚಿಕೆ ಆಗಿತ್ತು. ಚಾಮುಂಡೇಶ್ವರಿ ಸರ್ವೋದಯ ಸಂಘ ಪರಿಹಾರ ಬಯಸಿ ಅರ್ಜಿ ಹಾಕಿತ್ತು. ಮುಡಾದಿಂದ ಪರಿಹಾದ ಬಯಸಿ ಹೈಕೋರ್ಟ್ಗೆ ಹಾಕಿದ್ದ ಅರ್ಜಿ ವಜಾ ಆಗಿತ್ತು. ಅರ್ಜಿ ವಜಾ ಆಗಿದ್ದರೂ ನಿಯಮ ಮೀರಿ 48 ಸೈಟ್ ಹಂಚಿಕೆ ಮಾಡಲಾಗಿತ್ತು.
ಅಂದಿನ ಮುಡಾ ಕಮಿಷನರ್ ಜಿ.ಟಿ.ದಿನೇಶ್ ಕುಮಾರ್ರಿಂದ ಸೈಟ್ ಮಂಜೂರು ಮಾಡಿದ್ದರು.
ಮುಡಾ ಅಧ್ಯಕ್ಷರಾಗಿದ್ದ ಯಶಸ್ವಿ ಸೋಮಶೇಖರ್ ಸಾಮಾನ್ಯ ಸಭೆ ನಡೆಸಿದ್ದರು. ಈ ವೇಳೆ ಭೂಸ್ವಾಧೀನ ಮಾಡಿಕೊಳ್ಳದೆ ಲೇಔಟ್ ಡೆವಲಪ್ ಮಾಡಿದ್ದ ಹಿನ್ನೆಲೆ ಪರಿಹಾರ ರೂಪದಲ್ಲಿ 48 ಸೈಟ್ ಕೊಡಲು ಸಾಮಾನ್ಯ ಸಭೆ ಒಪ್ಪಿತ್ತು. ಸೈಟ್ ಪಡೆದವರು ಆ ಜಾಗದಲ್ಲಿ ಸ್ವಾಧೀನದಲ್ಲಿದ್ದ ಕಾರಣಕ್ಕೆ ಸೈಟ್ನ್ನು ಪರಿಹಾರವಾಗಿ ಕೊಟ್ಟಿದ್ದರು. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸೈಟ್ ಈಗ ಮುಡಾಗೆ ವಾಪಸ್ ಆಗಿದ್ದು, ಸರ್ಕಾರದ ಆದೇಶ ಬೆನ್ನಲ್ಲೇ 48 ಸೈಟ್ಗಳ ಖಾತೆ ರದ್ದಾಗಿದೆ.
ಇದನ್ನೂ ಓದಿ : ‘ತಾಯವ್ವ’ ಚಿತ್ರತಂಡಕ್ಕೆ ಶುಭ ಹಾರೈಸಿದ ವಿಪಕ್ಷ ನಾಯಕ ಆರ್.ಅಶೋಕ್..!