ಬೆಂಗಳೂರು : ಜೀವ ಬೆದರಿಕೆ, ಜಾತಿ ನಿಂದನೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ MLA ಮುನಿರತ್ನ ಪೊಲೀಸರ ಬಂಧನದ ಬೆನ್ನಲ್ಲೇ ಮಂಕಾಗಿದ್ದಾರೆ. ಅಶೋಕ್ ನಗರ ಠಾಣೆಗೆ ಕರೆತಂದು ಮಧ್ಯರಾತ್ರಿ ವಿಚಾರಣೆ ನಡೆಸಲಾಗಿದೆ.
ರಾತ್ರಿ 10.30ರಿಂದ 1.30ರ ವರೆಗೆ ಸತತ 3 ಗಂಟೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಶೇಷಾದ್ರಿಪುರಂ ಎಸಿಪಿ ಪ್ರಕಾಶ್ ಅವರು ಮುನಿರತ್ನರನ್ನು ಎನ್ಕ್ವೈರಿ ಮಾಡಿದ್ದಾರೆ. ಜೀವ ಬೆದರಿಕೆ, ಜಾತಿ ನಿಂದನೆ ಹಿನ್ನೆಲೆ ಡಬಲ್ FIR ದಾಖಲಾಗಿತ್ತು. ಪೊಲೀಸರ ವಿಚಾರಣೆ ವೇಳೆ ನಾನೇನು ಮಾಡಿಲ್ಲ.. ಇದೆಲ್ಲ ಷಡ್ಯಂತ್ರ ಎಂದು ಹೇಳಿದ್ದಾರೆ.
ತಡರಾತ್ರಿ ಜಡ್ಜ್ ಮನೆ ಮುಂದೆ ಕರೆದೊಯ್ಯುವಾಗ ಮುನಿರತ್ನ ಅವರು ಮೌನಕ್ಕೆ ಶರಣಾಗಿದ್ದರು. ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗಲೂ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ, ಇದೆಲ್ಲ ಷಡ್ಯಂತ್ರ ಎಂದು ಹೇಳಿದ್ದಾರೆ. 4 ಗಂಟೆಗೆ ಜಡ್ಜ್ ಮನೆಯಿಂದ ಬಂದ ನಂತರ ಪೊಲೀಸರು ರೆಸ್ಟ್ ಮಾಡಲು ಬಿಟ್ಟಿದ್ದಾರೆ. ಈ ವೇಳೆ ಸರಿಯಾಗಿ ನಿದ್ರೆ ಮಾಡದೇ ಗಾಢ ಯೋಚನೆಗೆ ಜಾರಿದ್ದರು.
ಇದನ್ನೂ ಓದಿ : ಜೀವ ಬೆದರಿಕೆ, ಜಾತಿ ನಿಂದನೆ ಪ್ರಕರಣ – MLA ಮುನಿರತ್ನ ಎರಡು ದಿನ ಪೊಲೀಸ್ ಕಸ್ಟಡಿಗೆ..!