Download Our App

Follow us

Home » ರಾಜ್ಯ » ಮಿಸ್ & ಮಿಸೆಸ್ ಇಂಡಿಯಾ ಕರ್ನಾಟಕ 2024 ಫ್ಯಾಷನ್‌ ಶೋ – ಕಿರೀಟ ಗೆದ್ದ ಸುಂದರಿಯರು ಯಾರ್‍ಯಾರು ಗೊತ್ತಾ?

ಮಿಸ್ & ಮಿಸೆಸ್ ಇಂಡಿಯಾ ಕರ್ನಾಟಕ 2024 ಫ್ಯಾಷನ್‌ ಶೋ – ಕಿರೀಟ ಗೆದ್ದ ಸುಂದರಿಯರು ಯಾರ್‍ಯಾರು ಗೊತ್ತಾ?

ಮಿಸ್ & ಮಿಸೆಸ್ ಇಂಡಿಯಾ ಕರ್ನಾಟಕ 2024ರ 8ನೇ ಆವೃತ್ತಿಯ ಗ್ಯ್ರಾಂಡ್‌ ಫಿನಾಲೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಜರುಗಿತು. ವಿವಾಹಿತ ಮಹಿಳೆಯರ ಪ್ರತಿಭಾ ಪ್ರದರ್ಶನಕ್ಕೆ ಇದೊಂದು ಉತ್ತಮ ವೇದಿಕೆಯಾಗಿ ಹೊರಹೊಮ್ಮಿತು.

ನಗರದ ಕಿಂಗ್ಸ್‌ ಮೆಡೋಸ್‌ನಲ್ಲಿ ಮಿಸ್ & ಮಿಸೆಸ್ ಇಂಡಿಯಾ ಕರ್ನಾಟಕ 2024ರ 8ನೇ ಆವೃತ್ತಿಯ ಫ್ಯಾಷನ್‌ ಶೋ ಅನ್ನು ಆ.29 ರಿಂದ ಮೂರು ದಿನಗಳ ಕಾಲ ವಿವಿಧ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ನಡೆಸಲಾಯಿತು. ಆ.31ರಂದು ಸಂಜೆ ಗ್ರ್ಯಾಂಡ್‌ ಫಿನಾಲೆ ನಡೆದಿದ್ದು, ಮಿಸ್ ಇಂಡಿಯಾ ಇಂಡಿಪೆಂಡೆಂಟ್ ಇಂಟರ್ ನ್ಯಾಷನಲ್ ಗೆಲುವಿನ ಕಿರೀಟವನ್ನು ಡಾ.ಅಕ್ಷತಾ ಅಶೋಕ್ ಕುಲಕರ್ಣಿ, ಮಿಸೆಸ್ ಇಂಡಿಯಾ ಇಂಡಿಪೆಂಡೆಂಟ್ ಇಂಟರ್ ನ್ಯಾಷನಲ್ ಕಿರೀಟವನ್ನು ಡಾ.ನಿಶಿತಾ ಶೆಟ್ಟಿಯಾನ್, ಮಿಸೆಸ್ ಇಂಡಿಯಾ ಅರ್ಥ್ ಇಂಟರ್‌ನ್ಯಾಶನಲ್ ಕಿರೀಟವನ್ನು ಡಾ. ಶ್ರುತಿ ಬಲ್ಲಾಳ್ ಮತ್ತು ಕ್ಲಾಸಿಕ್ ಮಿಸೆಸ್ ಇಂಡಿಯಾ ಅರ್ಥ್ ಇಂಟರ್‌ನ್ಯಾಶನಲ್ ಗೆಲುವಿಗೆ ಪ್ರಗತಿ ಅನೂನ್ ಪಾತ್ರರಾದರು.

ರಾಜ್ಯದ ವಿವಿಧೆಡೆಗಳಿಂದ ಸುಮಾರು 35 ಸ್ಪರ್ಧಿಗಳು ಈ ಫ್ಯಾಷನ್‌ ಶೋನಲ್ಲಿ ಪಾಲ್ಗೊಂಡಿದ್ದು, ಮೂರು ದಿನಗಳ ಸ್ಪರ್ಧೆಯಲ್ಲಿ ಸ್ಪರ್ಧಿಗಳು ತಮ್ಮ ಪ್ರತಿಭೆಯನ್ನು ತೋರಿದರು. ಅಲ್ಲದೆ ಸ್ಪರ್ಧಿಗಳು ಲಗೋರಿ, ಖೋ ಖೋ ಮತ್ತು ಗಿಲ್ಲಿ ದಾಂಡು ಅಂತಹ ಸಾಂಪ್ರದಾಯಿಕ ಭಾರತೀಯ ಆಟಗಳಲ್ಲಿ ತೊಡಗಿಸಿಕೊಂಡು, ತಮ್ಮ ಕ್ರೀಡಾ ಮನೋಭಾವ ಪ್ರದರ್ಶಿಸಿದರು.

