‘ಬಿಗ್ ಬಾಸ್ ಕನ್ನಡ ಸೀಸನ್ 11’ ಶುರುವಾಗಿ ಈಗಾಗಲೇ ಒಂದು ದಿನ ಕಳೆದಿದೆ. ಪ್ರಾರಂಭದಲ್ಲೇ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಸಾಕಷ್ಟು ಗೊಂದಲ ಏರ್ಪಟ್ಟಿದ್ದು, ಸಾಲು ಸಾಲು ರೂಲ್ಸ್ಗಳನ್ನು ಬ್ರೇಕ್ ಮಾಡಲಾಗಿದೆ. ಇದರಿಂದ ಮನೆ ಮಂದಿ ಸಾಕಷ್ಟು ಸಂಕಷ್ಟ ಅನುಭವಿಸಬೇಕಾಗಿದೆ.
ಅಚ್ಚರಿ ಸಂಗತಿ ಎಂದರೆ ನೀರಿನಿಂದಾಗಿ ಸ್ವರ್ಗದ ನಿವಾಸಿಗಳು ಬಿಗ್ ಬಾಸ್ ಕೊಟ್ಟ ಲಕ್ಷುರಿ ಬಜೆಟ್ ಕಳೆದುಕೊಂಡಿದ್ದಾರೆ. ಪಾಲಿಗೆ ಬಂದದ್ದನ್ನು ಜೋಪಾನವಾಗಿಟ್ಟುಕೊಂಡು, ಹೊಟ್ಟೆ ತಣಿಸುವ ಬದಲು ಇದೀಗ ಸಿಕ್ಕ ಬಜೆಟನ್ನು ಕಳೆದುಕೊಂಡಿದ್ದಾರೆ.
ನರಕದ ನಿವಾಸಿಗಳು ನೀರು ಕೇಳಿದರೆಂದು ಸ್ವರ್ಗದ ನಿವಾಸಿಗಳು ನೀರು ಕೊಟ್ಟಿದ್ದಾರೆ. ಅಡ್ವಕೇಟ್ ಜಗದೀಶ್ ಸ್ವರ್ಗದ ನಿವಾಸಿಯಾಗಿದ್ದು, ನರಕದ ನಿವಾಸಿಗಳು ಗಂಟಲು ನೋವು ನೀರು ಬೇಕು ಎಂಬ ಕಾರಣಕ್ಕೆ ನಿಯಮ ಉಲ್ಲಂಘಿಸಿದ್ದಾರೆ. ಜಗದೀಶ್ ಅವರಿಗೆ ನೀರನ್ನು ಕೊಟ್ಟಿದ್ದಾರೆ. ಇದನ್ನು ಕಂಡ ಬಿಗ್ ಬಾಸ್.. ಸ್ವರ್ಗ ನಿವಾಸಿಗಳಿಗೆ ಮೀಸಲಿರುವ ಲಕ್ಷುರಿ ಸಾಮಗ್ರಿಗಳಾದ ಪನೀರ್, ಚಿಪ್ಸ್, ಕಾಫಿ, ಐಸ್ಕ್ರೀಮ್, ಚಾಕೋಲೇಟ್, ತುಪ್ಪ ಸೇರಿ ಎಲ್ಲಾ ಲಕ್ಷುರಿ ವಸ್ತುಗಳನ್ನು ಈಗಲೇ ಹಿಂತಿರುಗಿಸಬೇಕು, ಇದು ಬಿಗ್ ಬಾಸ್ ಆದೇಶ ಎಂದಿದ್ದಾರೆ.
ಇದಾದ ಬಳಿಕ ತಾವೇ ಇದರ ಜವಾಬ್ದಾರಿ ಹೊತ್ತುಕೊಳ್ಳೋದಾಗಿ ಜಗದೀಶ್ ಹೇಳಿದರು. ಆದರೆ, ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೋದಮೇಲೆ ಏನು ಪ್ರಯೋಜನ ಎನ್ನುವ ಮಾತು ಮನೆಯವರಿಂದ ಕೇಳಿ ಬಂತು. ಸದ್ಯ, ಜಗದೀಶ್ ವಿರುದ್ಧ ಎಲ್ಲರೂ ಸಿಟ್ಟಾಗಿದ್ದಾರೆ.
ಈ ಶಿಕ್ಷೆಯನ್ನು ಯಾರೂ ಊಹಿಸಿರಲಿಲ್ಲ. ಸದ್ಯ ಸಿಕ್ಕ ಪಂಚಾಮೃತವನ್ನು ಮರಳಿ ದೇವರಿಗೆ ನೀಡುವಂತಹ ಪರಿಸ್ಥಿತಿ ಸ್ವರ್ಗದ ನಿವಾಸಿಗಳಿಗೆ ಎದುರಾಗಿದೆ. ಒಬ್ಬರಿಂದಾಗಿ ಬಜೆಟ್ ಕಳೆದುಕೊಂಡು ಸಪ್ಪೆ ಮೋರೆ ಹಾಕಿದ್ದಾರೆ. ಇನ್ಮುಂದೆ ಸ್ವರ್ಗದ ನಿವಾಸಿಗಳಿಗೆ ನೀರೇ ಗತಿ ಎಂಬಂತಾಗಿದೆ.
ಇದನ್ನೂ ಓದಿ : ಲಡ್ಡು ವಿವಾದ : ಅಕ್ಟೋಬರ್ 3ಕ್ಕೆ ಪವನ್ ಕಲ್ಯಾಣ್ ತಿರುಮಲಕ್ಕೆ ಭೇಟಿ..!