ಬೆಂಗಳೂರು : ವಿಜಯಪುರ ಲೋಕಸಭೆ ಬಿಜೆಪಿ ಟಿಕೆಟ್ ಡೀಲ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ ಎಂಬುದು ಬಯಲಾಗಿದೆ. ಅಸಲಿಗೆ ಪ್ರಹ್ಲಾದ್ ಜೋಶಿ ಅವರಿಗೆ ಸಹೋದರಿಯೇ ಇರುವುದಿಲ್ಲ. ಇದು ಜೋಶಿ ಅವರಿಗೆ ವ್ಯವಸ್ಥಿತವಾಗಿ ಕಳಂಕ ಹಚ್ಚುವ ಷಡ್ಯಂತ್ರ ಅನ್ನುವುದು ಮೇಲ್ನೋಟಕ್ಕೆ ದೃಢವಾಗುತ್ತಿದೆ.
ಸಹೋದರ ಗೋಪಾಲ್ ಜೋಶಿ, ಅವರ ಪುತ್ರ, ಸೋದರಿ ವಿರುದ್ಧ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಜೋಶಿಯವರ ಉದ್ಯಮ, ವ್ಯವಹಾರಕ್ಕೂ ಸೋದರನಿಗೂ ಸಂಬಂಧವಿಲ್ಲ. 12 ವರ್ಷದ ಹಿಂದೆಯೇ ಜೋಶಿ ವ್ಯಾವಹಾರಿಕ ಸಂಬಂಧ ಕಡಿದುಕೊಂಡಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದರು.
2012ರಲ್ಲೇ ಅಫಿಡವಿಟ್ ಮಾಡಿಸಿದ್ದ ಪ್ರಲ್ಹಾದ ಜೋಶಿಯವರು, ಮೂವರು ಸೋದರರು ಬೇರೆಬೇರೆಯಾಗಿಯೇ ವಾಸಿಸುತ್ತಿದ್ದೇವೆ. ಒಬ್ಬರ ವ್ಯವಹಾರಕ್ಕೂ ಮತ್ತೊಬ್ಬರಿಗೂ ಯಾವುದೇ ಸಂಬಂಧವಿಲ್ಲ. ಅವರವರ ಉದ್ಯಮ ಆಸ್ತಿ, ವಹಿವಾಟಿಗೆ ಅವರೇ ಜವಾಬ್ದಾರರು ಎಂದು ಹೇಳಿದ್ದರು. ಜೋಶಿಯವರ ಪರವಾಗಿ ನ್ಯಾಯವಾದಿ ಅರುಣ ಜೋಶಿ ಅವರು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದರು. ಪತ್ರಿಕೆಗಳಲ್ಲಿ ಜಾಹೀರಾತೂ ನೀಡಿದ್ದರು. ಹೀಗಾಗಿ, ಬೆಂಗಳೂರಿನಲ್ಲಿ ದಾಖಲಾದ ಪ್ರಕರಣಕ್ಕೂ ಜೋಶಿಗೂ ಸಂಬಂಧವಿಲ್ಲ ಎಂಬುದು ತಿಳಿದು ಬಂದಿದೆ.
ಇನ್ನು ಜೋಶಿ ಹೆಸರು ಹೇಳಿಕೊಂಡು ಗೋಪಾಲ್ ಜೋಶಿ ಡೀಲ್ ಮಾಡಿದ ಆರೋಪ ಬಗ್ಗೆ ಸ್ಪಷ್ಟನೆ ನೀಡಿದ ಪ್ರಹ್ಲಾದ್ ಜೋಶಿ ಆಪ್ತ ವಲಯ, 12 ವರ್ಷಗಳ ಹಿಂದೆಯೇ ಸಹೋದರನ ಬಗ್ಗೆ ಜಾಹೀರಾತಿನಲ್ಲಿ ತಿಳಿಸಲಾಗಿತ್ತು. ಈ ಪ್ರಕರಣಕ್ಕೂ ಪ್ರಲ್ಹಾದ್ ಜೋಶಿಯವರಿಗೂ ಸಂಬಂಧವೇ ಇರುವುದಿಲ್ಲ. ಗೋಪಾಲ್ ಜೋಶಿಯೇ ವಂಚನೆಗೆ ಹೊಣೆಗಾರರಾಗಿರುತ್ತಾರೆ. ಈ ಪ್ರಕರಣದ ಮೂಲಕ ಪ್ರಹ್ಲಾದ್ ಜೋಶಿಯವರಿಗೆ ಕಳಂಕ ತರಲು ಕೆಲವರು ಷಡ್ಯಂತ್ರ ಮಾಡ್ತಿದ್ದಾರೆ ಎಂದು ಪ್ಲಲ್ಹಾದ್ ಜೋಶಿ ಆಪ್ತ ವಲಯ ಕಿಡಿಕಾರಿದೆ.
ಇದನ್ನೂ ಓದಿ : 3-4 ಸಾವಿರ ಸೈಟ್ಗಳ ಅಕ್ರಮ ಆಗಿದೆ, ED ಯಾವ ದಾಖಲೆ ಸಂಗ್ರಹ ಮಾಡುತ್ತೆ ನೋಡೋಣ – ಆರ್.ಅಶೋಕ್..!