ಈ ಕುರಿತು ಮಾಹಿತಿ ಹಂಚಿಕೊಂಡ ಕಾರ್ಯಕ್ರಮದ ಮುಖ್ಯ ಆಯೋಜಕರಾದ ಶ್ರೀಮತಿ ಪ್ರತಿಭಾ ಸೌಂಶಿಮಠ (ಮಿಸೆಸ್‌ ಇಂಡಿಯಾ – ಕರ್ನಾಟಕದ ನಿರ್ದೇಶಕಿ, ಮಿಸೆಸ್‌ ಇಂಡಿಯಾದ ರಾಷ್ಟ್ರೀಯ ನಿರ್ದೇಶಕಿ) ಅವರು, ‘ಮಿಸ್ & ಮಿಸೆಸ್ ಇಂಡಿಯಾ ಕರ್ನಾಟಕ ಕಾರ್ಯಕ್ರಮವು ವೈವಿಧ್ಯತೆಯಲ್ಲಿ ಪ್ರತಿಭೆಯನ್ನು ಅರಸುವ ಏಕೈಕ ಸೌಂದರ್ಯ ಸ್ಪರ್ಧೆಯಾಗಿದೆ. ಕಳೆದ 9 ವರ್ಷಗಳಿಂದ ಈ ಸ್ಪರ್ಧೆಯನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಎಲ್ಲಾ ವಯೋಮಾನದ ಮಹಿಳೆಯರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಒದಗಿಸಲಾಗಿದೆʼ ಎಂದರು.

ಕಾರ್ಯಕ್ರಮದ ತೀರ್ಪುಗಾರರಾದ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಅವಿನಾಶ್‌, ಜಯಂತಿ ಬಲ್ಲಾಳ್‌, ಕರ್ನಲ್‌ ಡಾ. ಎಂ.ಸಿ ಶರ್ಮಾ ವಿಜೇತರನ್ನು ಆಯ್ಕೆ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೀಡಿಯಾ ಕನೆಕ್ಟ್‌ ಸಿಇಒ ದಿವ್ಯಾ ರಂಗೇನಹಳ್ಳಿ, ಹಿರಿಯ ನಟ ಮೂಗು ಸುರೇಶ್, ಪ್ರೀಮಿಯಂ ಲಾಂಜ್‌ವೇರ್ ಬ್ರ್ಯಾಂಡ್ ಯೆಲ್ಲೊ ಬ್ಲೂಮ್‌ನ ಸ್ಥಾಪಕರಾದ ಶುಭ್ರ,
ಅಂತಾರಾಷ್ಟ್ರೀಯ ಡಾಗ್‌ ಬ್ರೀಡರ್‌ ಹಾಗೂ ಕಡಬಮ್‌ ಪ್ರತಿಷ್ಠಾನದ ಸಿಇಒ ಸತೀಶ್‌ ಕಡಬಮ್‌, ಪ್ರಭು ಮೇತಿಮಠ್‌, ಶ್ರೀಧರ್‌ ನಾಯಕ್‌, ನಟ ಭಾರ್ಗವ್‌, ನಿರ್ದೇಶಕ ಲೋಕೇಶ್‌ ಮತ್ತು ಆದತ್‌, ಕೊರಿಯೋಗ್ರಾಫರ್‌ ರಾಜ್‌ಕಮಲ್‌ ಹಾಗೂ ಕಿಂಗ್ಸ್‌ ಮೆಡೋಸ್‌ನ ಜೋಸೆಫ್‌ ಪ್ರಭು ಉಪಸ್ಥಿತರಿದ್ದರು.

ಮಿಸ್ & ಮಿಸೆಸ್ ಇಂಡಿಯಾ ಕರ್ನಾಟಕ 2024ರ ವಿಜೇತರ ಪಟ್ಟಿ ಇಲ್ಲಿದೆ :

  • ಮಿಸ್ ಇಂಡಿಪೆಂಡೆಂಟ್ ಇಂಟರ್ ನ್ಯಾಷನಲ್ ವಿಜೇತೆ ಡಾ.ಅಕ್ಷತಾ ಅಶೋಕ್ ಕುಲಕರ್ಣಿ
  • ಮಿಸೆಸ್ ಇಂಡಿಪೆಂಡೆಂಟ್ ಇಂಟರ್ ನ್ಯಾಷನಲ್ ವಿಜೇತೆ ಡಾ.ನಿಶಿತಾ ಶೆಟ್ಟಿಯಾನ್
  • ಮಿಸೆಸ್ ಅರ್ಥ್ ಇಂಟರ್‌ನ್ಯಾಶನಲ್ – ಡಾ. ಶ್ರುತಿ ಬಲ್ಲಾಳ್
  • ಕ್ಲಾಸಿಕ್ ಮಿಸೆಸ್ ಅರ್ಥ್ ಇಂಟರ್‌ನ್ಯಾಶನಲ್ – ಪ್ರಗತಿ ಅನೂನ್

