Download Our App

Follow us

Home » ಅಪರಾಧ » ಕೌಟುಂಬಿಕ ಕಲಹ – ಕೆ.ಆರ್​​.ಪುರಂನಲ್ಲಿ ಮಗುವನ್ನು ಕೊಂ*ದು ಆತ್ಮಹ*ತ್ಯೆಗೆ ಯತ್ನಿಸಿದ ತಾಯಿ..!

ಕೌಟುಂಬಿಕ ಕಲಹ – ಕೆ.ಆರ್​​.ಪುರಂನಲ್ಲಿ ಮಗುವನ್ನು ಕೊಂ*ದು ಆತ್ಮಹ*ತ್ಯೆಗೆ ಯತ್ನಿಸಿದ ತಾಯಿ..!

ಬೆಂಗಳೂರು : ಕೌಟುಂಬಿಕ ಕಲಹಕ್ಕೆ ಮಗುವನ್ನು ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸಿಗೇಹಳ್ಳಿಯಲ್ಲಿ 2 ವರ್ಷದ ಮಗು ಶೃತಿಕಾಳನ್ನು ಕೊಲೆಗೈದು ತಾಯಿ ಚಿನ್ನಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಈ ಹೃದಯ ವಿದ್ರಾವಕ ಘಟನೆ ಮಾರ್ಚ್​ 17ರಂದು ನಡೆದಿದೆ. ಆಂಧ್ರದ ಚಿತ್ತೂರು ಮೂಲದ ದಂಪತಿ 3 ತಿಂಗಳ ಹಿಂದೆ ಸೀಗೇಹಳ್ಳಿಗೆ ಬಂದಿದ್ದು, ಗಂಡ ಲಕ್ಷ್ಮೀನಾರಾಯಣ ಪ್ರತಿದಿನ ಹಿಂಸೆ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಗಂಡನ ಹಿಂಸೆ ತಾಳಲಾರದೇ ಪತ್ನಿ ಆತ್ಮಹತ್ಯೆ ಮಾಡ್ಕೋತೀನಿ ಎನ್ನುತ್ತಿದ್ದಳು. ಮಾರ್ಚ್​ 16ರಂದು ಪತಿ-ಪತ್ನಿ ನಡುವೆ ಜಗಳ ಆಗಿತ್ತು.

ಮರುದಿನ ಬೆಳಗ್ಗೆ ತಾಯಿ ಮಗುವನ್ನು ಉಸಿರುಗಟ್ಟಿಸಿ ಕೊಂದಿದ್ದು, ಆನಂತರ ತಾಯಿ ಚಿನ್ನಾ ಚೂರಿಯಿಂದ ಕತ್ತು ಸೀಳಿಕೊಂಡಿದ್ದಾಳೆ. ಕೂಡಲೇ ಸ್ಥಳೀಯರು ಚಿನ್ನಾಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪತಿ ಲಕ್ಷ್ಮೀನಾರಾಯಣನನ್ನು ಕೆ.ಆರ್​​​​.ಪುರಂ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : ಬೆಂಗಳೂರು : ಬೆಂಕಿ ಹಚ್ಚಿಕೊಂಡು ಒಂದೇ ಕುಟುಂಬದ ಮೂವರು ಆತ್ಮಹ*ತ್ಯೆ..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಉಡುಪಿ : ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವೃದ್ಧೆ ಸಾ*ವು..!

ಉಡುಪಿ : 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶವಿದೆ. ಹಾಗಾಗಿ ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಪಿ.ಯಶೋಧಾ ನಾರಾಯಣ ಉಪಾಧ್ಯ

Live Cricket

Add Your Heading Text Here