Download Our App

Follow us

Home » ಸಿನಿಮಾ » ಮೂಡುಗಲ್ಲು ಕೇಶವನಾಥೇಶ್ವರ ದೇಗುಲಕ್ಕೆ ಭೇಟಿ ನೀಡಿದ ಜೂ.​ಎನ್​ಟಿಆರ್..!

ಮೂಡುಗಲ್ಲು ಕೇಶವನಾಥೇಶ್ವರ ದೇಗುಲಕ್ಕೆ ಭೇಟಿ ನೀಡಿದ ಜೂ.​ಎನ್​ಟಿಆರ್..!

ಉಡುಪಿ :  ಧಾರ್ಮಿಕ ಪ್ರವಾಸದಲ್ಲಿರುವ ತೆಲುಗು ಸೂಪರ್​ ಸ್ಟಾರ್ ಜೂನಿಯರ್ NTR ಕಳೆದೆರಡು ದಿನಗಳ ಹಿಂದೆ ಕೃಷ್ಣಮಠ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ  ಭೇಟಿಕೊಟ್ಟು ಪೂಜೆ ಸಲ್ಲಿಸಿದ್ದರು. ಇದೀಗ ಅಮ್ಮನ ಆಸೆ ತೀರಿಸಲು ಕುಂದಾಪುರದ ಕೆರಾಡಿ ಗ್ರಾಮದ ಮೂಡುಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ನಟ ರಿಷಬ್​​ ಶೆಟ್ಟಿ ಊರಾಗಿರುವ ಕಿರಾಡಿಗೆ ಜೂನಿಯರ್ NTR ಭೇಟಿ ನೀಡಿದ್ದಾರೆ. ಜೂ. ಎನ್‍ಟಿಆರ್ ಹಾಗೂ ಪ್ರಶಾಂತ್ ನೀಲ್ ಕುಟುಂಬವನ್ನ ಬರಮಾಡಿಕೊಂಡ ರಿಷಬ್​​ ಶೆಟ್ಟಿ ತಮ್ಮ ಊರನ್ನು ಸುತ್ತಿಸುತ್ತಾ ಕೇಶವನಾಥೇಶ್ವರ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾರೆ.

ಕೆರಾಡಿ ಗ್ರಾಮದ ಮೂಡುಗಲ್ಲು ಕೇಶವನಾಥೇಶ್ವರ ದೇವಾಲಯ ಗುಹಾಂತರ ಮಂದಿರವಾಗಿದ್ದು, ನೀರಿನಲ್ಲಿ ನಡೆದುಕೊಂಡೇ ದೇವರ ದರ್ಶನ ಪಡೆಯಬೇಕು. ಇನ್ನು ಕಾಡು, ಬಂಡೆ ನಡುವೆ ಇರುವ ಪ್ರಾಕೃತಿಕ ರಮಣೀಯತೆಗೆ ತೆಲುಗು ಸೂಪರ್​ ಸ್ಟಾರ್ ಮಾರುಹೋಗಿದ್ದಾರೆ.

ಇನ್ನು ಬೆಟ್ಟದ ಕೆಳಗೆ, ಕಾಡಿನ ನಡುವೆ ಇರುವ ಈ ವಿಶಿಷ್ಟ ದೇವಸ್ಥಾನ ಸುತ್ತಲೂ ಬಂಡೆಯೇ ಆವರಿಸಿಕೊಂಡಿದೆ. ದೇವಸ್ಥಾನದಲ್ಲಿ ಒಳಗೆ ಯಾವುದೇ ಬೆಳಕಿನ ವ್ಯವಸ್ಥೆಗಳು ಇರುವುದಿಲ್ಲ. ಮೂಡುಗಲ್ಲು ಕೇಶವನಾಥೇಶ್ವರ ಲಿಂಗಕ್ಕೆ ಬೆಳಗುವ ದೀಪದಲ್ಲಿ ದೇವರ ದರ್ಶನವಾಗುತ್ತದೆ. ಸ್ಟಾರ್ ನಟರು ಈ ವಿಶಿಷ್ಟ ಅನುಭವವನ್ನು ಕಂಡು ಆನಂದಪಟ್ಟಿದ್ದಾರೆ.

ಇದನ್ನೂ ಓದಿ : ವಿಕ್ರಾಂತ್ ರೋಣ ಬಳಿಕ ಮತ್ತೆ ಒಂದಾದ ಸುದೀಪ್-ಅನೂಪ್ : ಕುತೂಹಲ ಹೆಚ್ಚಿಸಿದ ‘ಬಿಲ್ಲ ರಂಗ ಭಾಷಾ’ ಫಸ್ಟ್ ಝಲಕ್..!

Leave a Comment

DG Ad

RELATED LATEST NEWS

Top Headlines

ಮೈಸೂರಿನಲ್ಲಿ ಹಾಡಹಗಲೇ ಮನೆ ಕಳ್ಳತನಕ್ಕೆ ಯತ್ನ – ದೃಶ್ಯ ಸಿಸಿಟಿವಿಯಲ್ಲಿ ಸೆರೆ..!

ಮೈಸೂರು : ಮೈಸೂರಿನಲ್ಲಿ ಹಾಡುಹಗಲೇ ಮನೆಗಳ್ಳತನಕ್ಕೆ ಯತ್ನಿಸಿದ್ದ ಖದೀಮನ ಕಳ್ಳತನದ ಯತ್ನ ವಿಫಲವಾಗಿದೆ. ಜಿಲ್ಲೆಯ ಬನ್ನೂರಿನ ರಾಮದೇವರ ಬೀದಿಯಲ್ಲಿ ಜಯಮ್ಮ ಎಂಬುವರಿಗೆ ಸೇರಿದ ಮನೆಯಲ್ಲಿ ಕಳ್ಳತನದ ಯತ್ನ

Live Cricket

Add Your Heading Text Here