ದೆಹಲಿ : ದೆಹಲಿಯಲ್ಲಿ ಮೋಸ್ಟ್ ವಾಂಟೆಡ್ ಉಗ್ರನ ಅರೆಸ್ಟ್ ಮಾಡಿರುವ ಘಟನೆ ನಡೆದಿದೆ. NIA, ದೆಹಲಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಸಿಸ್ ಉಗ್ರ ರಿಜ್ವಾನ್ ಅಲಿಯನ್ನ ಬಂಧಿಸಿದ್ದಾರೆ.
ಪುಣೆಯಲ್ಲಿ ನಡೆದ ಸಂಚು ಪ್ರಕರಣದಲ್ಲಿ ರಿಜ್ವಾನ್ ಅಲಿಯನ್ನು ಅರೆಸ್ಟ್ ಮಾಡಿದ್ದರು. ಆದರೆ ಅಲಿ 2023ರಲ್ಲಿ ಪುಣೆ ಪೊಲೀಸ್ ಕಸ್ಟಡಿಯಿಂದ ಎಸ್ಕೇಪ್ ಆಗಿದ್ದನು. ಈ ಹಿನ್ನೆಲೆಯಲ್ಲಿ ಪೊಲೀಸರು ರಿಜ್ವಾನ್ ತಲೆಗೆ 3 ಲಕ್ಷ ಘೋಷಣೆ ಮಾಡಿದ್ದರು.
ಇದೀಗ ದೆಹಲಿ-ಫರೀದಾಬಾದ್ ಗಡಿ ಪ್ರದೇಶದಲ್ಲಿ NIA, ದೆಹಲಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸ್ವಾತಂತ್ರ್ಯೋತ್ಸವ ಹೊತ್ತಿನಲ್ಲೇ ಶಂಕಿತ ಉಗ್ರನ ಬೇಟೆಯಾಡಿದ್ದಾರೆ. ಬಂಧಿತನ ಬಳಿ ಹಲವು ಪ್ರತಿಷ್ಠಿತ ಪ್ರದೇಶಗಳ ನಕ್ಷೆ ಪತ್ತೆಯಾಗಿದೆ. ಹೀಗಾಗಿ NIA ಅಧಿಕಾರಿಗಳು ಅಲಿಯನ್ನ ವಿಚಾರಣೆ ಮಾಡುತ್ತಿದ್ದಾರೆ. ಇನ್ನು ಹಲವು ಪ್ರತಿಷ್ಠಿತ ಪ್ರದೇಶಗಳ ನಕ್ಷೆ ಪತ್ತೆಯಾದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ದೊಡ್ಡ ಸಂಚಿಗೆ ಪ್ಲಾನ್ ಮಾಡಿದ್ನಾ ಅಲಿ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಇದನ್ನೂ ಓದಿ : ಮೈಸೂರಿನಲ್ಲಿಂದು ಕಾಂಗ್ರೆಸ್ ಬೃಹತ್ ಸಮಾವೇಶ – BJP-JDS ಹಗರಣಗಳ ಬಂಡವಾಳ ಬಿಚ್ಚಿಡ್ತಾರಾ ಸಿದ್ದು-ಡಿಕೆಶಿ?