 

  • ಮಿಸ್ ಇಂಡಿಯಾ ಕರ್ನಾಟಕ 2024ರ ವಿಜೇತೆ ವಿನಯ ನಿತ್ಯಾನಂದ,
  • ಮೊದಲ ರನ್ನರ್ ಅಪ್ – ದೀಶಾಲ್ ಗ್ಲೋರಿಯಾ ಟೌರೊ
  • ಎರಡನೇ ರನ್ನರ್ ಅಪ್- ಕೀರ್ತಿ ಚಾಮರಾಜ

 

  • ಮಿಸೆಸ್ ಇಂಡಿಯಾ ಕರ್ನಾಟಕ 2024ರ ವಿಜೇತೆ ದೇವಿ ಶ್ರೀರಾಮ್,
  • ಮೊದಲ ರನ್ನರ್ ಅಪ್- ಡಾ. ರಶ್ಮಾ ಮೋಹಿತ್ ಶೆಟ್ಟಿ
  • ಎರಡನೇ ರನ್ನರ್ ಅಪ್- ವಿದ್ಯಾ ಸಂಪತ್ ಕರ್ಕೇರ
  • ಮೂರನೇ ರನ್ನರ್ ಅಪ್ – ಸ್ವಾತಿ ರಾವ್ ಶರತ್
  • ನಾಲ್ಕನೇ ರನ್ನರ್ ಅಪ್ – ಸಾಕ್ಷಿ ಧೀಮಾನ್

 

  • ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ 2024ರ ವಿಜೇತೆ ಸಬಿತಾ ರಂಜಿತಾ ರಾವ್,
  • ಮೊದಲ ರನ್ನರ್ ಅಪ್ – ಡಾ. ಶಾಂತ ಕುಮಾರಿ ಎಸ್‌,
  • ಎರಡನೇ ರನ್ನರ್ ಅಪ್ – ರೂಪತಾರಾ ಶಿವಾಜಿ ಸಾಂಗ್ಲಿಕರ್,
  • ಮೂರನೇ ರನ್ನರ್ ಅಪ್ – ಡಾ. ಅರ್ಚನಾ ಭುಟ್,
  • ನಾಲ್ಕನೇ ರನ್ನರ್ ಅಪ್- ಪ್ರಿಯಾ ರಾಜು ಅಯ್ಯಂಗಾರ್

 

  • ಸೂಪರ್ ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ 2024ರ ವಿಜೇತೆ ನಂದಿನಿ ವಿ. ಕಾಮತ್,
  • ಮೊದಲ ರನ್ನರ್-ಅಪ್ – ಸಿಎಂ ಕಾವೇರಮ್ಮ,
  • ಎರಡನೇ ರನ್ನರ್‌ ಅಪ್‌ – ಮಾಲಿನಿ ಸತೀಶ್ ಅನ್ವೇಕರ್

ಇದನ್ನೂ ಓದಿ : ಸಂಗೀತ ಲೋಕದಲ್ಲಿ ಅಜನೀಶ್‌ ಲೋಕನಾಥ್ ಹೊಸ ಮೈಲಿಗಲ್ಲು- 50 ಚಿತ್ರಗಳಿಗೆ ಸಂಗೀತ ನಿರ್ದೇಶಕ..!

Leave a Comment

DG Ad

RELATED LATEST NEWS

Top Headlines

ಮಾಜಿ ಮಂತ್ರಿ ಮುನಿರತ್ನ ವಿರುದ್ಧ ತಿರುಗಿಬಿದ್ದ ಒಕ್ಕಲಿಗರು – ಕಠಿಣ ಕ್ರಮಕ್ಕೆ ಆಗ್ರಹ..!

ಬೆಂಗಳೂರು : ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಕೇಸ್‌ನಲ್ಲಿ ಶಾಸಕ ಮುನಿರತ್ನ ಬಂಧನವಾಗಿದೆ. ಇದೀಗ ಒಕ್ಕಲಿಗ ಸಮುದಾಯ ಮತ್ತು ಒಕ್ಕಲಿಗ ಹೆಣ್ಣು ಮಕ್ಕಳಿಗೆ ಅಪಮಾನ  ಮಾಡಿರುವುದನ್ನು

Live Cricket

Add Your Heading Text Here