Download Our App

Follow us

Home » ರಾಜಕೀಯ » ಸಿಎಂ ಸಿದ್ದರಾಮಯ್ಯಗೆ ದರ್ಶನ್​​ ರಾಜಾತಿಥ್ಯ ರಿಪೋರ್ಟ್​ ನೀಡಿದ ಸಚಿವ ಪರಮೇಶ್ವರ್​​​..!

ಸಿಎಂ ಸಿದ್ದರಾಮಯ್ಯಗೆ ದರ್ಶನ್​​ ರಾಜಾತಿಥ್ಯ ರಿಪೋರ್ಟ್​ ನೀಡಿದ ಸಚಿವ ಪರಮೇಶ್ವರ್​​​..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್, ಜೈಲಿನಲ್ಲೂ ಬಿಂದಾಸ್ ಆಗಿ ಕಾಲ ಕಳೆಯುತ್ತಿದ್ದಾರೆ. ಜೈಲಿನ ಒಳಗೆ ಕಾಫಿ ಕುಡೀತಾ, ಸಿಗರೇಟ್ ಹಿಡಿದಿರುವ ದರ್ಶನ್​ ಫೋಟೋ ವೈರಲ್​ ಆಗಿದ್ದು, ಇದು ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಈ ಹಿನ್ನೆಲೆ ಗೃಹ ಸಚಿವ ಡಾ.ಜಿ.ಪರಮೇಶ್ವರ್​​​ ಅವರು ನಿನ್ನೆಯಷ್ಟೇ ಪರಪ್ಪನ ಅಗ್ರಹಾರ ಜೈಲ್​ಗೆ ಭೇಟಿ ನೀಡಿದ್ದರು.

ಇದೀಗ ಡಾ.ಜಿ.ಪರಮೇಶ್ವರ್​​​ ಅವರು ಸಿಎಂ ಸಿದ್ದರಾಮಯ್ಯಗೆ ದರ್ಶನ್​​ ರಾಜಾತಿಥ್ಯದ ರಿಪೋರ್ಟ್​ ನೀಡಿದ್ದಾರೆ. ಪರಮೇಶ್ವರ್ ಅವರು ನಿನ್ನೆ ಪರಪ್ಪನ ಅಗ್ರಹಾರ ಜೈಲ್​ಗೆ ಭೇಟಿ ನೀಡಿ, ಪೂರ್ತಿ​ ಪರಿಶೀಲನೆ ಮಾಡಿಕೊಂಡು ಬಂದಿದ್ದರು. DG-IGP ಅಲೋಕ್​​ ಮೋಹನ್​​, ಕಾರಾಗೃಹ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ, ಕಾರಾಗೃಹ ಡಿಐಜಿ ಸೋಮಶೇಖರ್​​​​ ಮತ್ತಿತರರಿಂದ ಮಾಹಿತಿ ಸಂಗ್ರಹಿಸಿದ್ದಾರೆ.

ಸಿಎಂ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯನನ್ನು ಭೇಟಿಯಾಗಿ​​ ಹಿರಿಯ ಅಧಿಕಾರಿಗಳು ನೀಡಿದ ಮಾಹಿತಿ ಸಮೇತ ವಿವರಿಸಿದ್ದಾರೆ. ಜೈಲುಗಳಲ್ಲಿ ಸುಧಾರಣೆ ತರಲು ಏನೇನ್​ ಮಾಡ್ಬೇಕು, ಇಂಥಾ ಘಟನೆ ಮರುಕಳಿಸದಂತೆ ತಡೆಯೋದು ಹೇಗೆ..? ರಾಜಾತಿಥ್ಯ ಕೊಟ್ಟವರ ವಿರುದ್ಧ ಕ್ರಮ ಕೈಗೊಳ್ಳೋ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ರಾಜಾತಿಥ್ಯದ ರಿಪೋರ್ಟ್ ಕೇಳಿದ್ದಾರೆ. ಡಾ.ಜಿ.ಪರಮೇಶ್ವರ್​​​ ಕಾರಾಗೃಹದಲ್ಲಿ ಕಂಡುಬಂದ ಲೋಪದೋಷಗಳ ಕುರಿತು ಮಾಹಿತಿ ನೀಡಿದ್ದಾರೆ.

ದರ್ಶನ್ ಹಾಗೂ ಇತತರರನ್ನು ಬೇರೆ ಜೈಲ್​​ಗೆ ಶಿಫ್ಟ್ ಮಾಡಲು ಸಿಎಂ ಸೂಚಿಸಿದ್ದರು. ಹಾಗಾಗಿ ಡಾ.ಜಿ.ಪರಮೇಶ್ವರ್ ಜೊತೆ ಯಾವ ಕಾರಾಗೃಹಕ್ಕೆ ಸ್ಥಳಾಂತರ ಮಾಡಬೇಕು ಎಂಬ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ : ತುಮಕೂರು : ದೇವರ ಕಾರ್ಯಕ್ಕೆ ಮಾಡಿದ್ದ ಪ್ರಸಾದ ಸೇವಿಸಿ ಓರ್ವ ಮಹಿಳೆ ಸಾವು, 6 ಮಂದಿ ಆಸ್ಪತ್ರೆಗೆ ದಾಖಲು..!

Leave a Comment

DG Ad

RELATED LATEST NEWS

Top Headlines

ಮಾಜಿ ಮಂತ್ರಿ ಮುನಿರತ್ನ ವಿರುದ್ಧ ತಿರುಗಿಬಿದ್ದ ಒಕ್ಕಲಿಗರು – ಕಠಿಣ ಕ್ರಮಕ್ಕೆ ಆಗ್ರಹ..!

ಬೆಂಗಳೂರು : ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಕೇಸ್‌ನಲ್ಲಿ ಶಾಸಕ ಮುನಿರತ್ನ ಬಂಧನವಾಗಿದೆ. ಇದೀಗ ಒಕ್ಕಲಿಗ ಸಮುದಾಯ ಮತ್ತು ಒಕ್ಕಲಿಗ ಹೆಣ್ಣು ಮಕ್ಕಳಿಗೆ ಅಪಮಾನ  ಮಾಡಿರುವುದನ್ನು

Live Cricket

Add Your Heading Text Here